ಇಂದು (ಸೆಪ್ಟಂಬರ್ ೨೭, ಶನಿವಾರ) ‘ಗೂಗಲ್’ ನ ೨೫ನೇಯ ವಾರ್ಷಿಕೋತ್ಸವದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇಂದಿನ ಡಿಜಿಟಲ್ ಯುಗದಲ್ಲಿ ಇಡೀ ಜಗತ್ತನ್ನು ಬೆರಳ ತುದಿಯಲ್ಲಿ ದೊರೆಯುವಂತೆ ಮಾಡಿದ್ದು, ಕೇಳಿದ ಪ್ರಶ್ನೆಗೆ ಉತ್ತರ, ಅವಶ್ಯಕ ಮಾಹಿತಿಯೊಂದಿಗೆ ನೀಡುವ ಏಕೈಕ ತಂತ್ರಜ್ಞಾನಯುಕ್ತವಾದ ಸಾಫ್ಟವೇರ ಅಂದರೆ ಅದುವೇ ‘ಗೂಗಲ್’. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧ ಹೀಗೆ ಮೋಬೈಲ್ ಬಳಸುವ ಎಲ್ಲರಿಗೂ ಗೂಗಲ್ ಎಂದರೆ ತಿಳಿಯದೇ ಇರಲಾರದು. ಪ್ರತಿದಿನ ನಮಗೆ ಅಗತ್ಯವಾದ ಮತ್ತು ತಿಳಿದುಕೊಳ್ಳಲು ಬಯಸುವ ಯಾವುದೇ ವಿಷಯ ಅಥವಾ ಮಾಹಿತಿಯನ್ನು ಇದರಿಂದ ಪಡೆಯುತ್ತೇವೆ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಪಠ್ಯದಲ್ಲಿ ದೊರಕದೇ ಇರುವ ಯಾವುದೇ ಸಂಗತಿಯನ್ನು ಮತ್ತು ಸಂಪನ್ಮೂಲವನ್ನು ಒದಗಿಸುವ ಒಂದು ಸಾಧನವಾಗಿದೆ. ನಾವು ಪ್ರತಿದಿನ ಗೂಗಲ್ ಎಂಬುದನ್ನು ಬಳಸುತ್ತಿದ್ದರೂ ಅದರ ಪೂರ್ಣ ಹೆಸರು ಏನೆಂದು ಹುಡುಕಿಲ್ಲ. ಗೂಗಲ್ ಎಂದರೆ ಗ್ಲೋಬಲ್ ಆರ್ಗನೈಸೇಶನ್ ಆಫ್ ಓರಿಯಂಟೆಡ್ ಗ್ರೂಪ್ ಲ್ಯಾಂಗ್ವೇಜ್ ಆಫ್ ಅರ್ಥ ಎಂಬುದಾಗಿದೆ. ಈ ಗೂಗಲ್ ಕಂಪನಿ ಇಂದು ವಿಶ್ವದ ಇಂಟರನೆಟ್ ಪ್ರಪಂಚವನ್ನು ಆಳುತ್ತಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ ಇಂಜಿನ್ ಇದಾಗಿದೆ.

ಗೂಗಲ್ ಎಂಬ ಹೆಸರು ಹೇಗೆ ಬಂತು: “ಅಮೇರಿಕದ ಗಣಿತ ತಜ್ಞ ಎಡ್ವರ್ಡ ಕಸ್ನರ್ ೧೯೨೦ ರಲ್ಲಿ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚನೆ ಮಾಡುತ್ತಿರುವಾಗ ಅದಕ್ಕೆ ಏನು ಹೆಸರಿಡಬೇಕೆಂದು ತನ್ನ ೯ ವರ್ಷ ಸೋದರ ಸಂಬಂಧಿಯ ಮಗನಾದ ಮಿಲ್ಟನ್ ಸಿರೋಟಾ ಈತನಿಗೆ ಕೇಳಿದಾಗ ಕುಚೇಷ್ಟೆಯಿಂದ ಆ ಹುಡುಗ ಹೇಳಿದ ಹೆಸರು ‘ಗೂಗಲ್’. ನಂತರ ಅದುವೇ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿತು. ಗೂಗಲ್ ಬೆಳೆದಂತೆಲ್ಲಾ ಅದರ ಕೀರ್ತಿ ಹೆಚ್ಚಾಗಿ ಗೂಗಲ್ ಎಂಬ ಹೆಸರು ವಿಶ್ವದಾದ್ಯಂತ ಮನೆಮಾತಾಗಿ ಪ್ರಸಿದ್ಧಿ ಪಡೆಯಿತು. ‘೧’ ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಸಿಗುವ ಪದಗಳಿಗೆ ‘ಗೂಗಲ್’ ಎನ್ನುತ್ತಾರೆ.
ಗೂಗಲ್ ಇದು ೧೯೯೮ ರಲ್ಲಿ ಸೆರ್ಗೆ ಬಿನ್ ಮತ್ತು ಲ್ಯಾರಿ ಪೇಜ್ ಇವರಿಂದ ಸ್ಥಾಪಿತವಾದ ಒಂದು ಅಮೇರಿಕನ್ ಕಂಪನಿಯಾಗಿದೆ. ೨೦೧೫ ರಿಂದ ಗೂಗಲ್ ಹೋಲ್ಡಿಂಗ್ ಕಂಪನಿ ಅಲ್ಫಾಬೆಟ್, ಇಂಕ್‌ನ ಅಂಗಸಂಸ್ಥೆಯಾಗಿದೆ. ಇದು ಅತಿ ಹೆಚ್ಚು ಬಳಕೆದಾರರ ಆನಲೈನ್ ಹುಡುಕಾಟದ ವಿನಂತಿಗಳನ್ನು ನಿರ್ವಹಿಸುತ್ತದೆ. ಇದರ ಪ್ರಧಾನ ಕಛೇರಿ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂ ನಲ್ಲಿದೆ. ಈ ಸಂಸ್ಥೆಯ ಪ್ರಮುಖ ಉದ್ಧೇಶವೆಂದರೆ ಜಾಗತಿಕವಾಗಿ ಅವಶ್ಯಕವಾದ ಮಾಹಿತಿ ಮತ್ತು ವಿಷಯವನ್ನು ಸುಲಭವಾಗಿ ದೊರಕುವಂತೆ ಮತ್ತು ಉಪಯೋಗಿಸುವಂತೆ ಮಾಡುವುದಾಗಿದೆ. ಈ ಸಪ್ಟಂಬರ ೨೭ ರಂದು ಸಂಸ್ಥೆಯು ತನ್ನ ೨೫ ನೇಯ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಇದರ ಇನ್ನೊಂದು ವಿಶೇಷತೆ ಎಂದು ಹೇಳಬಹುದು.
ಗೂಗಲ್ ನ ಪ್ರಯೋಜನಗಳು: ಗೂಗಲ್ ತಂತ್ರಜ್ಞಾನದ ಪ್ರಪಂಚದಲ್ಲಿ ಒಂದು ಶಕ್ತಿಶಾಲಿಯಾದ ತಂತ್ರಜ್ಞಾನವಾಗಿದ್ದು, ಮಾಹಿತಿ ಹುಡುಕಲು, ಸಂವಹನ ಮಾಡಲು, ಅವಶ್ಯಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲು, ವ್ಯವಹಾರ, ವ್ಯಾಪಾರ, ಮಾರ್ಕೆಟಿಂಗ್ ತಂತ್ರಗಾರಿಕೆಗಳನ್ನು ಅರಿಯಲು ಮತ್ತು ದೈನಂದಿನ ಜೀವನವನ್ನು ಹೆಚ್ಚು ಸುಲಭಗೊಳಿಸುವಲ್ಲಿ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆರ್ಥಿಕ ಅಭಿವೃದ್ಧಗೆ ಸಹಕಾರಿಯಾಗಿದೆ.
ಕೊನೆಯ ನುಡಿ: ಆಡು ಮುಟ್ಟದ ಗಿಡವಿಲ್ಲ, ಗೂಗಲ್ ನೀಡದ ಮಾಹಿತಿಯಿಲ್ಲ ಎಂಬಂತೆ ಜಗತ್ತಿನಲ್ಲಿ ಏಲ್ಲೆಲ್ಲೂ ಸಿಗದ ವಿಷಯ, ಮಾಹಿತಿ ಮತ್ತು ಅಗತ್ಯವಾದ ಸಂಗತಿಗಳನ್ನು ಪೂರೈಸುವಮತ್ತು ‘ಗೂಗಲ್ ಗುರು’ ವಾಗಿ ಪರಿಣಮಿಸಿರುವ ಈ ಗೂಗಲ್ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಸಾಧಿಸಲಿ ಮತ್ತು ಜನರಿಗೆ ಉಪಯುಕ್ತಕಾರಿ ಮಾಹಿತಿಯನ್ನು ನೀಡಲೆಂಬುದೇ ನನ್ನ ಆಶಯ.
