Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿಯ ಸೋಂಪುರ ರಸ್ತೆಯಲ್ಲಿರುವ ಸರ್ವೇ ನಂ.೮೪೨/ ೨೨ ೨ಎಕರೆ ೧೦ಗುಂಟೆ ಜಮೀನು | ಆತಂಕದಲ್ಲಿ ೮೦ಕ್ಕೂ ಅಧಿಕ ಸಂತ್ರಸ್ತ ಕುಟುಂಬಗಳು ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಸರ್ವೇ ನಂ.೮೪೨/ ೨೨ ೨ಎಕರೆ ೧೦ಗುಂಟೆಯ ಜಮೀನಿನಲ್ಲಿ ಕಳೆದ ಹಲವು ವರ್ಷಗಳಿಂದ ಪುರಸಭೆ ನೀಡಿದ ನಿವೇಶನದಲ್ಲಿ ಜೀವಿಸುತ್ತಿರುವ ೮೦ಕ್ಕೂ ಅಧಿಕ ಕುಟುಂಬಗಳ ಮನೆಗಳನ್ನು ತೆರವುಗೊಳಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಕಾರ್ಯಾಲಯದ ವತಿಯಿಂದ ನೋಟಿಸ್ ನೀಡಿ ಆ.೨೩ರರೊಳಗೆ ಮನೆಗಳನ್ನು ತೆರವುಗೊಳಿಸಬೇಕು ಎಂದು ಗಡುವು ನೀಡಿದೆ. ಈ ಜಾಗೆಯಲ್ಲಿ ವಾಸಿಸುವ ಎಲ್ಲ ಜನರಿಗೆ ನೋಟಿಸ್ ನೀಡಲಾಗಿದೆ. ಕೋರ್ಟ್ ಆದೇಶಯಿರುವುದರಿಂದ ಈ ಜಾಗೆಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಹಾಗಾಗಿ ನಿವಾಸಿಗಳು ಸಹಕರಿಸಿ ಎಂದು ಸ್ಥಳದಲ್ಲಿನ ನಿವಾಸಿಗಳಿಗೆ ಮನವಿ ಮಾಡಿಕೊಂಡರು. ಅವರ ಮಾತನ್ನು ಕೇಳಿದ ನಿವಾಸಿಗರು ನಾವು ದಿನಗೂಲಿ ಕೆಲಸ ಮಾಡಿ ಬದುಕು ಸಾಗಿಸುವವರು ನಮಗೆ ಸ್ವಲ್ಪ ವಿಷಕೊಟ್ಟು ಮನೆಗಳನ್ನು ತೆರವುಗೊಳಿಸಿ ಎಂದು ಕಣ್ಣೀರಿಟ್ಟರು. ಈ ವೇಳೆ ಇಂಡಿ ಎಸಿ ಅನುರಾಧಾ ವಸ್ತçದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ತ್ಯಾಜ್ಯ ನಿರ್ವಹಣೆಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಸಹಾಯವಾಣಿ ಘೋಷಿಸಿದ್ದು, ಸಾರ್ವಜನಿಕರು ಕಸವಿರುವ ಜಾಗೆಯ ಪೋಟೋ ತೆಗೆದು ಅದನ್ನು ಸಹಾಯವಾಣಿ ಸಂಖ್ಯೆಯಾದ ೭೩೩೭೮೮೮೮೪೯೦ ವ್ಯಾಟ್ಸಪ್ ಮೂಲಕ ರವಾನಿಸಿದರೆ ೨೪ಗಂಟೆಯಲ್ಲಿ ಆ ಜಾಗೆಯಲ್ಲಿರುವ ಕಸ ವಿಲೇವಾರಿ ಮಾಡಲಾಗುವುದು ಎಂದು ಸಿಂದಗಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ್ ಉಸ್ತಾದ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಕೇಂದ್ರ ಬಸ್‌ನಿಲ್ದಾಣ ಹಿಂದುಗಡೆ ಇರುವ ಸಾತವೀರೇಶ್ವರ ಸಭಾಭವನದಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದ ಶಿವಶರಣೆ ಮಂಜುಳಾ ತಾಯಿ ಅವರು ಸಿಂದಗಿ ರೊಟ್ಟಿ ಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣರ್ಥ ೧೨ನೆಯ ಮೌನಾನುಷ್ಠಾನದ ಮುಕ್ತಾಯ ಸಮಾರಂಭವನ್ನು ಆ.೨೬ರಂದು ಮಂಗಳವಾರ ಬೆಳಿಗ್ಗೆ ೯ಗಂಟೆಗೆ ಇಂಗಳೇಶ್ವರ ವಿರಕ್ತಮಠದ ವಚನ ಶಿಲಾ ಮಂಟಪದ ರುವಾರಿ ಚೆನ್ನಬಸವ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಮಂಗಲೋತ್ಸವ ಜರುಗಲಿದೆ.ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರಮಠ ಮಹಾಸಂಸ್ಥಾನ, ಶ್ರೀಮದ್ ಮಹಾರಾಜ ನಿರಂಜನ ಜಗದ್ಗುರು ಡಾ.ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು, ದಿವ್ಯ ಸಾನಿಧ್ಯವನ್ನು ಇಂಗಳೇಶ್ವರ ವಿರಕ್ತಮಠದ ಚೆನ್ನಬಸವ ಮಹಾಸ್ವಾಮಿಗಳು, ಸಾನಿಧ್ಯವನ್ನು ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕೊಟ್ಟೂರು ಚಾನುಕೋಟೆಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು, ಸುಗೂರೇಶ್ವರ ಶಿವಾಚಾರ್ಯರು, ಸಿಂದಗಿ ಸಾರಂಗಮಠ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಬಾಲಯೋಗಿ ಸಿದ್ದಲಿಂಗದೇವರು ವಹಿಸಿಕೊಳ್ಳುವರು. ಅತಿಥಿಗಳಾಗಿ ಶಾಸಕ ಅಶೋಕ ಮನಗೂಳಿ, ಅ.ಭಾ.ವಿ.ಅ.ಸಂಸ್ಥೆ ತಾಲೂಕಾ ಘಟಕದ ಅಧ್ಯಕ್ಷ ಅಶೋಕ ಗು. ವಾರದ, ಬಸವನ…
ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮಸೂದೆಗಳ ಮಂಡನೆ ಮಾಡಿ, ಅನುಮೋದನೆ | ಸ್ಪೀಕರ್ ಯು ಟಿ ಖಾದರ್ ಧನ್ಯವಾದ ಬೆಂಗಳೂರು: ಎರಡು ವಾರಗಳ ಕಾಲ ನಡೆದ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ಅಧಿಕೃತವಾಗಿ ತೆರೆ ಬಿದಿದ್ದು, ಪ್ರತಿಪಕ್ಷಗಳ ವಿರೋಧದ ನಡವೆಯೇ ಒಟ್ಟು 39 ಮಸೂದೆಗಳನ್ನು ಅಂಗೀಕರಿಸಲಾಗಿದೆ.ಈ ಬಗ್ಗೆ ಅಧಿವೇಶನದ ಸಮಾರೋಪದ ವೇಳೆ ಮಾಹಿತಿ ನೀಡಿರುವ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರು, ಕಳೆದ 9 ದಿನಗಳಲ್ಲಿ ಒಟ್ಟು 70 ಗಂಟೆಗಳ ಕಾಲ ಅಧಿವೇಶನ ನಡೆಸಲಾಗಿದೆ ಎಂದು ಹೇಳಿದ್ದಾರೆ.ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಅತಿ ಹೆಚ್ಚು ಅಂದರೆ 39 ವಿಧೇಯಕಗಳನ್ನು ಆಡಳಿತ ಪಕ್ಷ ಮಂಡನೆ ಮಾಡಿ ಅದಕ್ಕೆ ಅನುಮೋದನೆ ಪಡೆದಿದ್ದು, ಒಂದು ಇತಿಹಾಸ ಸೃಷ್ಟಿಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮಸೂದೆಗಳ ಮಂಡನೆ ಮಾಡಿ, ಅನುಮೋದನೆ ನೀಡಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲ ಆಡಳಿತ ಮತ್ತು ವಿಪಕ್ಷಗಳ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸ್ಪೀಕರ್ ತಿಳಿಸಿದ್ದಾರೆ.ಈ ಮೊದಲು ಅಧಿವೇಶನಗಳಲ್ಲಿ ಸುಮಾರು…
ಸಿಂದಗಿ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಕ್ತದಾನ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತೀ ಮುಖ್ಯವಾಗಿದೆ ಎಂದು ಶ್ರೀಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಆಶ್ರಯದಲ್ಲಿ ಸಾರಂಗಮಠದ ಪೂಜ್ಯ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಜನ್ಮದಿನದ ಪ್ರಯುಕ್ತ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜ, ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಕಾಲೇಜ, ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಜಯಪುರದ ಶ್ರೀ ಬಿ.ಎಂಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ದೊರೆಯುತ್ತದೆ. ಎಲ್ಲರೂ ಸ್ವಯಂ ಪ್ರೇರಿತರಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳಗಾರರ ಸಂಘ ಬೆಂಗಳೂರು, ವಿಜಯಪುರ ಪ್ರಾದೇಶಿಕ ಕಚೇರಿಯ ವತಿಯಿಂದ ಜಿಲ್ಲಾಧಿಕಾರಿ ಕೆ.ಆನಂದ ಅವರಿಗೆ ಶುಕ್ರವಾರ 2024-25 ನೇ ಸಾಲಿನ ದ್ರಾಕ್ಷಿ ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸುವಂತೆ ರಾಜ್ಯಧ್ಯಕ್ಷ ಅಭಯಕುಮಾರ ನಾಂದ್ರೇಕರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ನಾಂದ್ರೇಕರ ದ್ರಾಕ್ಷಿ ಬೆಳೆ ವಿಮೆ ಪರಿಹಾರವನ್ನು ಜಿಲ್ಲೆಯಲ್ಲಿರುವ ಎಲ್ಲ ದ್ರಾಕ್ಷಿ ಬೆಳೆಗಾರರಿಗೆ ಒಂದೇ ರೂಪದ ದ್ರಾಕ್ಷಿ ಬೆಳೆ ವಿಮೆ ಬಿಡುಗಡೆ ಮಾಡಬೇಕು. ವಿಮಾ ಕಂಪನಿಯವರ ಕಾರ್ಯಾಲಯವು ಬೆಂಗಳೂರಿನಲ್ಲಿ ಇರುವುದು ಅವರನ್ನು ಸಂಪರ್ಕಿಸಲು ರೈತರಿಗೆ ತೊಂದರೆಯಾಗುತ್ತದೆ, ಅದಕ್ಕಾಗಿ ವಿಜಯಪುರ ಮತ್ತು ಸುತ್ತಲೂ ಇರುವ ಜಿಲ್ಲೆಯಲ್ಲಿ 93ಕ್ಕೂ ಹೆಚ್ಚು ದ್ರಾಕ್ಷಿ ಬೆಳೆ ಬೆಳೆಯುವುದರಿಂದ ವಿಮಾ ಕಂಪನಿಯ ಕಾರ್ಯಾಲಯವನ್ನು ವಿಜಯಪುರದಲ್ಲಿ ತೆರೆಯಬೇಕು. 2025-26 ನೇ ಸಾಲಿನ ಹಂಗಾಮಿನಲ್ಲಿ ವಾತಾವರಣವು ದ್ರಾಕ್ಷಿ ಬೆಳೆಗೆ ಯೋಗ್ಯವಾಗಿಲ್ಲವೆಂದು ಕಂಡುಬಂದಿದ್ದು, ದ್ರಾಕ್ಷಿ ಬೆಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಕಾರಣ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಸರಕಾರಕ್ಕೆ ಹಾಗೂ ವಿಮಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ರೈತರು ಮತ್ತೆ ಸಂಕಷ್ಟಕ್ಕೆ ಈಡಾಗಿದ್ದಾರೆ.ಕಳೆದ ವರ್ಷ ಸಮರ್ಪಕ ಮಳೆ ಇರದೆ ಇರುವ ಕಾರಣ ಬೆಳೆಗಳ ಇಳುವರಿ ಕಡಿಮೆಯಾಗಿತ್ತು. ಆದರೆ ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿ ಬೆಳೆಗಳು ನೀರಿನಲ್ಲಿ ನಿಂತು ಬೆಳೆಗಳು ಕೊಳೆತಿವೆ. ಹೀಗಾಗಿ ಈ ಬಾರಿಯೂ ರೈತರ ಬೆಳೆಗಳು ನಷ್ಟಕ್ಕೆ ಈಡಾಗಿ ರೈತ ಕಂಗಾಲಾಗಿದ್ದಾನೆ.ಕೃಷಿ ಇಲಾಖೆಗೆ ಸಂಬಂಧಿಸಿದ ತೊಗರಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳು ನದಿ ಪಾತ್ರದಲ್ಲಿ ಹಾಗೂ ಬೋಳೆಗಾಂವ ಗ್ರಾಮದಲ್ಲಿ ಹಾಳಾಗಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಜಮೀನಿನಲ್ಲಿ ನೀರು ನಿಂತುಕೊಂಡು ಹಲವು ಬೆಳೆಗಳು ಹಾನಿಯಾಗಿದ್ದು ಒಂದೆಡೆಯಾದರೆ, ತೋಟಗಾರಿಕೆ ಬೆಳೆಗಳಾದ ನಿಂಬೆ ದಾಳಿಂಬೆ ಬೆಳೆಗಳು ಹಾನಿಯಾಗಿವೆ. ದಾಳಿಂಬೆ ಬೆಳೆಗೆ ಸತತ ಮಳೆಯಿಂದ ತುಂಬು ಕೊಳೆತು ದಾಳಿಂಬೆ ಕಾಯಿಗಳು ನೆಲಕಚ್ಚಿದ್ದು ರೈತರಿಗೆ ಬಾಯಿಗೆ ಬಂದ ತುತ್ತು ಕೈಗೆ ಸಿಗದಂತಾಗಿದೆ.ಒಟ್ಟಿನಲ್ಲಿ ಪ್ರತೀ ಬಾರಿಯೂ ರೈತರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಒಮ್ಮೆ ಮಳೆಯಾಗಲ್ಲ,…
ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ವಿಷಾದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಸ್ತ್ರೀಯರನ್ನು ದೇವಿಯೆಂದು ಪೂಜಿಸುವ ನಾಡಿನಲ್ಲಿ ಮಹಿಳೆಯರ ಮೇಲೆ ಪ್ರತಿದಿನವೂ ದೌರ್ಜನ್ಯ ನಡೆಯುತ್ತಿರುವುದು ದುರಂತ ಮತ್ತು ವಿಪರ್ಯಾಸ. ಕಾನೂನು ದೌರ್ಜನ್ಯವನ್ನು ಅಪರಾಧವೆಂದು ಘೋಷಿಸಿದರೂ, ಸಮಾಜದಲ್ಲಿ ಮಹಿಳೆಯ ಸುರಕ್ಷತೆ ಇನ್ನೂ ದೊಡ್ಡ ಪ್ರಶ್ನೆಯಾಗಿದೆ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ವಿಷಾದ ವ್ಯಕ್ತಪಡಿಸಿದರು.ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಶ್ವವಿದ್ಯಾಲಯ ಆವರಣದಲ್ಲಿ ಭವ್ಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳು, ವಿದ್ಯಾರ್ಥಿನಿಯರು ತಮ್ಮ ರಕ್ಷಣೆಗೆ ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು, ಸ್ವರಕ್ಷಣಾ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಹಾಗೂ ಯಾವುದೇ ಸಂದರ್ಭದಲ್ಲಿಯೂ ಎದೆಗುಂದದೆ ಪ್ರತಿರೋಧಿಸಬೇಕು ಎಂದು ಸಲಹೆ ನೀಡಿದರು.“ಯಾವುದೇ ಮಹಿಳೆಯ ಮೇಲಿನ ದೌರ್ಜನ್ಯವನ್ನು ಮಹಿಳಾ ವಿಶ್ವವಿದ್ಯಾಲಯ ಖಂಡಿಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ವಿಭಾಗ ಮತ್ತು ಕೇಂದ್ರದ ನಿರ್ದೇಶಕಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷದಂತೆ ಸೆ.೩೦ರಿಂದ ಅಕ್ಟೋಬರ್ ೦೪ರವರೆಗೆ ರಾಜ್ಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಭೇಟಿ ನೀಡಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಸ್ಸು ಮತ್ತು ರೈಲಿನ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ರಾಜ್ಯದಿಂದ ನಾಗಪುರಕ್ಕೆ ಭೇಟಿ ನೀಡಲಿರುವ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯ https://swd.karnataka.gov.in ವೆಬ್‌ಸೈಟ್ ಮೂಲಕ ಆ.೨೫ರಿಂದ ಸೆ.೯ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಿಜಯಪುರ ಜಿಲ್ಲೆಯ ಅನುಯಾಯಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮನವಿ ಮಾಡಿಕೊಂಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಳಹರಿವಿಗೆ ಅನುಗುಣವಾಗಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಹರಿಬಿಡಲಾಗುತ್ತಿದೆ. ಆದ್ದರಿಂದ ನದಿ ಪಾತ್ರದ ಗ್ರಾಮಗಳ ಜನರು ತಮ್ಮ ಜಾನುವಾರುಗಳನ್ನು ಹಾಗೂ ಕೃಷಿ ಉಪಕರಣಗಳ ಸಮೇತ ನದಿ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಕೃಷ್ಣಾ ಭಾಗ್ಯ ಜಲ ನಿಗಮದಿಂದ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
