ಸಿಂದಗಿ ಪಟ್ಟಣದ ೮೪೨ನ ೮೪ ಕುಟುಂಬಗಳು ಬೀದಿಗೆ | ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೫೦ಸಾವಿರ ಜನಸಂಖ್ಯೆ ಹೊಂದಿದ್ದರೆ ಸಹಜವಾಗಿ ಸರಕಾರದ ನಿಯಮದಂತೆ ನಗರಸಭೆಯಾಗಿ ಮೇಲ್ದರ್ಜೆಗೆರುವುದು ಸಾಮಾನ್ಯ. ಸುಖಾ ಸುಮ್ಮನೆ ಅದ್ದೂರಿ ಮೆರವಣಿಗೆ ಮಾಡಿಕೊಂಡಿರಿ. ತಾಂಬಾ ಪಟ್ಟಣ ಪಂಚಾಯತ್ ಮಾಡಿ. ವೈಭವದ ಡಂಬಾಚಾರದ ರಾಜಕೀಯ ಬಿಟ್ಟು ಬಡವರ ಕಣ್ಣಿರೊರೆಸುವುದು ಮಾಡಬೇಕು. ಅವರ ಸಮಸ್ಯೆಗಳು ಪರಿಹರಿಸಬೇಕು ಇಲ್ಲವಾದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ನೀಡಿದರು.
ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ೮೪೨ನ ೮೪ ಕುಟುಂಬಗಳು ಬೀದಿಗೆ ಬಿದ್ದದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಅಶೋಕ ಮನಗೂಳಿ ನಾನು ಹಕ್ಕು ಪತ್ರ ಹಂಚಿಲ್ಲ ಇದಕ್ಕೆ ನಾನು ಜವಾಬ್ದಾರನಲ್ಲ ಎಂದು ಮಾತನಾಡುತ್ತಾ ನುಣಿಚುಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡುವ ಸಮಯದಲ್ಲಿಯೂ ಕಾಂಗ್ರೆಸ್ ಸರಕಾರವಿತ್ತು. ಇಂದು ಕಿತ್ತುವಾಗಲೂ ಕಾಂಗ್ರೆಸ್ ಸರಕಾರವಿದೆ. ಸಾಲ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡ ಜನರ ಪರಿಸ್ಥಿತಿಗಳೇನು ಎಂದ ಅವರು, ಸರ್ವೇ ನಂ ೮೪೨ರ ಮೂಲ ಜಮೀನು ೧೭ಎಕರೆ ೩೦ಗುಂಟೆ, ಅದರಲ್ಲಿ ಡ ೧೦೭೮೦ ಹೇಳುವ ಪ್ರಕಾರ ೧೯೭೨ರಲ್ಲಿ ಚಂದ್ರಾಮಪ್ಪ ಶರಣಪ್ಪ, ಶಂಕ್ರಪ್ಪ ತಂದೆ:ಮಲ್ಲಪ್ಪ ಅಗಸರ ೮೪೨ರ ಪೈಕಿ ೮ಎಕರೆ ೩೫ಗುಂಟೆ ಅದರಲ್ಲಿ ೧೦ಖರಾಬ ಜಮೀನು ಇದ್ದು, ಮೂಲ ೮ಎಕರೆ ೨೫ಗುಂಟೆ ಇರುತ್ತದೆ. ಅದರಲ್ಲಿ ೩೦/೦೬/೧೯೭೨ರಂದು ಮರಬಿಗಿ ಅಬ್ದುಲ್‌ಖಾದರ್ ಕರಜಗಿ ಅವರು ಖರೀದಿ ಮಾಡುತ್ತಾರೆ. ಡ.೧೫೮೦೩ರ ಪ್ರಕಾರ ೧೯೮೧ರಲ್ಲಿ ಕರಜಗಿ ಅವರು ಅದರಲ್ಲಿ ಸಿದ್ರಾಮಪ್ಪ ಈರಪ್ಪ ಕುರಡಿ ಅವರಿಗೆ ೮೪೨/೧ರ ಪೈಕಿ ೪ಎಕರೆ ಖರೀದಿ ನೀಡುತ್ತಾರೆ. ಡ.೧೬೫೯೨ ೧೯೮೪ ೮೪೨/೧ರ ಪೈಕಿಯ ಜಾಗೆಯನ್ನು ಕುರಡಿ ಅವರು ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ ಅವರಿಗೆ ಖರೀದಿ ನೀಡುತ್ತಾರೆ. ಡ.೧೯೮೪ರಲ್ಲಿ ೮೪೨ರ ಪೈಕಿ ೪ಎಕರೆ ೩೫ಗುಂಟೆ ಬನ್ನೆಟ್ಟಿ ಅವರ ಜಾಗೆಯನ್ನು ಮನಗೂಳಿ ಅವರು ಖರೀದಿ ಮಾಡುತ್ತಾರೆ. ಹೀಗೆ ಹಂತ ಹಂತವಾಗಿ ಖರೀದಿ ಮಾಡಿ ಜಮೀನು ೮೪೨/೨ಅ ೮ಎಕರೆ ೩೫ಗುಂಟೆ ಹಾಗೂ ೪ಎಕರೆ ಸೇರಿ ೧೨ ಎಕರೆ ಆಗುತ್ತದೆ. ಕುರಡಿ ಅವರು ೪ಎಕರೆ ಬಿಟ್ಟು ಕೊಡುತ್ತಾರೆ. ಅದರಲ್ಲಿ ಒಟ್ಟು ೯ಎಕರೆ ೩೫ಗುಂಟೆ ಜಮೀನನ್ನು ೧೯೯೫ರಲ್ಲಿ ಕಂದಾಯ ನಿರೀಕ್ಷರು ಭೂ-ಸ್ವಾಧೀನ ಮಾಡಿಕೊಂಡು ಪುರಸಭೆಗೆ ಖಬ್ಜಾ ಮಾಡಿ ಕೊಡುತ್ತಾರೆ. ಒಟ್ಟು ಕ್ಷೇತ್ರ ೧೭ಎಕರೆ ೩೦ಗುಂಟೆ ಭೂ-ಸ್ವಾಧೀನವಾಗಿದ್ದು ೧೫ಎಕರೆ ೨೦ಗುಂಟೆ, ಖಾಸಗಿ ಜಮೀನು ೨ಎಕರೆ ೧೦ಗುಂಟೆ ಹೀಗೆ ಜಮೀನಿನ ಹಿನ್ನೆಲೆಯಿದ್ದು, ಇದೆಲ್ಲವನ್ನು ನೋಡಿದಾಗ ಕಾನೂನು ತಜ್ಞರ ಜೊತೆಗೆ ಚಿರ್ಚಸಿದೆ ಭೂ-ಸ್ವಾಧೀನ ಮಾಡಿಕೊಳ್ಳುವ ಅವಕಾಶಯಿದೆ ಎಂದು ಹೇಳಿದ್ದಾರೆ. ಮೂಲ ಮಾಲೀಕನಿಗೆ ಪರಿಹಾರ ನೀಡಿ ಭೂ-ಸ್ವಾಧೀನ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಇದೆಲ್ಲವನ್ನು ಮರೆಮಾಚಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ನೋಡಿಕೊಂಡು ಸುಮ್ಮನೆ ಕುರಲ್ಲ. ಇಲ್ಲಿಯವರೆಗೆ ಇದರಲ್ಲಿ ನಾನು ರಾಜಕಾರಣ ಮಾಡಲ್ಲ. ನೊಂದ ಕುಟುಂಬಗಳಿಗೆ ಒಬ್ಬ ಜನಪ್ರತಿನಿಧಿಯಾಗಿ ಸ್ಪಂದಿಸುವುದು ನನ್ನ ಜವಾಬ್ದಾರಿ. ಎಲ್ಲ ಸೌಲಭ್ಯಗಳನ್ನು ನೀಡಿದ ಪುರಸಭೆಯೇ ಇದಕ್ಕೆ ನೇರ ಹೊಣೆ. ಇದು ಇಷ್ಟಕ್ಕೆ ಬೀಡದೆ ಕೋರ್ಟ್ನಲ್ಲಿ ರೀಟ್ ಅರ್ಜಿ ಸಲ್ಲಿಸುತ್ತೇವೆ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗುರ, ಬಿ.ಎಚ್.ಬಿರಾದಾರ, ಗುರು ತಳವಾರ, ಎಸ್.ಎನ್.ಹಿರೇಮಠ, ಸಿದ್ರಾಮ ಆನಗೊಂಡ, ಪೀರು ಕೆರೂರ ಸೇರಿದಂತೆ ಅನೇಕರು ಇದ್ದರು.

