ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೨೦/೧೧೦/೧೧ಕೆ.ವಿ ಬಾಗೇವಾಡಿ ಸ್ವೀ-ಕೇಂದ್ರದ ೧೦೦ ಎಮ್.ವಿ.ಎ-೧, ೨ ಮತ್ತು ೩ ಪರಿವರ್ತಕಗಳ ಮೇಲೆ ಬರುವ ಎಲ್ ಐ ಎಸ್‌ಗಳಾದ ಬಳೂತಿ, ಮಸೂತಿ, ಹನಮಾಪುರ ಮತ್ತು ಮುಳವಾಡ, ೧೧೦ಕೆವ್ಹಿ ಚಿಮ್ಮಲಗಿ ಹಾಗೂ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ, ಮಟ್ಟಿಹಾಳ, ಮಲಘಾಣ, ರೋಣಿಹಾಳ, ಮುಖರ್ತಿಹಾಳ, ನಿಡಗುಂದಿ, ದಿಂಡವಾರ, ಕನಕಾಲ, ಉಕ್ಕಲಿ ಹಾಗೂ ನಂದಿಹಾಳ, ಉಪ ಕೇಂದ್ರಗಳಲ್ಲಿ ಹಾಗೂ ೧೩ಕೆ.ವ್ಹಿ ಲಿಂಗದಳ್ಳಿ ಎಲ್.ಐ.ಎಸ್ ಹಾಗೂ ೩೩ಕೆವ್ಹಿ ಮನಗೂಳಿ, ಮುತ್ತಗಿ, ಹೂ.ಹಿಪ್ಪರಗಿ, ದೇವರ ಗೆಣ್ಣೂರ ಉಪಕೇಂದ್ರಗಳಲ್ಲಿಯು ಎರಡನೇ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿದ್ದು, ಈ ಕೇಂದ್ರಗಳಿಂದ ಹೊರಹೋಗುವ ೩೩ಕೆ.ವ್ಹಿ ಹಾಗೂ ೧೧ಕೆ.ವ್ಹಿ ಮಾರ್ಗಗಳಲ್ಲಿ ಸೆಪ್ಟೆಂಬರ್ ೨೦ರ ಬೆಳಿಗ್ಗೆ ೧೦ ರಿಂದ ಸಂಜೆ ೪ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
