ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಇವರ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಶರಣ ಚಿಂತಕರಾದ ಡಾ.ಮಹಾಂತೇಶ ಬಿರಾದಾರ ಹತ್ತು ದಿನಗಳ ಲಂಡನ್ ಪ್ರವಾಸ ಗೈದು, ಅಲ್ಲಿ ನೆಲೆಸಿರುವ ಭಾರತೀಯರಿಗೆ ಡಿಸೆಂಬರ್ ತಿಂಗಳಲ್ಲಿ ವಿಜಯಪುರ ನಗರದಲ್ಲಿ ನಡೆಯಲಿರುವ ವೃಕ್ಷಥಾತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ, ಲಂಡನಿನಲ್ಲಿ ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ ವಿವಿಧ ಬಗೆಯ ಅಧ್ಯಯನ ಯಶಸ್ವಿಯಾಗಿ ಮುಗಿಸಿ ಮರಳಿ ವಿಜಯಪುರ ಜಿಲ್ಲೆಗೆ ಆಗಮಿಸಿದ ನಿಮಿತ್ತವಾಗಿ ತಾಲ್ಲೂಕಿನ ಬೋರಗಿ ಗ್ರಾಮದ ನಬಿರೋಶನ ಪ್ರಕಾಶನ, ಬೋರಗಿ ವತಿಯಿಂದ ಆರಕ್ಷಕ ಮೌಲಾಲಿ ಆಲಗೂರ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಆರಕ್ಷಕರಾದ ಮಹೇಶ ಕೋಟಾರಗಸ್ತಿ, ತುಕಾರಾಮ ಬಾಲವ್ವಗೋಳ, ಅಂಬರೀಶ್ ನಾಗಾವಿ, ಪ್ರಥಮ ದರ್ಜೆ ಗುತ್ತಿಗೆದಾರರದ ಹಣಮಂತ ಚಿಂಚಲಿ ಜೊತೆಗಿದ್ದರು.