ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಉಪನ್ಯಾಸಕರು ಎಲ್ಲ ರೀತಿಯ ಶೈಕ್ಷಣಿಕ ಕ್ರಮ ತೆಗೆದುಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ.ಹೊಸಮನಿ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಘದಡಿ ಜರುಗಿದ ಶಿಕ್ಷಣಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಷಯಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪರೀಕ್ಷೆಗಳು ಭವಿಷ್ಯದಲ್ಲಿ ಅತ್ಯಂತ ಸೂಕ್ಷ್ಮತೆಯನ್ನು ಒಳಗೊಂಡಿವೆ ಹೀಗಾಗಿ ಉಪನ್ಯಾಸಕರು ಫಲಿತಾಂಶ ಸುಧಾರಣೆಗೆ ತಮ್ಮ ತಮ್ಮ ವಿಷಯಗಳ ಮೇಲೆ ಮಕ್ಕಳಿಗೆ ಉಪಯುಕ್ತ ಹಾಗೂ ಬಹುಮುಖ್ಯ ಅಂಶಗಳ ಬಗ್ಗೆ ಚರ್ಚಿಸಬೇಕು. ಪ್ರತಿ ವಿದ್ಯಾರ್ಥಿಗಳ ಕಡೆಗೆ ಉಪನ್ಯಾಸಕರು ಗಮನ ಹರಿಸಬೇಕು. ವಿಷಯಗಳ ಬಗ್ಗೆ ಇರುವ ಪಾಸಿಂಗ್ ಪ್ಯಾಕೇಜ ತಯಾರಿಸಿ ಮಕ್ಕಳಿಗೆ ನೀಡಬೇಕು ವಿಜಯಪುರ ಜಿಲ್ಲೆಯ ಫಲಿತಾಂಶ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮೂಡಿಬರುವಂತೆ ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಎ.ಬಿ.ಸಾಲಕ್ಕಿ ಕಾಲೇಜು ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ ಮಾತನಾಡಿ, ಪರೀಕ್ಷೆಗಳು ವಿಭಿನ್ನವಾಗಿ ಬರುವದರಿಂದ ಕಾರ್ಯಾಗಾರಗಳು ಹೆಚ್ಚು ಉಪಯುಕ್ತಗೊಂಡಿª.ೆ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ಉಪನ್ಯಾಸಕರು ತಮ್ಮ ತಮ್ಮ ಕಾಲೇಜುಗಳ ಮಕ್ಕಳಿಗೆ ನೀಡಬೇಕು ಎಂದರು.
ನಂತರ ಜಗದೀಶ ಗುಲಗಂಜಿ ಹಾಗೂ ನರಸಿಂಹ ಅವದಾನಿ ಅವರು ತಯಾರಿಸಿದ ಪಾಸಿಂಗ್ ಪ್ಯಾಕೇಜನ್ನು ಉದ್ಘಾಟಿಸಲಾಯಿತು.
ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ಶಿಕ್ಷಣಶಾಸ್ತç ವಿಷಯ ಸಂಘದ ಅಧ್ಯಕ್ಷ ಎ.ಆರ್.ಹೆಗ್ಗಣದೊಡ್ಡಿ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಎಸ್.ಕೆ.ಭಜಂತ್ರಿ, ರಾಜು ಪಟ್ಟಣದ, ಮಲ್ಲಿಕಾರ್ಜುನ ಅವಟಿ ಉಪನ್ಯಾಸಕಿ ವ್ಹಿ.ಆರ್.ಹಿರೇಮಠ, ನವೀನಕುಮಾರ ಸಹಿತ ಶಿಕ್ಷಣಶಾಸ್ತç ಹಾಗೂ ಭೂಗೋಳಶಾಸ್ತçದ ಉಪನ್ಯಾಸಕರು ಇದ್ದರು.