ಉದಯರಶ್ಮಿ ದಿನಪತ್ರಿಕೆ
ವಿಜಯಪುರ:”ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಭಾಷೆಯಿದೆ ಮತ್ತು ಹಿಂದಿ ಭಾಷೆಯು ಬಹುತೇಕ ಪ್ರತಿಯೊಬ್ಬ ಭಾರತೀಯರಿಗೂ ತಿಳಿದಿರುವ ಮತ್ತು ಅದನ್ನು ಹೆಮ್ಮೆಯಿಂದ
ಅಳವಡಿಸಿಕೊಂಡಿದೆ” ಎಂದು ಡಾ.ಕೆ. ಎ.ಪಾಟೀಲ ಹೇಳಿದರು.
ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನಲ್ಲಿ ಹಿಂದಿ ವಿಭಾಗದದಿಂದ ಸೆ.೧೭ ಬುಧವಾರದಂದು ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹಿಂದಿ ಭಾಷೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಅವರ ಮಾರ್ಗದರ್ಶನ ಶ್ಲಾಘನೀಯ ಎಂದು ಹಿಂದಿ ಭಾಷೆಯ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ಪಾಟೀಲ, ಪ್ರೊ.ಬಿ.ವಿ ಪಾಟೀಲ, ಡಾ.ಸುಮಿ ಚೋಪಡೆ ಹಾಗೂ
ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಡಾ.ಸುಮಿ ಚೋಪ್ಡೆ ವಂದಿಸಿದರು.

