ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಸಿದ್ದಾಪುರ (ಕೆ) ಸರ್ಕಾರಿ ಪ್ರೌಢಶಾಲೆಯೂ 2025-26 ನೇ ಸಾಲಿನ ಟಕ್ಕಳಕಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.
ಪ್ರಥಮ ಸ್ಥಾನದಲ್ಲಿ ಸಾಧನೆ: ಬಾಲಕಿಯರ ರಿಲೇ 4×400, ಅನ್ನಪೂರ್ಣ ಪೂಜಾರಿ1500 ಮೀ. ಓಟ,ಪ್ರಿಯಾಂಕಾ ದೇವಕತೆ 3000 ಮೀ ಓಟ, ಕೀರ್ತಿ ಪೂಜಾರಿ ಜಾವೆಲಿನ್ ಎಸೆತ, ಅಕ್ಷಿ ಅತ್ತಿಗೇರಿ 3 ಕಿ.ಮೀ ನಡಿಗೆ,ಸಾಕ್ಷಿ ಅತ್ತಿಗೇರಿ ಉದ್ದ ಜಿಗಿತ, ಸಾಕ್ಷಿ ಅತ್ತಿಗೇರಿ ತ್ರಿವಿಧ ಜಿಗಿತ, (ಸಾಕ್ಷಿ ಅತ್ತಿಗೇರಿ ಮೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ.) ಮದಗೊಂಡ ದುದಗಿ 400 ಮೀ ಓಟ, ದಿಲೀಪ್ ಕಾಂಬಳೆ 3000 ಮೀ ಓಟ, ದರ್ಶನ ಕರ್ಪೆ ತ್ರಿವಿಧ ಜಿಗಿತ ಪ್ರಥಮ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಸ್ಥಾನದಲ್ಲಿ ಸಾಧನೆ: ಶ್ರದ್ಧಾ ಖೋತ್ 3000ಮೀ ಓಟ, ಪರಗೊಂಡ ಕೆಂಪವಾಡ ಜಾವೆಲಿನ್ ಎಸೆತ, ಸಿದ್ದಾರ್ಥ್ ಖೋತ ನಡಿಗೆ, ದಿಲೀಪ್ ಕಾಂಬಳೆ 1500 ಮೀ ಓಟ, ಕೀರ್ತಿ ಪೂಜಾರಿ ತ್ರಿವಿಧ ಜಿಗಿತ, ಬಾಲಕಿಯರ ಖೋ-ಖೋ, ಬಾಲಕಿಯರ ವಾಲಿಬಾಲ್, ಬಾಲಕಿಯರ ಥ್ರೋ ಬಾಲ್, ಬಾಲಕರ ಖೋ-ಖೋ, ಬಾಲಕರ 4*400ಮೀ ರಿಲೇಯಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.
ತೃತೀಯ ಸ್ಥಾನದಲ್ಲಿ ಸಾಧನೆ: ಪ್ರಿಯಾಂಕ ದೇವಕತೆ 800ಮೀ ಓಟ, ಸೌಜನ್ಯ ಹಡಪದ 200ಮೀ ಓಟ,
ಬೌರಮ್ಮ ಪೂಜಾರಿ 3 ಕಿ.ಮೀ ನಡಿಗೆ, ಸದಾಶಿವ ಗೊಳಸಂಗಿ 3000 ಮೀ ಓಟ,ಮಹಮ್ಮದ ಅಯಾನ ಹಳ್ಳಿ
3 ಕಿ.ಮೀ ನಡಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಿ. ಎನ್. ಹಿರೇಮಠ, ಮುಖ್ಯೋಪಾಧ್ಯಾಯ ಎಸ್. ಎಂ. ಅವಟಿ ಹಾಗೂ ಎಲ್ಲಾ ಶಿಕ್ಷಕ ಸಿಬ್ಬಂದಿಯವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.