ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಎನ್.ಎಸ್.ಢವಳಗಿ ಕಾಲೇಜಿನ ಭಾನುವಾರ ಜರುಗಿದ ೧೯೮೮ ರಿಂದ ೨೦೨೫ ರವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದು ಇಲ್ಲ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಧ ಅತ್ಯಂತ ಪವಿತ್ರವಾದದು ಎಂದರು.
ಸೇವಾ ನಿವೃತ್ತಿ ಹೊಂದಿದ ಎಸ್.ವ್ಹಿ.ಜೋಷಿ ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನಾ ಕಾರ್ಯಕ್ರಮ ಜರುಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಟಿ.ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಚಾರ್ಯ ಬಿ.ಜಿ.ಬಿರಾದಾರ, ನಿವೃತ್ತ ಉಪನ್ಯಾಸಕರಾದ ಎಂ.ಆರ್.ಶಿರಸಂಗಿ, ಐ.ಎಸ್.ವೀರಘಂಟಿಮಠ, ನಿವೃತ್ತ ಶಿಕ್ಷಕರಾದ ಆರ್.ಎಸ್.ಪಾಟೀಲ, ಎಂ.ಎಂ.ಬಿರಾದಾರ, ಎಮ್.ಆರ್.ಚಿಂಚೋಳಿ, ಎಸ್.ಬಿ.ಸಾಸನೂರ, ಬಿ.ಜಿ.ಬಿರಾದಾರರನ್ನು ಸನ್ಮಾನಿಸಲಾಯಿತು.
ಸಿಂದಗಿ ಸಿ.ಎಂ.ಮನಗೂಳಿ ಕಾಲೇಜಿನ ಉಪನ್ಯಾಸಕ ಬಿ.ಎನ್.ಪಾಟೀಲ, ಪ್ರಾಚಾರ್ಯ ಎಸ್.ಎಸ್. ಮೋರಟಗಿ, ಉಪನ್ಯಾಸಕ ಎಸ್.ಬಿ.ಮಠ, ಬಿ.ಜಿ.ಸಿದ್ದರಡ್ಡಿ, ಶಶಿಕಲಾ ಡಮನಾಳ, ಕಮಲಾಬಾಯಿ ಪಾಟೀಲ, ದೇವಮ್ಮ ಗುಳಬಾಳ, ಕಮಲಾಬಾಯಿ ಢವಳಗಿ, ಎಸ್.ಬಿ.ಪೂಜಾರಿ, ಎಸ್.ಬಿ.ಹೊನಮಟ್ಟಿ ಸಹಿತ ಸಾವಿರಾರು ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.