ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿ ಇರುವ ಸರ್ವೆ ನಂಬರ್ 842 ರ ಈ ಎಲ್ಲ 84 ಕುಟುಂಬಗಳು ಕಾರ್ಮಿಕ ಕುಟುಂಬಗಳಾಗಿದ್ದು ಇದು ತಾಲೂಕು ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಯಾಗಿದ್ದು ಇದಕ್ಕೆ ಕೂಡಲೇ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ವಸ್ತು ಸಚಿವರು ಹಾಗೂ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಿ 84 ಕುಟುಂಬಗಳಿಗೆ ನ್ಯಾಯ ಕೊಡುವಂತ ಕೆಲಸ ಆಗಬೇಕು ಎಂದು ಸ್ಥಳಿಯ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಬಗ್ಗೆ ಸರ್ಕಾರ ಮಾನವೀಯತೆ ಮೆರೆದು ಈ ಮಧ್ಯ ಒಂದು ಸಂಧಾನ ಪ್ರಕ್ರಿಯೆ ಜರುಗಬೇಕಿದೆ ಎಲ್ಲೋ ಇರುವ ಟಿಬೆಟಿಯನ್ ದೇಶದ ಪ್ರಜೆಗಳ ಮೇಲೆ ಕನಿಕರ ತೋರಿಸಿ ಆಶ್ರಯ ಕೊಟ್ಟ ನಾಡು ನಮ್ಮದು ಅಂತಹದರಲ್ಲಿ ನಮ್ಮದೇ ತಾಲೂಕಿನ ಜನತೆಯ ಜೊತೆ ನಿಲ್ಲಬೇಕಾದ ಅಗತ್ಯತೆ ಇದೆ ಎಂದು ಶ್ರೀಶೈಲಗೌಡ ಬಿರಾದಾರ ತಿಳಿಸಿದ್ದಾರೆ.