ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

28 ನೆಯ ದಿನದ ಶರಣ ಮಾಲಿಕೆಯಲ್ಲಿ ಡಾ. ಸರಸ್ವತಿ ಪಾಟೀಲ್ ಅವರು ಸೊಪ್ಪಿನ ಬಸವಣ್ಣ ಶರಣರ ಬಗೆಗೆ ಅತ್ಯಂತ ವೈಚಾರಿಕತೆ ಮತ್ತು ಸಂಶೋಧನಾತ್ಮಕ ನಿಲುವಿನಿಂದ ಮಾತನಾಡಿದರು.
ಸಿದ್ದನoಜೇಶ ಕವಿ ತಮ್ಮ ಶ್ರೀ ಗುರುರಾಜ ಚರಿತ್ರೆಯಲ್ಲಿ ಶಿವಶರಣರ ಕಥೆಗಳನ್ನು ಬರೆಯುವಾಗ ಸೊಪ್ಪಿನ ಬಸವಣ್ಣನವರ ಬಗೆಗೆ ಹರ ಭಕ್ತ,ಸುಜ್ಞಾನಿ, ಸುಗುಣಿ, ಭಕ್ತಿ ಪ್ರೇಮಿ, ಷಡ್ವರ್ಗ ಜಯಿಸಿದವರು, ಪರಮ ಪಾವನ, ಘನಮಹಿಮ, ಸರ್ವಜ್ಞ, ಶರಣ ಸಂತಾನ, ಮಹಾಮಹಿಮ ಎಂದು ಬರೆದದ್ದನ್ನು ಹಂಚಿಕೊಡರು
ಸೊಪ್ಪಿನ ಬಸವಣ್ಣನವರು ಒಕ್ಕಲುತನವೇ ಆಧಾರವಾದ ಕುಟುಂಬದಿಂದ ಬಂದವರು, ಅವರ ತಂದೆ-ತಾಯಿ ನಂದಿ ಬಸವಣ್ಣನವರನ್ನು ಪೂಜಿಸುತ್ತಿದ್ದುದರ ಫಲದಿಂದ ಹುಟ್ಟಿದ ಮಗನಿಗೆ ಬಸವಣ್ಣ ಎಂದು ನಾಮಕರಣ ಮಾಡಿದ್ದು, ಸೊಪ್ಪಿನ ಬಸವಣ್ಣನವರಿಗೆ ಪಶುಪಾಲನೆಯೇ ಇಷ್ಟವಾದ ಕಾಯಕವಾಗಿತ್ತು. ದನಕರುಗಳ ಮೇಲೆ ಅವರಿಗೆ ವಿಶೇಷ ಪ್ರೀತಿ, ಕಾಡು ಮೇಡು ಅಲೆದು ಹಸಿರುಮೇವು ತಂದು ಯಾವ ಭೇದ ಭಾವವಿಲ್ಲದೆ ಎಲ್ಲ ಪಶುಗಳಿಗೆ ಹುಲ್ಲನ್ನು ನೀಡುತ್ತಿದ್ದರು. ನೀರನ್ನು ಒದಗಿಸುತ್ತಿದ್ದರು ಎಂದು ಹೇಳುತ್ತಾ, ಹೀಗಾಗಿ ಅವರಿಗೆ ಸೊಪ್ಪಿನ ಬಸವಣ್ಣ ಎಂದು ಹೆಸರು ಬಂದಿರಬಹುದು ಎಂದು ತಿಳಿಸುತ್ತಾ, ನಂತರ ಕಲ್ಯಾಣಕ್ಕೆ ಹೋಗಿ
ಬಸವಣ್ಣನವರ ಅನುಭಾವ ಕೇಳುತ್ತ, ವೈದಿಕರು ಮತ್ತು ಜೈನರ ವಿರುದ್ಧ ಹೋರಾಟ ನಡೆಸಿದ್ದನ್ನು, ” ನಿವೃತ್ತಿ ಸಂಗಯ್ಯ” ಅಂಕಿತನಾಮದ ಜೊತೆಗೆ ಅವರ ಮೂರು ವಚನಗಳು ಸಿಕ್ಕಿವೆ ಎನ್ನುವುದನ್ನು ತಿಳಿಸಿದರು.
ಒಮ್ಮೆ ಶರಣತತ್ವ ಒಪ್ಪಿಕೊಂಡ ಮೇಲೆ ಯಾವುದೇ ಶಿಷ್ಟಾಚಾರಗಳನ್ನು ಪಾಲಿಸಬಾರದು ಎನ್ನುವುದು, ಯಾವುದೇ ಕೆಲಸ ಮಾಡಲಿ ಎಲ್ಲರಿಗೂ ಒಂದೇ ಫಲ ದೊರೆಯಬೇಕು ಎಂಬುದು ಅವರ ಉದ್ದೇಶವಾಗಿತ್ತು. ಹುಟ್ಟು ಮುಖ್ಯವಲ್ಲ ಬದುಕು ಮುಖ್ಯ, ಪರಧನ, ಪರಸ್ತ್ರೀ, ಪರ ಅನ್ನ ಬಯಸುವುದು ಅಪರಾಧ
ಎನ್ನುವುದು ಅವರ ಸಿದ್ಧಾಂತವಾಗಿತ್ತು ಎಂದು ಹೇಳುತ್ತಾ, ಅವರ ಭಕ್ತಿ ಪರಾಕಾಷ್ಟತೆಯಿಂದ ಕಂಗಳ ಬಸವಣ್ಣ ಎಂದು ಕರೆಸಿ ಕೊಂಡಿದ್ದು, ತಾಡೋಲೆಗಳ ಮೇಲೆ ವಚನಗಳನ್ನು ಬರೆದಿದ್ದನ್ನು ಅಚ್ಚುಕಟ್ಟಾಗಿ ಜೋಡಿಸುವ ಕೆಲಸವನ್ನು ಮಾಡುತ್ತಿದ್ದರು ಎನ್ನುವುದನ್ನು ಮಧ್ಯ ಮಧ್ಯ ವಚನಗಳ ಅರ್ಥಗಳನ್ನು ಅತ್ಯಂತ ವಿಶ್ಲೇಷಣಾತ್ಮಕವಾಗಿ ತಿಳಿಸಿಕೊಟ್ಟು “ಕಲಿಗಣನಾಥ ಸಾಂಗತ್ಯ ” ” ಭೈರವೇಶ್ವರ ಕಥಾ ಮಣಿ ಸೂತ್ರ ” ದಲ್ಲಿ ಸಿಕ್ಕ ಮಾಹಿತಿಯನ್ನು ಉಲ್ಲೇಖಿ ಸಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ದೇವಲೋಕದ ಬಟ್ಟೆಯಾದ ಬಸವಣ್ಣ, ದಲಿತರಿಗೆ ಮಹಿಳೆಯರಿಗೆ ಧ್ವನಿಯಾದ, ಲಿಂಗ ಜಂಗಮದ ಅರ್ಥವನ್ನು ತಿಳಿಸಿಕೊಟ್ಟ, ನಿನ್ನಲ್ಲೇ ಬೆಳಕಿದೆ ನೀನೇ ದೇವನಾಗಬಹುದು ಎಂದು ತಿಳಿಸಿಕೊಟ್ಟರು, ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ಎಂದು ಹೇಳುತ್ತಾ,ವಚನಗಳ ಅನುಸಂಧಾನ ಮಾಡಬೇಕು, ವಚನಗಳು ಪಚನ ಆಗಬೇಕು, ಹೊರಗಿನ ಢoಬಾಚಾರಕ್ಕೆ ಮರುಳಾಗಬಾರದು,ನಾನೇ ಮಾಡಿದೆ ಎಂಬ ಅಹಂ ಭಾವ ಮೂಡಬಾರದು ಎನ್ನುವ ಕಿವಿ ಮಾತು ಹಂಚಿಕೊಳ್ಳುತ್ತ, ಮಾನವ ಹಕ್ಕುಗಳಿಗಾಗಿ, ಸಮಾನತೆಗಾಗಿ ಹೋರಾಡಿದ, ಮೊದಲ ಪಾರ್ಲಿಮೆಂಟ್ ಕಟ್ಟಿದ ಬಸವಣ್ಣನವರು ಎನ್ನುವ ಜಾನ್ ಬಾರ್ಕೊ ಅವರ ಮಾತುಗಳನ್ನು ಹೆಮ್ಮೆಯಿಂದ ಹೇಳುತ್ತಾ, ನಮಗೆ 14 ಸಾವಿರ ವಚನಗಳು ಸಿಕ್ಕಿವೆ, ಎನ್ನುವ ಮಾಹಿತಿ ಕೊಡುತ್ತ, ಬಸವತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ವೇದಿಕೆಯಿಂದ ಬಸವಕಲ್ಯಾಣದಲ್ಲಿ ಎರಡು ದಿನದ ಕಾರ್ಯಾಗಾರವನ್ನು ಇಟ್ಟುಕೊಂಡಿದ್ದನ್ನು 172 ವಚನಕಾರರ ಬಗೆಗೆ 1,500 ಪುಟಗಳಷ್ಟು ನಮ್ಮ ಸದಸ್ಯರು ಯಾವುದೇ ಪವಾಡಗಳಿಲ್ಲದೆ ವೀರಶೈವ ಪದ ಬಳಸದೆ ಬರೆದಿದ್ದಾರೆ ಎನ್ನುವುದನ್ನು ಹೆಮ್ಮೆಯಿಂದ ಹಂಚಿಕೊಂಡರು.
ಸಂವಾದದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವಿಶೇಷ ದತ್ತಿ ಉಪನ್ಯಾಸ – 325
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 325
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಶರಣೆ ಶೋಭಾ ಸಂಗಣ್ಣವರ ಅವರ ಸ್ವಾಗತ, ಶರಣೆ ಮಂಗಲಾ ಪಾಟೀಲ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳ ಮತ್ತು ಶರಣೆ ರೋಹಿಣಿ ಜತ್ತಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.


