ತಾಯಿಯ ಸ್ಮರಣಾರ್ಥ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಕೊಡುಗೆ ನೀಡಿದ ಸುಧಾಕರ ಅಡಕಿ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ತಾಯಿಯನ್ನು ಜಗತ್ತಿನ ಯಾವುದೇ ಭಾಷೆಯಲ್ಲಿ ವರ್ಣಿಸಲು ಸಾಧ್ಯವಿಲ್ಲ, ಹೆತ್ತ ತಾಯಿ ತನಗೆ ಒದಗಿದ ಎಲ್ಲ ನೋವು ನಲಿವುಗಳನ್ನು ಸಮಚಿತ್ತದಲ್ಲಿ ಸ್ವಿಕರಿಸುವ ವಾತ್ಸಲ್ಯ ಮೂರ್ತಿಯಾಗಿದ್ದು ಅವರನ್ನು ಪ್ರತಿನಿತ್ಯವೂ ಸ್ಮರಿಸುವಂತಹ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹಣಮಂತ ವಡ್ಡರ್ ಹೇಳಿದರು.
ಕಲಕೇರಿ ಗ್ರಾಮದ ಮಾತೃ ಸೇವಾ ಸಂಸ್ಥೆಯ ವತಿಯಿಂದ ಗ್ರಾಪಂ ಸದಸ್ಯ ಸುಧಾಕರ ಅಡಕಿ ಅವರು ತಮ್ಮ ತಾಯಿ ಗಂಗಮ್ಮ ಅಡಕಿ ಅವರ ೧೨ನೇ ವರ್ಷದ ಪುಣ್ಯಾರಾಧನೆಯ ನಿಮಿತ್ಯವಾಗಿ ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ತುರ್ತು ಆಕ್ಸಿಜನ್ ಸಿಲಿಂಡರ್ ಕೊಡುಗೆಯಾಗಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾತೃ ಸೇವಾ ಸಂಸ್ಥೆಯ ಮುಖ್ಯಸ್ಥ ಗ್ರಾಪಂ ಸದಸ್ಯ ಸುಧಾಕರ ಅಡಕಿ ಮಾತನಾಡಿ, ನನ್ನ ತಾಯಿಯ ಸವಿನೆನಪಿಗಾಗಿ ಕಳೆದ ೧೧ ವರ್ಷಗಳಿಂದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ಸುಮಾರು ೧೦೦-೨೦೦ ಹಣ್ಣಿನ ಸಸಿಗಳನ್ನು ನೀಡುತ್ತಾ ಬಂದಿರುವೆ. ಅದರಂತೆ ಈ ವರ್ಷ ಬಡರೋಗಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಕಲಕೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ಎರಡು ಆಕ್ಸಿಜನ್ ಸಿಲಿಂಡರಗಳನ್ನು ನೀಡಿರುವೆ. ಈ ಭಾಗದ ಜನರು ಇದರ ಸದುಪಯೋಗ ಪಡೆಯಲಿ ಎಂದು ಹೇಳಿದರು.
ಆಸ್ಪತ್ರೆಯ ವೈಧ್ಯಾಧಿಕಾರಿ ಬಸವರಾಜ ಅರಕೇರಿ ಮಾತನಾಡಿದರು.
ಈ ವೇಳೆ ಡಾ.ರುಕ್ಷಾನಾಬೇಗಂ ಹೊರಪೇಟ್, ಎಂ.ಸಿ.ಪಟೇಲ್, ಇಲಿಯಾಸ್ ಬೈರವಾಡಗಿ, ಸಂತೋಷ ಟೆಂಗಳಿ, ಅಪ್ಪಾಸಾಬ ಮಾಂಗ್, ಶಿವಕುಮಾರ ತುಗಣಿ, ಬಸೀರಅಹ್ಮದ್ ಕಲಕೇರಿ, ವಿಶ್ವನಾಥ ಸಬರದ, ಶಿವಾನಂದ ಕಾದಳ್ಳಿ, ಬಾಷಾಸಾಬ ಮನಗೂಳಿ, ಸುದಾಕರ ಕೌದಿ, ಶರಣು ಸಿಂದಗಿ, ದಯಾನಂದ ಆಲಗೂರ ಸೇರಿದಂತೆ ಇತರರು ಇದ್ದರು.