Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪಾ ಪೂಜೇರಿ ಬಣದ ವಿಜಯಪುರ ತಾಲೂಕಾ ಅಧ್ಯಕ್ಷರಾಗಿ ಜಮಖಂಡಿ ಗ್ರಾಮದ ಅನಮೇಶ ಜಮಖಂಡಿ ಹಾಗೂ ಆಹೇರಿ ಗ್ರಾಮದ ಬಸಗೊಂಡಪ್ಪ ತೇಲಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯ ಪ್ರಧಾನಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಆದೇಶ ಪ್ರತಿ ನೀಡಿ, ಸಂಘದ ತತ್ವ ಸಿದ್ದಾಂತಗಳನ್ನು ತಿಳಿ ಹೇಳಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸಬೇಕೆಂದು ಮಾತನಾಡಿದರು.ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ನೂರಾರು ಸಮಸ್ಯೆಗಳು ದಿನನಿತ್ಯ ತಾಂಡವಾಡುತ್ತಿವೆ ಅದಕ್ಕಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ನ್ಯಾಯಸಮ್ಮತವಾದ ನಿರ್ಧಾರ ಕೈಗೊಳ್ಳಬೇಕು ಅದರಲ್ಲಿ ಯಾವುದೇ ಜಾತಿ, ಮತ, ಪಕ್ಷ, ಮರೆತು ಜೊತೆಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯೆಕ ಹಾಗೂ ಪರೋಕ್ಷವಾಗಿ ಬೆಂಬಲ ನೀಡದೇ ಬಡವ ಶ್ರೀಮಂತ ಎಂದು ರೈತರನ್ನು ವಿಂಗಡನೆ ಮಾಡದೇ ರೈತರಿಗೆ ನೈಜ ನ್ಯಾಯ ಒದಗಿಸಬೇಕು ಎಂದರು.ಅದೇರೀತಿ ತಾಲೂಕಿನಾಧ್ಯಂತ ರೈತ ಸಂಘದ ಪುರುಷ, ಮಹಿಳಾ ಹಾಗೂ ಯುವ…
ಸೆ.೪ ರಂದು ಚಿಮ್ಮಡದಲ್ಲಿ ನಡೆಯಲಿರುವ ಶ್ರೀ ಪ್ರಭುಲಿಂಗೇಶ್ವರ ಜಾತ್ರೆ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಈ ಭಾಗದಲ್ಲಿ ಕಿಚಡಿ ಜಾತ್ರೆಯಂದೇ ಪ್ರಸಿದ್ದಿ ಪಡೆದ ಚಿಮ್ಮಡ ಶ್ರೀ ಪ್ರಭುಲಿಂಗೇಶ್ವರ ಜಾತ್ರೆಯನ್ನು ಈ ಬಾರಿ ವಿಶಿಷ್ಟ ರೀತಿಯಲ್ಲಿ ಅಧ್ದೂರಿಯಿಂದ ಆಚರಿಸಲು ಸೇವಕರ ಸಭೆಯಲ್ಲಿ ನಿರ್ಧರಿಸಲಾಯಿತು.ಸ್ಥಳಿಯ ವಿರಕ್ತಮಠದ ಚನ್ನಬಸವೇಶ್ವರ ಸಭಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಾತ್ರಾ ಸೇವಾಕಾರ್ಯ ಪ್ರಾರಂಭೋತ್ಸವ ಸಭೆಯ ಸಾನಿಧ್ಯವಹಿಸಿದ್ದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿ ಗ್ರಾಮದ ಎಲ್ಲ ಸಮುದಾಯಗಳ ಪ್ರತಿ ಕುಟುಂಬದ ಸದಸ್ಯರು ತಾವು ಸಲ್ಲಿಸುತಿದ್ದ ಪಾರಂಪರಿಕ ಸೇವೆಯನ್ನು ಮರೆಯಬಾರದು ಜಾತ್ರೆಯು ಪ್ರಸಿದ್ದಿ ಪಡೆಯುತಿದ್ದಂತೆಯೇ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಭಕ್ತರಿಗೆ ಯಾವುದೇ ತರಹದ ತೊಂದರೆಯಾಗದಂತೆ ನಾವೆಲ್ಲ ನೋಡಿಕೊಳ್ಳಬೇಕಾಗಿದೆ. ಕಿಚಡಿ ಪ್ರಸಾದವನ್ನೂ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸ ಬೇಕಾಗಿದೆ, ಪ್ರಸಾದದ ಗುಣಮಟ್ಟವನ್ನೂ ಕಾಪಾಡಬೇಕಾಗಿದೆ, ಹಾಗೂ ಎಲ್ಲ ಭಕ್ತಾದಿಗಳಿಗೆ ಮುಟ್ಟುವಂತೆ ಸೇವಕರು ನೋಡಿಕೊಳ್ಳಬೇಕಾಗಿದೆ ಎಂದರು.ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ ಮಾತನಾಡಿ, ಜಾತ್ರೆ ಮುಗಿಯುವವರೆಗೆ ಗ್ರಾಮದ ಪ್ರತಿಯೊಬ್ಬರು ಪ್ರಭುವಿನ ಸೇವಕರಾಗಿ ವ್ಯವಸ್ಥಿತವಾಗಿ ದುಡಿದು ಜಾತ್ರೆಯನ್ನು ಯಶಸ್ವಿಗೊಳಿಸಿ ಪ್ರಭುವಿನ…
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸಲಹೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಬಡತನ ಒಂದು ಸಮಸ್ಯೆ ಅಲ್ಲ ಅದನ್ನು ಮೆಟ್ಟಿ ನಿಂತಾಗ ಜೀವನದ ಗುರಿ ಮುಟ್ಟಬಹುದು ಎಂದು ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡೆ, ಸಾಂಸ್ಕೃತಿಕ, ಏನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೆಡ್ ಕ್ರಾಸ ವಿಭಾಗಗಳು ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ನಾನು ಬಡತನದಲ್ಲಿ ಬೆಳೆದು ಬಂದವನು. ಒಂದು ಹಾಲಿನ ಕಂಪನಿಯ ಕ್ಯಾನ್ ತೊಳೆಯುತ್ತಿದ್ದ ನಾನು ಅದೇ ಕಂಪನಿಯ ಪರವಾನಗಿಯ ನವೀಕರಣದ ಅಧಿಕಾರಿಯಾಗಿದ್ದು ಹೆಮ್ಮೆಯ ಸಂಗತಿ ಎಂದರು.ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್.ಅವಜಿ ಅವರು ಸರಸ್ವತಿ ಪ್ರತಿಮೆಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.ಸಂಸ್ಥೆಯ ಹಿರಿಯ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವರ್ಷವಿಡಿ ಜರುಗುತ್ತಿರಬೇಕು, ಅಂದಾಗ ಮಾತ್ರ ಈ ಉದ್ಘಾಟನೆಗೆ ಮಹತ್ವ ಬರುತ್ತದೆ ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ…
ಸಿಎಂ ರೇಸ್’ನಲ್ಲಿ ನಾನಿಲ್ಲದಿದ್ದರೂ ಗೆಲುವು ನಮ್ಮದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ನಾನಿಲ್ಲದಿದ್ದರೂ, ಕಾಂಗ್ರೆಸ್ ಅಧಿಕಾರಕ್ಕೇರುವುದನ್ನು ಖಚಿತಪಡಿಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸದನದಲ್ಲಿ ಸಿದ್ದರಾಮಯ್ಯ ಅವರು ಸಿಎಂ ರೇಸ್ ನಲ್ಲಿ ಇರದಿದ್ದರೆ, ಕಾಂಗ್ರೆಸ್ ಮತಗಳು ವಿರೋಧ ಪಕ್ಷಗಳಿಗೆ ಹೋಗುತ್ತವೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮುಂದಿನ ಸಿಎಂ ರೇಸ್ ನಲ್ಲಿ ಇರುವುದಿಲ್ಲ. ಆದರೆ ನಮ್ಮ ಮತಗಳು ನಿಮಗೆ (ವಿರೋಧ ಪಕ್ಷಗಳಿಗೆ) ಯಾವುದೇ ಕಾರಣಕ್ಕೂ ನಿಮಗೆ ಬರುವುದಿಲ್ಲ. ಏಕೆಂದರೆ ನೀವು ದಲಿತ ವಿರೋಧಿ, ಒಬಿಸಿ ವಿರೋಧಿ ಮತ್ತು ಅಲ್ಪಸಂಖ್ಯಾತರ ವಿರೋಧಿ. ಬಿಜೆಪಿ ಮತ್ತು ಜೆಡಿಎಸ್ ಒಂದಾದರೂ, ಕಾಂಗ್ರೆಸ್‌ನ 141 ಸ್ಥಾನಗಳು ಕಡಿಮೆಯಾಗುವುದಿಲ್ಲವಾದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ, ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಯತ್ನಾಳ್ ಅವರಾಗಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ನನ್ನನ್ನು ಉಚ್ಚಾಟಿತ ಎನ್ನುತ್ತಿದ್ದೀರಿ. ನಿಮ್ಮನ್ನೂ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಾ ಯುವ ಕಾಂಗ್ರೆಸ್ ವತಿಯಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತ ಮತ್ತು ಬಸ್ ನಿಲ್ದಾಣದಲ್ಲಿ ಮತಗಳ್ಳತನ ವಿರುದ್ದ ಅಭಿಯಾನ ಜರುಗಿತು.ತಾಲೂಕಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅವಿನಾಶ ಬಗಲಿ ಮಾತನಾಡಿ, ಮತಗಳ್ಳತನ ಕರ್ನಾಟಕದ ಜನರ ವಿರುದ್ದ ನಡೆದ ಹೀನ ಅಪರಾಧ, ಕರ್ನಾಟಕ ಸರಕಾರ ಈ ಅಪರಾಧದ ಬಗ್ಗೆ ತನಿಖೆ ನಡೆಸಬೇಕು. ಹಾಗೂ ಜನರಿಗೆ ನ್ಯಾಯ ಕೊಡಿಸಬೇಕು ಎಂದರು.ದೇಶದ ಎಲ್ಲ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿದ್ದು ಈ ಬಗ್ಗೆ ಚುನಾವಣೆ ಆಯೋಗ ಮಾಹಿತಿ ನೀಡಬೇಕು. ಕರ್ನಾಟಕದಲ್ಲಿ ಸಿಕ್ಕ ಮಾಹಿತಿ ಕುತಂತ್ರದ ಸಾಕ್ಷಿಯಾಗಿದೆ. ಚುನಾವಣೆ ಆಯೋಗ ಬಿಜೆಪಿಗೆ ಅಲ್ಲ, ಸಂವಿಧಾನಕ್ಕೆ ಕೆಲಸ ಮಾಡಬೇಕು ಎಂದರು.ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಭೀಮಾಶಂಕರ ಮೂರಮನ, ಪುರಸಭೆ ಸದಸ್ಯರಾದ ಅಯೂಬ ಬಾಗವಾನ, ಸುಧೀರ ಕರಕಟ್ಟಿ, ಶಹೀನಶಹಾ ಜಹಾಗೀರದಾರ, ಸತೀಶ ಹತ್ತಿ, ಸುನೀಲ ಅತನೂರ, ರಯಿಸ ಅಷ್ಟೇಕರ, ಮಹಿಬೂಬ ಜಹಾಗೀರದಾರ, ಸುಭಾಸ ಬಾಬರ, ಸಂಜೀವ ರಾಠೋಡ, ಸಂತೋಷ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಅನುದಾನಿತ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ವಿಶ್ವದ ಬಲಿಷ್ಠ ರಾಷ್ಟ್ರ ಎಂದು ಭಾರತವನ್ನು ಪ್ರಪಂಚದ ಎಲ್ಲಾ ದೇಶಗಳು ತನ್ನತ ನೋಡುವಂತೆ ಮಾಡುವಲ್ಲಿ ನಮ್ಮ ದೇಶದ ಬಾಹ್ಯಾಕಾಶ ವಿಜ್ಞಾನಿಗಳು ಯಶಸ್ವಿ ಚಂದ್ರಯಾನ ವನ್ನು ಸಫಲಗೊಳಿಸಿ ನಮ್ಮ ದೇಶವು ಸಂಶೋಧನೆಯಲ್ಲಿಯೂ ಅಗ್ರಸ್ಥಾನದಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನ ಆಸೆಯಂತೆ ಚಂದ್ರನಮೇಲೆ ಮನುಷ್ಯ ಹೋಗಬಲ್ಲ ಎಂಬುದಕ್ಕೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳಾದ ತಾವು ಸಹ ಇಂತಹ ವೈಜ್ಞಾನಿಕ ಅನ್ವೇಷಣೆ ಹಾಗೂ ಸಂಶೋಧನೆಗಳನ್ನು ಮಾಡುವತ್ತ ಬಾಲ್ಯದಿಂದಲೇ ಪ್ರಯತ್ನ ಪಡಬೇಕು ಅದಕ್ಕೆ ಸೂಕ್ತವಾದ ಅವಕಾಶಗಳನ್ನು ಹಾಗೂ ಪ್ರೇರೇಪಣೆ , ಮಾರ್ಗದರ್ಶನ ನಮ್ಮ ಶಾಲೆ ನಿಮಗೆ ನೀಡುತ್ತದೆ. ಮುಂದೊಂದು ದಿನ ವಿಶ್ವದ ವಿಜ್ಞಾನಿಗಳ ಸಾಲಿನಲ್ಲಿ ನಮ್ಮ ದೇಶದ ಪ್ರತಿನಿಧಿತ್ವವನ್ನು ತಮ್ಮಿಂದ ಆಗಬೇಕು ಎಂದರು. ಈ ವೇಳೆ ಕುಮಾರಿ ಸಮೃದ್ಧಿ ಸಗಣಾಚಾರಿ ಮಾತನಾಡಿ, ಇಂದು ನಮ್ಮ ಶಾಲೆಯಲ್ಲಿ ವಿಶ್ವ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: 2025-26ನೇ ಸಾಲಿನ ಕೊಲ್ಹಾರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಅ.೩೧ ರಂದು ಬೆಳಿಗ್ಗೆ 9:30 ಕ್ಕೆ ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವನ ಬಾಗೇವಾಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್. ಅವಟಿ ಪ್ರಕಟಣೆಗೆ ತಿಳಿಸಿದ್ದಾರೆ.ಈ ಬಾರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಪುರುಷ ಹಾಗೂ ಮಹಿಳೆಯರು ದಸರಾ ಸಿಎಂ ಕಪ್ ಕ್ಯೂ ಆರ್ ಕೋಡ್ ನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕಡ್ಡಾಯವಾಗಿ ತಾವು ಭಾಗವಹಿಸುವ ಕ್ರೀಡೆಗಳನ್ನು ನೋಂದಣಿ ಮಾಡಿಕೊಂಡು ನೋಂದಣಿ (ರಜಿಸ್ಟರೇಷನ್) ಫಾರ್ಮ್ ನೊಂದಿಗೆ ಕಡ್ಡಾಯವಾಗಿ ಭಾಗವಹಿಸತಕ್ಕದು. ಇದರ ಜೊತೆಗೆ ಶಾಲೆ, ಕಾಲೇಜಿನ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಮತದಾರನ ಗುರುತಿನ ಚೀಟಿ, ಸರ್ಕಾರದಿಂದ ಅಧಿಕೃತವಿರುವ ಯಾವುದಾದರೂ ಒಂದು ಗುರುತಿನ ಚೀಟಿಗಳನ್ನು ಹಾಗೂ ಒಂದು ಐಡೆಂಟಿ ಸೈಜ್ ಫೋಟೋ ತರಬೇಕು.ಪುರುಷ ಹಾಗೂ ಮಹಿಳೆಯರಿಗಾಗಿ ಓಟಗಳು, ಜಿಗಿತಗಳು, ಎಸೆತಗಳು, ರಿಲೇ, ಖೋಖೋ, ಕಬಡ್ಡಿ, ವ್ಹಾಲಿಬಾಲ್,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ವಿಜಯಪುರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರ್ಗಿಯ ಖಾಯಂ ಜನತಾ ನ್ಯಾಯಾಲಯ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಆ.೨೮ರಂದು ಖಾಯಂ ಜನತಾ ನ್ಯಾಯಾಲಯ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಭಿಯಾನವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹರೀಶ ಎ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಲಬುರ್ಗಿ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರಾದ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ, ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷö್ಮಣ ನಿಂಬರಗಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಲಾದ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಯಲ್ಲಾಲಿಂಗ ಎಂಬ ಶ್ರೇಷ್ಠ ರತ್ನವನ್ನು ನೀಡಿದ ಸ್ಥಳ ಮಿರಗಿ ಗ್ರಾಮ. ಈ ಸಂತ ಏಳು ಕೋಟಿ ಜಪ-ತಪ ಮಾಡಿ ಸಮಾಜಕ್ಕೆ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು,ಲಚ್ಯಾಣದ ಸಿದ್ಧಲಿಂಗ ಪ್ರಭುವಿನ ಶಿಷ್ಯನಾಗಿ ಸಮಾಜದ ಪರಿವರ್ತನೆ ಕೆಲಸ ಮಾಡಿದ ಮಹಾತ್ಮ ಎಂದು ಶಿಕ್ಷಕ ವೈ ಜಿ ಬಿರಾದಾರ ಹೇಳಿದರು.ಅವರು ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಶ್ರೀ ಯಲ್ಲಾಲಿಂಗ ಮಹಾರಾಜರ ಜೀವನ ಚರಿತ್ರೆ’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.ಶಿವಪ್ಪ, ಕಾಶಿಬಾಯಿ ಪುಣ್ಯ ದಂಪತಿಗಳ ಮಗನಾಗಿ ಜನಿಸಿದ ಯಲ್ಲಪ್ಪ ಎಂಟು ವರ್ಷ ಪ್ರಾಯದಲ್ಲೇ ಶಿವಧ್ಯಾನ ನಿರತನಾಗಿ ಕುರಿ ಕಾಯುವ ಕಾಯಕ ಮಾಡುತ್ತ, ಮುಂದೆ ಹಲವು ಕಷ್ಟಗಳ ಮಧ್ಯೆ ಯಲ್ಲಾಲಿಂಗರು ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವನ್ನಾಗಿಸಿ ಭವ್ಯ ಮಠ ಕಟ್ಟಿದ ಮಹಾನ್ ಸಂತರಿವರು ಎಂದು ಹೇಳಿದರು.ಲಚ್ಯಾಣ ಸಿದ್ದಲಿಂಗರಿಂದ ದೀಕ್ಷೆ ಪಡೆದು ಬೆತ್ತ ಜೋಳಿಗೆ ಹಿಡಿದು ಯಲ್ಲಾಲಿಂಗ ಮಹಾರಾಜನಾಗಿ ದೇಶದಲ್ಲಿ ಮೆರೆದ ಅವರ ಲೋಕ ಕಲ್ಯಾಣ ಕಾರ್ಯ ಅನುಪಮವಾದುದು.ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ಯಲ್ಲಾಲಿಂಗರಕೀರ್ತಿ ಹರಡಿತ್ತು. ಜನರ ಆಡುನುಡಿಗಳಲ್ಲಿ ಸರಳವಾಗಿ ಜೀವನ ಸಂದೇಶ ನೀಡುತ್ತಾ, ಜನಸೇವೆಯೇ ಜನಾರ್ಧನ ಸೇವೆ ಎಂದರಿತ ಯಲ್ಲಾಲಿಂಗರ ಬದುಕೇ ಅದ್ಭುತವಾದುದುಎಂದು ಹೇಳಿದರು.ಸಾಹಿತಿ ಸಿ ಎಂ…
ಆಲಮಟ್ಟಿಯ ಹಳಕಟ್ಟಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಿಕ್ಷಣ ರಂಗದಲ್ಲಿ ಕ್ರೀಡಾ ಚಟುವಟಿಕೆಗಳು ಮಹತ್ವದ ಪಾತ್ರವಹಿಸುತ್ತದೆ. ಕ್ರೀಡೆಗಳು ಮನ ತಣಿಕೆಯ ಆಟಗಳಾಗಿವೆ ಅಲ್ಲದೇ ಆರೋಗ್ಯ ಭಾಗ್ಯ ಕುಣಿಕೆಯ ಕಣಜವೂ ಅಗಿವೆ. ಆ ಕಾರಣ ಕ್ರೀಡೆಗಳಿಗೆ ಶಾಲಾ ಹಂತದಲ್ಲೇ ಪ್ರಾಮುಖ್ಯತೆ ನೀಡಬೇಕಾದ ಅಗತ್ಯತೆ ಇದೆ ಎಂದು ಧಾರವಾಡ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಪ್ರಾಯಿಸಿದರು. ಆಲಮಟ್ಟಿಯ ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ನಡೆದ ನಿಡಗುಂದಿ “ಎ”ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಗತ್ಯ ಎಂದರು. ಜೀವನದಲ್ಲಿ ಎಲ್ಲ ಸಂಪತ್ತುಗಿಂತ ಆರೋಗ್ಯ ಸಂಪತ್ತವೇ ಮೇಲು. ಆರೋಗ್ಯ ಸಂಪತ್ತು ಅತೀ ಶ್ರೇಷ್ಠ ಸಂಪತ್ತು ಎನ್ನುವುದು ಎಲ್ಲರಿಗೂ ತಿಳಿದಿದ್ದರೂ ಈ ಸಂಪತ್ತು ಸಂರಕ್ಷಿಸಿಕೊಳ್ಳಲು ಭಾಗಶಃ ವಿಫಲರಾಗುತ್ತಿದ್ದೇವೆ. ಆರೋಗ್ಯ ಖನಿಜ ಎಷ್ಟೋಂದು ಅಗಾಧ ಎಂಬುದು ಪ್ರತಿಯೊಬ್ಬರ ಅರಿವಿಗೆ ಬಂದದ್ದು ಮಾತ್ರ ಕೋವಿಡ್ ಸಂದರ್ಭದಲ್ಲಿ, ಕೋವಿಡ್…
