Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ:”ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಭಾಷೆಯಿದೆ ಮತ್ತು ಹಿಂದಿ ಭಾಷೆಯು ಬಹುತೇಕ ಪ್ರತಿಯೊಬ್ಬ ಭಾರತೀಯರಿಗೂ ತಿಳಿದಿರುವ ಮತ್ತು ಅದನ್ನು ಹೆಮ್ಮೆಯಿಂದಅಳವಡಿಸಿಕೊಂಡಿದೆ” ಎಂದು ಡಾ.ಕೆ. ಎ.ಪಾಟೀಲ ಹೇಳಿದರು.ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನಲ್ಲಿ ಹಿಂದಿ ವಿಭಾಗದದಿಂದ ಸೆ.೧೭ ಬುಧವಾರದಂದು ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು .ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹಿಂದಿ ಭಾಷೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಅವರ ಮಾರ್ಗದರ್ಶನ ಶ್ಲಾಘನೀಯ ಎಂದು ಹಿಂದಿ ಭಾಷೆಯ ಮಹತ್ವ ತಿಳಿಸಿದರು.ಈ ಸಂದರ್ಭದಲ್ಲಿ ಹಿಂದಿ‌ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ಪಾಟೀಲ, ಪ್ರೊ.ಬಿ.ವಿ ಪಾಟೀಲ, ಡಾ.ಸುಮಿ ಚೋಪಡೆ ಹಾಗೂವಿದ್ಯಾರ್ಥಿಗಳು ಉಪಸ್ಥಿತರಿದ್ದರುಡಾ.ಸುಮಿ ಚೋಪ್ಡೆ ವಂದಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಶಹಾಪುರ: ಪಟ್ಟಣದ ಶಿಕ್ಷಕ ಸುರೇಶಬಾಬು ಅರುಣಿ ಅವರ ಸುಪುತ್ರಿ ಅನುಷಾ.ಎಸ್.ಅರುಣಿ ಎನ್ ಟಿ ಎ ದಿಂದ ಇತ್ತೀಚಿಗೆ ಪ್ರಕಟವಾದ ಐಸಿಆರ್ / ಸ್ನಾತಕ್ಕೊತರ ಎಂಎಸ್‌ಸಿ ತೋಟಗಾರಿಕಾ ಪದವಿಯಲ್ಲಿ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ 9ನೇ ರಾಂಕ್ ಪಡೆಡಿದ್ದಾರೆ.ವಿದ್ಯಾರ್ಥಿನಿಯ ಸಾಧನೆಗೆ ಉತ್ತರ ಕರ್ನಾಟಕ ಕರವೇ ಸಂಚಾಲಕ ಸತೀಶಕುಮಾರ ಬಿ.ಕೌಲಗಿ, ಮುತ್ತು ಪಟ್ಟಣಶೆಟ್ಟಿ, ಕುಮಾರ ಕಿಣಗಿ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸಲು ಪರಿಣಾಮಕಾರಿಯಾಗಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಾಗುವಂತೆ ಹಾಗೂ ಅಪಘಾತ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮನಗೂಳಿ ಮತ್ತು ಉತ್ನಾಳ ಕ್ರಾಸ್‌ನಲ್ಲಿ ಅಪಘಾತಗಳು ಸಂಭವಿಸುವ ಹಿನ್ಜನಲೆಯಲ್ಲಿ ರಸ್ತೆ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈಗಾಗಲೇ ಮನಗೂಳಿ ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲು ಕ್ರೀಯಾಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಯೋಜನಾ ವಿವರಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ರಾಷ್ಟಿçÃಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಕೈಗೊಂಡ ಕ್ರಮಗಳ ಕುರಿತಾಗಿ ಮಾಹಿತಿ ನೀಡಲಾಯಿತು.ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ, ಡಿವೈಎಸ್‌ಪಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೂತನಾಳದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮೂಲಕ ದಿನಾಂಕ: ೧೯-೦೯-೨೦೨೫ರಂದು ಸಾಮಾನ್ಯ ಗೆಂಡೆ (ಗೌರಿ) ಮೀನು ಮರಿಗಳನ್ನು ತಲಾ ರೂ.೧ ರಂತೆ ಮಾರಾಟ ಮಾಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.ಈ ಬಗ್ಗೆ ಮಾಹಿತಿಗಾಗಿ ಮೊ.೯೯೪೫೯೫೯೭೦೪, ಮೊ.೯೯೦೦೭೭೬೨೦೫, ದೂ.೦೮೩೫೨-೨೬೪೫೧೬ ಮತ್ತು ಮೊ.೯೪೮೦೫೧೮೬೭೯ ಸಂಪರ್ಕಿಸಬಹುದಾಗಿದೆ ಎಂದು ಭೂತನಾಳದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೨೦/೧೧೦/೧೧ಕೆ.ವಿ ಬಾಗೇವಾಡಿ ಸ್ವೀ-ಕೇಂದ್ರದ ೧೦೦ ಎಮ್.ವಿ.ಎ-೧, ೨ ಮತ್ತು ೩ ಪರಿವರ್ತಕಗಳ ಮೇಲೆ ಬರುವ ಎಲ್ ಐ ಎಸ್‌ಗಳಾದ ಬಳೂತಿ, ಮಸೂತಿ, ಹನಮಾಪುರ ಮತ್ತು ಮುಳವಾಡ, ೧೧೦ಕೆವ್ಹಿ ಚಿಮ್ಮಲಗಿ ಹಾಗೂ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ, ಮಟ್ಟಿಹಾಳ, ಮಲಘಾಣ, ರೋಣಿಹಾಳ, ಮುಖರ್ತಿಹಾಳ, ನಿಡಗುಂದಿ, ದಿಂಡವಾರ, ಕನಕಾಲ, ಉಕ್ಕಲಿ ಹಾಗೂ ನಂದಿಹಾಳ, ಉಪ ಕೇಂದ್ರಗಳಲ್ಲಿ ಹಾಗೂ ೧೩ಕೆ.ವ್ಹಿ ಲಿಂಗದಳ್ಳಿ ಎಲ್.ಐ.ಎಸ್ ಹಾಗೂ ೩೩ಕೆವ್ಹಿ ಮನಗೂಳಿ, ಮುತ್ತಗಿ, ಹೂ.ಹಿಪ್ಪರಗಿ, ದೇವರ ಗೆಣ್ಣೂರ ಉಪಕೇಂದ್ರಗಳಲ್ಲಿಯು ಎರಡನೇ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿದ್ದು, ಈ ಕೇಂದ್ರಗಳಿಂದ ಹೊರಹೋಗುವ ೩೩ಕೆ.ವ್ಹಿ ಹಾಗೂ ೧೧ಕೆ.ವ್ಹಿ ಮಾರ್ಗಗಳಲ್ಲಿ ಸೆಪ್ಟೆಂಬರ್ ೨೦ರ ಬೆಳಿಗ್ಗೆ ೧೦ ರಿಂದ ಸಂಜೆ ೪ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Read More

ಶಾಲಾ-ಕಾಲೇಜಿನಲ್ಲಿ ಆಂಟಿ ಡ್ರಗ್ ಘಟಕ ಮೂಲಕ ಜಾಗೃತಿ ಮೂಡಿಸಿ | ಜಿಲ್ಲಾಧಿಕಾರಿ ಡಾ.ಆನಂದ. ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಮಾದಕ ದ್ರವ್ಯ ಕಡಿವಾಣಕ್ಕಾಗಿ ಮಾದಕ ದ್ರವ್ಯಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜಿನಲ್ಲಿ ಆಂಟಿ ಡ್ರಗ್ ಘಟಕ ಸ್ಥಾಪಿಸಿ, ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಾದಕ ದ್ರವ್ಯ-ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜ್‌ಗಳಲ್ಲಿ ನಿರ್ಮಿಸಿದ ಆಂಟಿ ಡ್ರಗ್ ಘಟಕಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಇದರ ಕಾರ್ಯ ವೈಖರಿಯ ಕುರಿತು ನೋಡಲ್ ಅಧಿಕಾರಿಗಳು ಕಾಲಕಾಲಕ್ಕೆ ನಿರ್ದೇಶನ ನೀಡಿ, ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಚರ್ಚಾ ಸ್ಪರ್ಧೆ,ಪ್ರಬಂಧ ಸ್ಪರ್ಧೆಯಂತಹ ಚಟುವಟಿಕೆಯ ಮೂಲಕ ಮಾದಕ ವಸ್ತು-ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ…

Read More

ಕಲಾವಿಕಾಸ ಪರಿಷತ್ ನಿಂದ ಪುಟ್ಟರಾಜರ ೧೫ ನೆಯ ಪುಣ್ಯಸ್ಮರಣೆ ಆಚರಣೆ ಉದಯರಶ್ಮಿ ದಿನಪತ್ರಿಕೆ ಗದಗ: ಕುರುಡರಾಗಿದ್ದರೂ ಕೂಡ ಅಂಧ, ಅನಾಥ ಮಕ್ಕಳಿಗೆ ತಂದೆಯಾಗಿ, ಪೋಷಕರಾಗಿ, ಸಂಗೀತದ ಗುರುವಾಗಿ, ಪುರಾಣ ಪ್ರವಚನಕ್ಕೆ ಪ್ರೇರಕರಾಗಿ ಶತಮಾನದ ಹತ್ತಿರದ ಇಡೀ ಬದುಕನ್ನು ದಿಕ್ಕಿಲ್ಲದ ಮಕ್ಕಳಿಗೆ ಬದುಕುವ ವಿದ್ಯೆ ನೀಡಿದ ಪಂಡಿತ ಪುಟ್ಟರಾಜ ಗವಾಯಿಗಳು ನೋಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದರು. ಅವರ ಸಾಹಿತ್ಯ ಕಣ್ಣಿದ್ದವರನ್ನೂ ಬೆರಗುಗೊಳಿಸಿತ್ತು ಎಂದು ಅನ್ನದಾನಿ ಹಿರೇಮಠ ಅವರು ಹೇಳಿದರು. ಅವರು, ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ, ಉತ್ತರ ಕನಾರ್ಟಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಗದುಗಿನ ಕಲಾವಿಕಾಸ ಪರಿಷತ್ತಿನವರು ಏರ್ಪಡಿಸಿದ ಪಂಡಿತ ಪುಟ್ಟರಾಜ ಗವಾಯಿಗಳ ೧೫ ನೆ ಪುಣ್ಯ ಸ್ಮರಣೆಯನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಹೇಳಿದರು.ಮುಖ್ಯ ಅತಿಥಿಯಾಗಿ ಭಾವಹಿಸಿದ್ದ ವಿಭೂತಿ ಪತ್ರಿಕೆ ಸಂಪಾದಕ ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಅವರು, ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಗದಗ ಬೆಟಗೇರಿ ಜನರು ಜಾತ್ಯಾತೀತ ವಾಗಿ ಭಕ್ತಿಯಿಂದ ಪ್ರೀತಿಯಿಂದ ಅಭಿಮಾನದಿಂದ ಅಂತಿಮ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ದಸರಾ ಉದ್ಘಾಟನೆ, ಸಾಹಿತ್ಯ ಸಮ್ಮೇಳನ ಉದ್ಘಾಟನೆ ಇವೆಲ್ಲ ಬಂದಾಗ, ಆ ವಲಯದ ಜನರಿಗೆ “ಈ ಬಾರಿ ಯಾರಾಗ್ತಾರೆ?” ಎಂದು ಆಸಕ್ತಿ ಕೆರಳುವುದು ಸಹಜವೆ. ಅದೇ ಈ ವರ್ಷವೂ ಇತ್ತು.ಜಗತ್ಪ್ರಸಿದ್ದ ದಸರಾ ಉದ್ಘಾಟನೆ ಮಾಡಲು ಸಾಹಿತಿಯೊಬ್ಬರನ್ನು ಆರಿಸಿದ್ದೂ ಆಯಿತು, ಆಹ್ವಾನಿಸಿದ್ದೂ ಆಯಿತು.ಆ ಸಾಹಿತಿ ಇಲ್ಲಿಯವರೆಗೆ ಯಾರಿಗೆ ತಿಳಿದಿದ್ದರೋ ಇಲ್ಲವೋ ನನಗಂತು ತಿಳಿಯದು. ಆದರೆ ನನಗೆ ತಿಳಿದಿರಲಿಲ್ಲ ಎಂಬುದು ಸತ್ಯ. ‘ಬಾನು ಮುಷ್ತಾಕ್‌’ ಮತ್ತವರ ‘ಎದೆಯ ಹಣತೆ’ ಎಷ್ಟು ಜನಕ್ಕೆ ಗೊತ್ತಿತ್ತು ನಿಜ ಹೇಳಿ? ಅಷ್ಟೇ ಅಲ್ಲ ದೀಪಾ ಬಾಸ್ತಿ ಮತ್ತವರ ‘ಹಾರ್ಟ್‌ ಆಫ್‌ ದಿ ಲ್ಯಾಂಪ್‌’ ಕೂಡಾ. ಗೊತ್ತಾಗುವಂತೆ ಮಾಡಿದ್ದು “ಬೂಕರ್” ಪ್ರಶಸ್ತಿ ಅಲ್ಲವೇ? ಬೇರೆ ಭಾಷೆಗಳಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಲಾಗುವ ಸಣ್ಣ ಕಥೆಗಳಿಗೆ ಕೊಡಮಾಡುವ ಬೂಕರ್‌ ಪ್ರಶಸ್ತಿ ಬಂದ ಮೇಲೆಯೇ ಇವರ ಮತ್ತು ಈ ಪುಸ್ತಕಗಳ ಹೆಸರು ಹೆಚ್ಚಾಗಿ ಕೇಳಿಬಂದದ್ದು, ಮತ್ತೂ ಮತ್ತೂ ಸಾಲದೆನಿಸುವಷ್ಟು ಪುಸ್ತಕಗಳಿಗೆ ಬೇಡಿಕೆ ಹೆಚ್ಚಾದದ್ದು.ಹಾಗಾದರೆ, ಡಿ ವಿ…

Read More

ಮಾಜಿ ಶಾಸಕ ಶರಣಪ್ಪ ಸುಣಗಾರ ಆರೋಪ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇವರ ಹಿಪ್ಪರಗಿ ಶಾಸಕರ ಒತ್ತಡ ಮತ್ತು ಕುಮ್ಮಕ್ಕಿನ ಮೇರೆಗೆ ಶಾಸಕರಂತೆ ವರ್ತನೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತಿನ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಪಟ್ಟಣದ ಅವರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನ ಬಂದಂತಹ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು. ಕುದರಸಾಲುವಾಡಗಿ ಗ್ರಾಮ ಪಂಚಾಯತ್ ಅತಿಕ್ರಮಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಿಲ್ಲಾ ಮುಖ್ಯ ರಸ್ತೆ ಹಾಯ್ದು ಹೋದ ಕಾರಣ ರಸ್ತೆಯ ಮಧ್ಯ ಭಾಗದಿಂದ ಎಡ ಮತ್ತು ಬಲ ಸೇರಿ ೬ಮೀಟರ್ ಇರಬೇಕು ಎಂದು ಸರಕಾರದ ನಿಯಮಾವಳಿ ಇದೆ. ಆದರೆ ಇವೆಲ್ಲವನ್ನು ಗಾಳಿಗೆ ತೂರಿ ಎರಡು ಬದಿಯಲ್ಲಿರುವ ಕಳೆದ ೫೦ವರ್ಷಗಳಿಂದ ವಾಸವಾಗಿ ಕಟ್ಟಿಕೊಂಡ ಮನೆ, ಅಂಗಡಿ, ಸಮುದಾಯ ಭವನಗಳನ್ನು ಶಾಸಕರು ದುರಾಡಳಿತ, ಅಧಿಕಾರದ ದಾಹ, ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಎಲ್ಲ ಆಸ್ತಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬೊಮ್ಮನಜೋಗಿ ತಾಂಡಾದಲ್ಲಿ ಪ್ರಾಥಮಿಕ ಶಾಲೆಯಿದ್ದು, ಅದನ್ನು ಹೋರಾಟ ಮಾಡಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಲು ಗ್ರಾಮಸ್ಥರೆಲ್ಲರೂ ಕಾರ್ಯಪ್ರವೃತ್ತರಾಗಿದ್ದರು ಎಂದು ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ನಾಯಕ ಹೇಳಿದರು.ಮನವಿ ಸಲ್ಲಿಸಿ ಮಾತನಾಡಿದ ಅವರು, ಶಾಲೆಯನ್ನು ಈಗಾಗಲೇ ಸರ್ಕಾರ ಉನ್ನತೀಕರಣ ಮಾಡಿ ಆದೇಶ ಹೊರಡಿಸಿದೆ. ಆದರೆ ಅಧಿಕಾರಿ ವರ್ಗ ಇದನ್ನು ಕೊಂಡಗೂಳಿ ಗ್ರಾಮಕ್ಕೆ ವರ್ಗಾಯಿಸಿರುವುದರಿಂದ ನೋವು ಉಂಟಾಗಿದೆ. ಇಲ್ಲಿ ನೂರಾರು ಮಕ್ಕಳು ಪ್ರೌಢ ಶಿಕ್ಷಣವನ್ನು ಪಡೆಯಲು ಸಿಂದಗಿ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಅದನ್ನು ನಿಯಂತ್ರಿಸಲು ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. ಇಲ್ಲಿಯ ಮಕ್ಕಳ ಸ್ಥಿತಿ ವ್ಯವಸ್ಥಿತವಾಗಿ ಸಾಗುತ್ತದೆ. ಕೂಡಲೇ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸರ್ಕಾರ ಆದೇಶ ಮಾಡಿರುವ ಹಾಗೆ ಪ್ರೌಢಶಾಲೆಯನ್ನು ಬೊಮ್ಮನಜೋಗಿ ಪ್ರಾಥಮಿಕ ಶಾಲೆಯಲ್ಲಿಯೇ ಉನ್ನತೀಕರಿಸಬೇಕಾಗಿ ಒತ್ತಾಯ ಮಾಡುತ್ತೇವೆ. ಒಂದು ವೇಳೆ ನಮ್ಮ ನ್ಯಾಯಕ್ಕೆ ತಕ್ಕ ಉತ್ತರ ಸಿಗದೇ ಹೊದ್ದಲ್ಲಿ ಜಿಲ್ಲಾ ಮತ್ತು ತಾಲೂಕಾ ಅಧಿಕಾರಿಗಳ ಕಚೇರಿಯ ಮುಂದೆ ಮಕ್ಕಳೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಗ್ರಾಮದ ದೇಸು ರಾಠೋಡ, ಆನಂದ…

Read More