ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ಪ್ರಸಕ್ತ ಹಂಗಾಮಿನಲ್ಲಿ ದರ ೪೦೦೦ ರೂ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಆಡಳಿತಸೌಧ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ ಮಾತನಾಡಿ, ತಾಲೂಕಿನಲ್ಲಿ ೪೫ ಸಾವಿರ ಹೇಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಉತ್ಪಾದನೆ ವೆಚ್ಚ ಏರಿಕೆಯಿಂದ ರೈತರು ತೀರ್ವ ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ನೀಡಿದ ಪ್ರತಿ ಟನ್ ಗೆ ರೂ ೨೭೦೦ ರೂ ರೈತರ ಪರಿಶ್ರಮಕ್ಕೆ ನ್ಯಾಯ ಸಿಗುತ್ತಿಲ್ಲ ಎಂದರು.
ಅದಲ್ಲದೆ ಮಹಾರಾಷ್ಟçದ ಪಕ್ಕದ ಜಿಲ್ಲೆಗಳಾದ ಸೋಲಾಪುರ ಸೇರಿದಂತೆ ಇನ್ನಿತರ ಕಾರ್ಖಾನೆಗಳು ರೂ ನಾಲ್ಕು ಸಾವಿರ ಬೆಳಗಾವಿ ಜಲ್ಲೆಯವರು ರೂ ೩೫೦೦ ಮತ್ತು ಬಾಗಲಕೋಟ ಜಿಲ್ಲೆಯವರು ರೂ ೩೨೦೦ ರೂ ನೀಡುತ್ತಿದ್ದಾರೆ ಎಂದರು.
ಕಬ್ಬಿನ ಬೆಲೆ ಕಾರ್ಖಾನೆ ಪ್ರಾರಂಭಿಸುವ ಮುಂಚೆ ಘೋಷಿಸಬೇಕು. ಇಲ್ಲದಿದ್ದರೆ ಕಾರ್ಖಾನೆ ಎದುರು ಪ್ರತಿಭಟನೆ ಮಾಡಲಾಗುವದೆಂದರು.
ತಮ್ಮರಾಯ ಆಸಂಗಿ, ಸಿದ್ದಣ್ಣ ತಳವಾರ, ಮಲ್ಲಿಕಾರ್ಜುನ ನಾವದಗಿ, ಹಣಮಂತ ಗುಡ್ಲ, ರಫೀಕ ಚೌಧರಿ ಮತ್ತಿತರಿದ್ದರು.