ಎಸ್.ಬಿ ಕಲಾ & ಕೆ.ಸಿ.ಪಿ ವಿಜ್ಞಾನ ಕಾಲೇಜದಲ್ಲಿ ರಾಷ್ಟ್ರೀಯ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆ | ‘ಏಕ್ ಮುಟ್ಟಿ ಅನಾಜ್ & ಸ್ವಚ್ಛೋತ್ಸವ’ ಅಭಿಯಾನಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಯುವಕರು ಮೊಬೈಲ್ ಗೀಳು ಬಿಟ್ಟು ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು, ಸ್ವಯಂ ಸೇವೆಯ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸನ್ನದ್ಧರಾಗಬೇಕಾಗಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೊ.ರಾಜು ಬಿ. ಕಪಾಲಿ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ, ಎನ್ ಎಸ್ ಎಸ್ ೧ & ೨ ಘಟಕಗಳ ಸಹಯೋಗದಲ್ಲಿ ಬುಧವಾರ ದಂದು ಅಯೋಜಿಸಲಾದ “ಏಕ್ ಮುಟ್ಟಿ ಅನಾಜ್ ಮತ್ತು ಸ್ವಚ್ಛೋತ್ಸವ” ಅಭಿಯಾನದಡಿ ರಾಷ್ಟ್ರೀಯ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದಿನದ ೨೪ ಗಂಟೆಯೂ ಸದಾ ಸೇವೆಗೆ ಸಿದ್ಧರಾಗಿರಬೇಕು. ಎನ್ ಎಸ್ ಎಸ್ ಎಂಬುದು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದ ಶ್ರಮದಾನವಾಗಿದೆ. ಸ್ವಯಂ ಸೇವಕರು ದೇಶದಲ್ಲಿ ನಡೆಯುವ ಪ್ರಕೃತಿ ವಿಕೋಪಗಳು ಮತ್ತು ಅತಿವೃಷ್ಟಿ ಅನಾವೃಷ್ಟಿಯಂತಹ ಸಂಧರ್ಭದಲ್ಲಿ ಸದಾ ಸೇವೆಗೆ ಮುಂದಾಗಬೇಕು ಹಾಗೂ ನಮ್ಮ ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದೆ. ಎನ್ ಎಸ್ ಎಸ್ ಸ್ವಯಂ ಸೇವೆಯ ಮೂಲಕ ಸಾಕಾರಗೊಳಿಸು ಸಾಧ್ಯ. ಆದ್ದರಿಂದ ಇಂದಿನ ಯುವಕರು ಈ ನಿಟ್ಟಿನಲ್ಲಿ ಸ್ವಯಂ ಸೇವೆಗೆ ಮುಂದಾಗಬೇಕು ಎಂದರು..
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಉಪ ಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ. ಎಸ್. ಪಾಟೀಲ, ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ತರನ್ನುಮ್ ಜಬೀನ್ ಖಾನ್, ಡಾ.ಮಿಲನ್ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೂಪಾ ಮೋಟಗಿ ನಿರೂಪಿಸಿದರು.

