ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ದೇವಣಗಾಂವ, ತಾವರಖೆಡ, ಕುಮಸಗಿ ಸೇರಿದಂತೆ ನೆರೆಗೆ ತುತ್ತಾದ ಗ್ರಾಮಗಳಿಗೆ ಸಿಂದಗಿ ವಿಧಾನಸಭಾ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರ ಅವರು ಬೇಟಿ ನೀಡಿ ಪ್ರವಾಹಕ್ಕೆ ತುತ್ತಾದ ಜನರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು ನದಿ ತೀರದ ಗ್ರಾಮದಲ್ಲಿ ಅತಿ ಮಳೆ ಮತ್ತು ನಮಗೆ ಬಂದ ಮಾಹಿತಿ ಪ್ರಕಾರ ಮಹಾರಾಷ್ಟ ರಾಜ್ಯದ ಉಜ್ಜನಿ ಜಲಾಶಯದಿಂದ -45000 ಕ್ಯುಸೆಕ್, ಸಿನಾ ಜಲಾಶಯದಿಂದ-1.80 ಲಕ್ಷ ಕ್ಯುಸೆಕ್, ವಿರ ಜಲಾಶಯದಿಂದ-25000 ಕ್ಯುಸೆಕ್ ಮತ್ತು ಭೋರಿ ಹಳ್ಳದಿಂದ ಒಟ್ಟು- 2.90 ಲಕ್ಷ ಕ್ಯುಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿರುವದರಿಂದ ನದಿತೀರದ ಗ್ರಾಮಗಳಲ್ಲಿ ಪ್ರವಾಹ ಹೆಚ್ಚಾಗಿದೆ. ಇದರಿಂದ ಜನ ಜಾನುವಾರ ಜೀವನ ದುಸ್ಥಿತಿಗೆ ತಲುಪಿದ್ದು, ಕೂಡಲೇ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಗಂಜಿ ಕೇಂದ್ರ ತೆಗೆದು ಜನರ ಹಾನಿ ನೋವಿಗೆ ಸ್ಪಂದಿಸಿ ಸೂಕ್ತ ಪರಿಹಾರ ನೀಡುವ ಕೇಲಸ ಆಗಬೇಕು. ಪ್ರತಿ ವರ್ಷ ನದಿತೀರದ ಗ್ರಾಮಗಳ ಜನರು ಪ್ರವಾಹ ಎದುರಿಸುವ ದುಸ್ಥಿತಿ ಬಂದೊದಗಿದೆ. ವಿಶೇಷವಾಗಿ ಸರ್ಕಾರ ಈ ಪ್ರವಾಹದ ಗಂಭೀರತೆಯನ್ನು ಅರಿತು ಈ ಭಾಗದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಭೀಮಾ ನದಿ ತೀರದ ಜನರಿಗೆ ಮತ್ತು ಗ್ರಾಮಗಳಾದ ಅಫಜಲಪೂರ, ಕಲಬುರಗಿ, ಜೇವರ್ಗಿ, ಚಿತ್ತಾಪೂರ ತಾಲ್ಲೂಕು ನದಿ ಪ್ರಾತದ ಜನ/ಜಾನುವಾರುಗಳನ್ನು ನದಿಯ ದಡದಲ್ಲಿ ಹೋಗದಂತೆ ಮುನ್ನಚ್ಚರಿಕೆ ವಹಿಸಬೇಕು. ಮತ್ತು ನದಿಯ ದಡದಲ್ಲಿ ಹೋಗದಂತೆ ಕ್ರಮ ವಹಿಸಬೇಕು, ಹಾಗೂ ಈಗಾಗಲೇ ಗುರುತಿಸಲಾದ ಎಲ್ಲಾ ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿ ಆ ಭಾಗದ ಜನರಿಗೆ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಮುಖಾಂಡರಾದ ವಿಠ್ಠಲ ಯರಗಲ್ಲ, ದೌಲತರಾಯ ಕಲಬಾ, ದತ್ತು ಸೋನ್ನ, ಶಿವಾನಂದ ಕಾಟ್ಕಾರ, ಮಹಾದೇವ ಬಿರಾದಾರ, ಸಿದ್ದು ಗಂಗನಹಳ್ಳಿ, ಅಣ್ಣಾರಾಯ ಅಫಜಲಪುರ, ಬಸುಗೌಡ ಬಗಲಿ, ಶಿವನಗೌಡ ಕಂಕೂರ, ಗುರು ಬಗಲಿ, ಮಹೇಶ್ ಭೋಗೊಂಡಿ, ರೇವಣಸಿದ್ದ ಅಫಜಲಪುರ ಪುಂಡಲೀಕ ಬಗಲಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

