ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ತಹಶೀಲ್ದಾರರಾದ ಕರೆಪ್ಪ ಎಸ್ ಬೆಳ್ಳಿ ಇವರ ನೇತೃತ್ವದಲ್ಲಿ ಸೆ.೩ರಂದು ಅನಿರೀಕ್ಷಿತ ಬಾಲಕಾರ್ಮಿಕ ದಾಳಿಯನ್ನು ಕೈಗೊಂಡು ಬಾಲಕಾರ್ಮಿಕ ಮಗುವನ್ನು ರಕ್ಷಿಸಲಾಗಿದೆ.
ದಾಳಿಯಲ್ಲಿ ಕಾರ್ಮಿಕ ನಿರೀಕ್ಷಕ ಮಲ್ಲಿಕಾರ್ಜುನ ಬಗಲಿ, ಮುಖ್ಯ ದಂತ ಆರೋಗ್ಯ ಅಧಿಕಾರಿ ಡಾ ರಮೇಶ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಕಾಂತ ಕೊಕಟನೂರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕಿ ಕುಮಾರಿ ನೀಲಮ್ಮಾ ಎಚ್ ಖೇಡಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಎನ್ ಎಸ ತಿಳಗೂಳ, ಪೊಲೀಸ್ ಇಲಾಖೆಯ ಬಿ ಪಿ ಜೋಗಿ, ಡಿಇಒ ಶ್ರೀಶೈಲ ಬಿಸಿರೊಟ್ಟಿ & ಶ್ರೀ ಶರಣು ಹಾಗೂ ಮಕ್ಕಳ ಸಹಾಯವಾಣಿಯ ಕುಮಾರಿ ಸುವರ್ಣಾ ವಾಲಿಕಾರ, ದಬಕಿ ಪಾಲ್ಗೊಂಡಿದ್ದರು.