Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಆಗ್ರಹ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ಇರುವ ಸರ್ವೆ ನಂಬರ್ 842 ರ ಈ ಎಲ್ಲ 84 ಕುಟುಂಬಗಳು ಕಾರ್ಮಿಕ ಕುಟುಂಬಗಳಾಗಿದ್ದು ಇದು ತಾಲೂಕು ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಯಾಗಿದ್ದು ಇದಕ್ಕೆ ಕೂಡಲೇ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ವಸ್ತು ಸಚಿವರು ಹಾಗೂ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಿ 84 ಕುಟುಂಬಗಳಿಗೆ ನ್ಯಾಯ ಕೊಡುವಂತ ಕೆಲಸ ಆಗಬೇಕು ಎಂದು ಸ್ಥಳಿಯ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಬಗ್ಗೆ ಸರ್ಕಾರ ಮಾನವೀಯತೆ ಮೆರೆದು ಈ ಮಧ್ಯ ಒಂದು ಸಂಧಾನ ಪ್ರಕ್ರಿಯೆ ಜರುಗಬೇಕಿದೆ ಎಲ್ಲೋ ಇರುವ ಟಿಬೆಟಿಯನ್ ದೇಶದ ಪ್ರಜೆಗಳ ಮೇಲೆ ಕನಿಕರ ತೋರಿಸಿ ಆಶ್ರಯ ಕೊಟ್ಟ ನಾಡು ನಮ್ಮದು ಅಂತಹದರಲ್ಲಿ ನಮ್ಮದೇ ತಾಲೂಕಿನ ಜನತೆಯ ಜೊತೆ…
ಸಿಂದಗಿ ಪಟ್ಟಣದ ೮೪೨ನ ೮೪ ಕುಟುಂಬಗಳು ಬೀದಿಗೆ | ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೫೦ಸಾವಿರ ಜನಸಂಖ್ಯೆ ಹೊಂದಿದ್ದರೆ ಸಹಜವಾಗಿ ಸರಕಾರದ ನಿಯಮದಂತೆ ನಗರಸಭೆಯಾಗಿ ಮೇಲ್ದರ್ಜೆಗೆರುವುದು ಸಾಮಾನ್ಯ. ಸುಖಾ ಸುಮ್ಮನೆ ಅದ್ದೂರಿ ಮೆರವಣಿಗೆ ಮಾಡಿಕೊಂಡಿರಿ. ತಾಂಬಾ ಪಟ್ಟಣ ಪಂಚಾಯತ್ ಮಾಡಿ. ವೈಭವದ ಡಂಬಾಚಾರದ ರಾಜಕೀಯ ಬಿಟ್ಟು ಬಡವರ ಕಣ್ಣಿರೊರೆಸುವುದು ಮಾಡಬೇಕು. ಅವರ ಸಮಸ್ಯೆಗಳು ಪರಿಹರಿಸಬೇಕು ಇಲ್ಲವಾದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ನೀಡಿದರು.ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ೮೪೨ನ ೮೪ ಕುಟುಂಬಗಳು ಬೀದಿಗೆ ಬಿದ್ದದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಅಶೋಕ ಮನಗೂಳಿ ನಾನು ಹಕ್ಕು ಪತ್ರ ಹಂಚಿಲ್ಲ ಇದಕ್ಕೆ ನಾನು ಜವಾಬ್ದಾರನಲ್ಲ ಎಂದು ಮಾತನಾಡುತ್ತಾ ನುಣಿಚುಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡುವ ಸಮಯದಲ್ಲಿಯೂ ಕಾಂಗ್ರೆಸ್ ಸರಕಾರವಿತ್ತು. ಇಂದು ಕಿತ್ತುವಾಗಲೂ ಕಾಂಗ್ರೆಸ್ ಸರಕಾರವಿದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ತಹಶೀಲ್ದಾರರಾದ ಕರೆಪ್ಪ ಎಸ್ ಬೆಳ್ಳಿ ಇವರ ನೇತೃತ್ವದಲ್ಲಿ ಸೆ.೩ರಂದು ಅನಿರೀಕ್ಷಿತ ಬಾಲಕಾರ್ಮಿಕ ದಾಳಿಯನ್ನು ಕೈಗೊಂಡು ಬಾಲಕಾರ್ಮಿಕ ಮಗುವನ್ನು ರಕ್ಷಿಸಲಾಗಿದೆ.ದಾಳಿಯಲ್ಲಿ ಕಾರ್ಮಿಕ ನಿರೀಕ್ಷಕ ಮಲ್ಲಿಕಾರ್ಜುನ ಬಗಲಿ, ಮುಖ್ಯ ದಂತ ಆರೋಗ್ಯ ಅಧಿಕಾರಿ ಡಾ ರಮೇಶ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಕಾಂತ ಕೊಕಟನೂರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕಿ ಕುಮಾರಿ ನೀಲಮ್ಮಾ ಎಚ್ ಖೇಡಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಎನ್ ಎಸ ತಿಳಗೂಳ, ಪೊಲೀಸ್ ಇಲಾಖೆಯ ಬಿ ಪಿ ಜೋಗಿ, ಡಿಇಒ ಶ್ರೀಶೈಲ ಬಿಸಿರೊಟ್ಟಿ & ಶ್ರೀ ಶರಣು ಹಾಗೂ ಮಕ್ಕಳ ಸಹಾಯವಾಣಿಯ ಕುಮಾರಿ ಸುವರ್ಣಾ ವಾಲಿಕಾರ, ದಬಕಿ ಪಾಲ್ಗೊಂಡಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ್ ೧೭ರಂದು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ಕ್ಕೆ ವಿಶ್ವಕರ್ಮ ಅವರ ಭಾವಚಿತ್ರದ ಮೆರವಣಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಬಸವೇಶ್ವರ ವೃತ್ತದ ಮಾರ್ಗವಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಳ್ಳಲಿದೆ. ವೇದಿಕೆ ಕಾರ್ಯಕ್ರಮ ಬೆಳಿಗ್ಗೆ ೧೦.೩೦ಕ್ಕೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟನೆ ನೆರವೇರಿಸಲಿದ್ದು, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆಯ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಗೌರವ ಉಪಸ್ಥಿತರಿರಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಆರ್. ಪಾಟೀಲ (ಯತ್ನಾಳ) ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ರವಿಕುಮಾರ ಎನ್, ನವದೆಹಲಿಯ ಕರ್ನಾಟಕ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಸೆ.13 ರಂದು ಸಂಜೆ 4 ಗಂಟೆಗೆ ವಚನ ಸಾಹಿತ್ಯ ವಿಚಾರ ಸಂಕಿರಣ ಹಾಗೂ ಸೆ.14 ರಂದು ಬೆಳಗ್ಗೆ 11 ಗಂಟೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 31ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜರುಗಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಹಾಗೂ ಪರಿಷತ್ತಿನ ತಾಲೂಕಾಧ್ಯಕ್ಷ ವೀರಣ್ಣ ಮರ್ತುರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ಇದುವರೆಗೂ ರಾಜ್ಯದ ನಾನಾ ಭಾಗಗಳಲ್ಲಿ ಆಯೋಜನೆ ಮಾಡುತ್ತಾ ಬಂದಿದೆ. ಈ ವರ್ಷವು ಬಸವೇಶ್ವರರು ಈ ಪುಣ್ಯಭೂಮಿಯಲ್ಲಿ ಈ ಸಭೆಯನ್ನು ಹಮ್ಮಿಕೊಂಡಿರುವುದು ನಮಗೆಲ್ಲ ಗೌರವದ ವಿಷಯವಾಗಿದೆ. ಎರಡು ದಿನಗಳ ನಡೆಯಲಿರುವ ಕಾರ್ಯಕ್ರಮದ ಎಲ್ಲ ಸಿದ್ದತೆಗಳನ್ನುಈಗಾಗಲೇ ಮಾಡಿಕೊಳ್ಳಲಾಗಿದೆ. ಎಂದ ಅವರು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿರುವ ನಿರೀಕ್ಷೆ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಸಿದ್ದಾಪುರ (ಕೆ) ಸರ್ಕಾರಿ ಪ್ರೌಢಶಾಲೆಯೂ 2025-26 ನೇ ಸಾಲಿನ ಟಕ್ಕಳಕಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.ಪ್ರಥಮ ಸ್ಥಾನದಲ್ಲಿ ಸಾಧನೆ: ಬಾಲಕಿಯರ ರಿಲೇ 4×400, ಅನ್ನಪೂರ್ಣ ಪೂಜಾರಿ1500 ಮೀ. ಓಟ,ಪ್ರಿಯಾಂಕಾ ದೇವಕತೆ 3000 ಮೀ ಓಟ, ಕೀರ್ತಿ ಪೂಜಾರಿ ಜಾವೆಲಿನ್ ಎಸೆತ, ಅಕ್ಷಿ ಅತ್ತಿಗೇರಿ 3 ಕಿ.ಮೀ ನಡಿಗೆ,ಸಾಕ್ಷಿ ಅತ್ತಿಗೇರಿ ಉದ್ದ ಜಿಗಿತ, ಸಾಕ್ಷಿ ಅತ್ತಿಗೇರಿ ತ್ರಿವಿಧ ಜಿಗಿತ, (ಸಾಕ್ಷಿ ಅತ್ತಿಗೇರಿ ಮೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ.) ಮದಗೊಂಡ ದುದಗಿ 400 ಮೀ ಓಟ, ದಿಲೀಪ್ ಕಾಂಬಳೆ 3000 ಮೀ ಓಟ, ದರ್ಶನ ಕರ್ಪೆ ತ್ರಿವಿಧ ಜಿಗಿತ ಪ್ರಥಮ ಸ್ಥಾನ ಪಡೆದಿದ್ದಾರೆ.ದ್ವಿತೀಯ ಸ್ಥಾನದಲ್ಲಿ ಸಾಧನೆ: ಶ್ರದ್ಧಾ ಖೋತ್ 3000ಮೀ ಓಟ, ಪರಗೊಂಡ ಕೆಂಪವಾಡ ಜಾವೆಲಿನ್ ಎಸೆತ, ಸಿದ್ದಾರ್ಥ್ ಖೋತ ನಡಿಗೆ, ದಿಲೀಪ್ ಕಾಂಬಳೆ 1500 ಮೀ ಓಟ, ಕೀರ್ತಿ ಪೂಜಾರಿ ತ್ರಿವಿಧ ಜಿಗಿತ, ಬಾಲಕಿಯರ ಖೋ-ಖೋ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಣವೇ ಶಕ್ತಿ, ಶಿಕ್ಷಣವೇ ಎಲ್ಲ ಶಕ್ತಿಗಿಂತ ಮೇಲು, ಶಿಕ್ಷಣದಿಂದ ಬಡತನ ನಿರ್ಮೂಲನೆ ಆಗುತ್ತದೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.ಬಬಲೇಶ್ವರ ತಾಲ್ಲೂಕಿನ ಕಾತ್ರಾಳ ಗ್ರಾಮದ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯಾಗಿ ಉನ್ನತಿಕರಿಸಿ ಒಂಬತ್ತನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಚಿವ ಎಂ.ಬಿ. ಪಾಟೀಲ ಅವರ ಶೈಕ್ಷಣಿಕ ಕಾಳಜಿಯಿಂದ ಗ್ರಾಮದ ಹೆಣ್ಣು ಮಕ್ಕಳು ಮಧ್ಯದಲ್ಲಿ ಶಾಲೆ ಬಿಡುವದು ನಿಲ್ಲಿಸಲು, ಬಾಲ್ಯ ವಿವಾಹ ತಡೆಗಟ್ಟಲು, ಬಡವರ ಹಾಗೂ ಹಿಂದುಳಿದ ಕುಟುಂಬಗಳಿಗೆ ಅತೀ ಅವಶ್ಯಕತೆ ಇರುವ ಸೌಲಭ್ಯವನ್ನು ನೆರವೇರಿಸಿ ಪ್ರೌಢ ಶಾಲೆ ಮಂಜೂರು ಮಾಡಿದ್ದಾರೆ. ಸಿಎಸ್ಆರ್ ಅನುದಾನದಡಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನೂತನ ಕೊಠಡಿಗಳನ್ನು ಶೀಘ್ರದಲ್ಲಿ ನಿರ್ಮಿಸಲಾಗುವದು. ಪಾಲಕರು ತಮ್ಮ ಮಕ್ಕಳನ್ನು ಪ್ರತಿ ದಿನ ಶಾಲೆಗೆ ಕಳಿಸಬೇಕು ಎಂದರು.ಸಚಿವರ ಆಪ್ತ ಸಹಾಯಕ ಸಂತೋಷ ಲೋಕುರೆ ಮಾತನಾಡಿ, ಈ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಸಚಿವರ ಪರಿಶ್ರಮದಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರ್ಷ ಒಂಬತ್ತನೇ ತರಗತಿಯನ್ನು ಪ್ರಾರಂಭಿಸಲಾಗಿದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿರುವ ರೂ.1.30 ಕೋಟಿ ಅನುದಾನದಲ್ಲಿ ನಗರದ ವಾರ್ಡ್ ನಂ.35 ರಲ್ಲಿ ಬರುವ ಮಹಾತ್ಮಾ ಗಾಂಧಿ ಕಾಲೊನಿಯ ಮುಖ್ಯ ರಸ್ತೆ ಹಾಗೂ ಆಂತರಿಕ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.ನಗರದ ಮಹಾತ್ಮ ಗಾಂಧಿ ಕಾಲೊನಿಯ ಸಾಯಿಬಾಬಾ ದೇವಸ್ಥಾನ ಹತ್ತಿರ ನಡೆದ ಭೂಮಿಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ರವರು, ನಗರದಲ್ಲಿ ಗುಣಮಟ್ಟದ ರಸ್ತೆಗಳು, ಚರಂಡಿಗಳ ನಿರ್ಮಾಣ, ಕಸ ವಿಲೇವಾರಿ, ಸಮುದಾಯ ಭವನಗಳು, ಅಂಗನವಾಡಿಗಳು, ಶಾಲಾ ಕೊಠಡಿಗಳ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳಿಗೂ ಕೂಡ ಶಾಸಕರು ಅನುದಾನ ತಂದು ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮಾದರಿ ನಗರವಾಗಿ ವಿಜಯಪುರ ಅಭಿವೃದ್ಧಿಗೊಂಡಿದೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯ ರಾಜಶೇಖರ ಕುರಿಯವರ, ಮುಖಂಡರಾದ ಬಸವರಾಜ ಮಧಬಾವಿ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ಪ್ರಸಕ್ತ ಹಂಗಾಮಿನಲ್ಲಿ ದರ ೪೦೦೦ ರೂ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಆಡಳಿತಸೌಧ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ ಮಾತನಾಡಿ, ತಾಲೂಕಿನಲ್ಲಿ ೪೫ ಸಾವಿರ ಹೇಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಉತ್ಪಾದನೆ ವೆಚ್ಚ ಏರಿಕೆಯಿಂದ ರೈತರು ತೀರ್ವ ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ನೀಡಿದ ಪ್ರತಿ ಟನ್ ಗೆ ರೂ ೨೭೦೦ ರೂ ರೈತರ ಪರಿಶ್ರಮಕ್ಕೆ ನ್ಯಾಯ ಸಿಗುತ್ತಿಲ್ಲ ಎಂದರು.ಅದಲ್ಲದೆ ಮಹಾರಾಷ್ಟçದ ಪಕ್ಕದ ಜಿಲ್ಲೆಗಳಾದ ಸೋಲಾಪುರ ಸೇರಿದಂತೆ ಇನ್ನಿತರ ಕಾರ್ಖಾನೆಗಳು ರೂ ನಾಲ್ಕು ಸಾವಿರ ಬೆಳಗಾವಿ ಜಲ್ಲೆಯವರು ರೂ ೩೫೦೦ ಮತ್ತು ಬಾಗಲಕೋಟ ಜಿಲ್ಲೆಯವರು ರೂ ೩೨೦೦ ರೂ ನೀಡುತ್ತಿದ್ದಾರೆ ಎಂದರು.ಕಬ್ಬಿನ ಬೆಲೆ ಕಾರ್ಖಾನೆ ಪ್ರಾರಂಭಿಸುವ ಮುಂಚೆ ಘೋಷಿಸಬೇಕು. ಇಲ್ಲದಿದ್ದರೆ ಕಾರ್ಖಾನೆ ಎದುರು ಪ್ರತಿಭಟನೆ ಮಾಡಲಾಗುವದೆಂದರು.ತಮ್ಮರಾಯ ಆಸಂಗಿ, ಸಿದ್ದಣ್ಣ ತಳವಾರ, ಮಲ್ಲಿಕಾರ್ಜುನ ನಾವದಗಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಇವರ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಶರಣ ಚಿಂತಕರಾದ ಡಾ.ಮಹಾಂತೇಶ ಬಿರಾದಾರ ಹತ್ತು ದಿನಗಳ ಲಂಡನ್ ಪ್ರವಾಸ ಗೈದು, ಅಲ್ಲಿ ನೆಲೆಸಿರುವ ಭಾರತೀಯರಿಗೆ ಡಿಸೆಂಬರ್ ತಿಂಗಳಲ್ಲಿ ವಿಜಯಪುರ ನಗರದಲ್ಲಿ ನಡೆಯಲಿರುವ ವೃಕ್ಷಥಾತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ, ಲಂಡನಿನಲ್ಲಿ ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ ವಿವಿಧ ಬಗೆಯ ಅಧ್ಯಯನ ಯಶಸ್ವಿಯಾಗಿ ಮುಗಿಸಿ ಮರಳಿ ವಿಜಯಪುರ ಜಿಲ್ಲೆಗೆ ಆಗಮಿಸಿದ ನಿಮಿತ್ತವಾಗಿ ತಾಲ್ಲೂಕಿನ ಬೋರಗಿ ಗ್ರಾಮದ ನಬಿರೋಶನ ಪ್ರಕಾಶನ, ಬೋರಗಿ ವತಿಯಿಂದ ಆರಕ್ಷಕ ಮೌಲಾಲಿ ಆಲಗೂರ ಸನ್ಮಾನಿಸಿ ಗೌರವಿಸಿದರು.ಇದೇ ವೇಳೆ ಆರಕ್ಷಕರಾದ ಮಹೇಶ ಕೋಟಾರಗಸ್ತಿ, ತುಕಾರಾಮ ಬಾಲವ್ವಗೋಳ, ಅಂಬರೀಶ್ ನಾಗಾವಿ, ಪ್ರಥಮ ದರ್ಜೆ ಗುತ್ತಿಗೆದಾರರದ ಹಣಮಂತ ಚಿಂಚಲಿ ಜೊತೆಗಿದ್ದರು.
