ಉದಯರಶ್ಮಿ ದಿನಪತ್ರಿಕೆ
ಇಂಡಿ: ಮೈಸೂರ ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ , ದೂರಗಾಮಿಯಾಗಿ ಯೋಚನೆ ಮಾಡಬಲ್ಲ ದಾರ್ಶನಿಕ, ಸಮಾಜ ಸುಧಾರಕ ಅವರ ಯೋಜನೆಗಳೆಲ್ಲವೂ ಭವಿಷ್ಯದ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಕೊಂಡಿರುವ ನಿರ್ಧಾರಗಳು ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ೧೧೦ ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಸುಧಾರಣೆ, ಭೂ ಸುಧಾರಣೆ , ಉಳುವವನೆ ಭೂ ಒಡೆಯ, ಹಿಂದುಳಿದ ವರ್ಗದವರಿಗೆ ಹಾವನೂರ ಆಯೋಗ ಮಾಡಿ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ, ಲ್ಯಾಂಡ ಟ್ರಿಮಿನಲ್, ಜೀತದಾಳು ಪದ್ದತಿ, ಭಾಗ್ಯಜ್ಯೋತಿ, ಗರಿಬಿ ಹಟಾವೋ, ದಲಿತ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವಸತಿ ನಿಲಯ, ವಿದ್ಯಾರ್ಥಿ ವೇತನ ನೀಡಿದ ಧೀಮಂತ ಅಭಿವೃದ್ದಿ ಹರಿಕಾರರು ಆಗಿದ್ದರು ಎಂದರು.
ಉಪನ್ಯಾಸ ನೀಡಿದ ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸತ್ಯಣ್ಣ ಹಡಪದ ಮಾತನಾಡಿದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ, ತಾಲೂಕಾ ಹಿಂದುಳಿದ ವರ್ಗಗಳ ಅಧಿಕಾರಿ ಎಸ್.ಆರ್. ಗದ್ಯಾಳ, ಇಒ ಡಾ. ಬಿ.ಎಚ್.ಕನ್ನೂರ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ಬಸವರಾಜ ಗೊರನಾಳ , ಎಸ್.ಐ. ಸುಗುರ ಮಾತನಾಡಿದರು.
ವೇದಿಕೆಯ ಮೇಲೆ ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಸರಕಾರಿ ನೌಕರರ ಸಂಘದ ಇಂಡಿ ಘಟಕ ಅಧ್ಯಕ್ಷ ಬಸವರಾಜ ರಾಹೂರ, ದೀಪಕ ಮಾನೆ, ವೇಂಕಟೇಶ ಭೈರಾಮಡಗಿ, ಎಸ್.ಎಸ್.ಮುಜಾವರ ಮತ್ತಿತರಿದ್ದರು.
ನಿವೃತ ನೌಕರರನ್ನು, ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.