ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪುರಸಭೆ ಅಧಿಕಾರಿಗಳು ವಿರುದ್ಧ ದೂರು ನೀಡಿ ತಿಂಗಳಾದರೂ ಉನ್ನತ ತನಿಖೆ ಕೈಗೊಳ್ಳದ ಉನ್ನತಾಧಿಕಾರಿಗಳ ನಡೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕಂದೀಲು ರಂಗಣ್ಣ ತಿಮ್ಮಯ್ಯ ಅನುಮಾನ ವ್ಯಕ್ತಪಡಿಸಿದರು.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪುರಸಭೆಯಲ್ಲಿ 2023-24 & 2024-25 ನೇ ಸಾಲಿನ ಸರ್ಕಾರದ ಅನುದಾನವನ್ನು, ಕೆಟಿಸಿ ಕಾಯ್ದೆ ಉಲ್ಲಂಘನೆ ಮಾಡಿ, ಬಂದಿರುವ ಅನುದಾನ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಉಪಯೋಗಿಸದೆ, ತಮಗಿಷ್ಟ ಬಂದವರ ಹೆಸರಿಗೆ ಎರಡೆರಡು ಬಾರಿ ಅನುದಾನದ ಹಣ ವರ್ಗಾವಣೆ ಮಾಡಿ ಕರ್ತವ್ಯ ಲೋಪ ಎಸಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಂಗಳ ಹಿಂದೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದವರು, ಪುರಸಭೆ ಅಧಿಕಾರಿಗಳು ಯಾರು ಏನೇ ಮಾಡಿದರೂ ಎಷ್ಟೇ ದೂರ ನೀಡಿದರು ನಮಗೆ ಯಾರೂ ಏನೂ ಮಾಡಲಾರರು ಎಂದು ಮತ್ತಷ್ಟು ಅವ್ಯವಹಾರದಲ್ಲಿ ತೊಡಗಿದ್ದಾರೆ. ಕೂಡಲೇ ಥರ್ಡ್ ಪಾರ್ಟಿ ಏಜೆನ್ಸಿ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಲು, ಮಾನ್ಯ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿ ಪುರಸಭೆಯಲ್ಲಿ ನಡೆಯುವ ಅನ್ಯಾಯಗಳನ್ನು ನಿಲ್ಲಿಸಿ, ನಾಗರಿಕರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ.