ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿರುವ ರೂ.1.30 ಕೋಟಿ ಅನುದಾನದಲ್ಲಿ ನಗರದ ವಾರ್ಡ್ ನಂ.35 ರಲ್ಲಿ ಬರುವ ಮಹಾತ್ಮಾ ಗಾಂಧಿ ಕಾಲೊನಿಯ ಮುಖ್ಯ ರಸ್ತೆ ಹಾಗೂ ಆಂತರಿಕ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.
ನಗರದ ಮಹಾತ್ಮ ಗಾಂಧಿ ಕಾಲೊನಿಯ ಸಾಯಿಬಾಬಾ ದೇವಸ್ಥಾನ ಹತ್ತಿರ ನಡೆದ ಭೂಮಿಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ರವರು, ನಗರದಲ್ಲಿ ಗುಣಮಟ್ಟದ ರಸ್ತೆಗಳು, ಚರಂಡಿಗಳ ನಿರ್ಮಾಣ, ಕಸ ವಿಲೇವಾರಿ, ಸಮುದಾಯ ಭವನಗಳು, ಅಂಗನವಾಡಿಗಳು, ಶಾಲಾ ಕೊಠಡಿಗಳ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳಿಗೂ ಕೂಡ ಶಾಸಕರು ಅನುದಾನ ತಂದು ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮಾದರಿ ನಗರವಾಗಿ ವಿಜಯಪುರ ಅಭಿವೃದ್ಧಿಗೊಂಡಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯ ರಾಜಶೇಖರ ಕುರಿಯವರ, ಮುಖಂಡರಾದ ಬಸವರಾಜ ಮಧಬಾವಿ, ಗೋಪಾಲ ಮಲಘಾಣ, ಆರ್.ಎಂ.ನಾಗಾವಿ, ಮಹೇಶ ಗುಡ್ಯಾಳ, ಸಾಗರ ಪತಂಗೆ, ಛಾಯಾ ಮಸಿ, ಆರ್.ಡಿ.ಸಾರವಾಡ, ಉಮಾ ಹೂಲಿ, ಸತೀಶ ಬಿರಾದಾರ, ಪ್ರಶಾಂತ ಕಾಪಾಳೆ ಮತ್ತಿತರರು ಉಪಸ್ಥಿತರಿದ್ದರು.