ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನ್ ರಾಷ್ಟ್ರೀಯವಾದಿ ಪಂ. ದೀನ್ ದಯಾಳ ಉಪಾಧ್ಯಾಯರ ಜಯಂತೋತ್ಸವವನ್ನು ಬಿಜೆಪಿ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಾರ್ಡ್ ನಂ.೬ ರ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಸಂದೇಶ ಸಾರಿದರೆ, ಬಿಜೆಪಿ ನಗರ ಮಂಡಳ ವತಿಯಿಂದ ಶ್ರೀ ಶಿವಾಜಿ ಮಹಾರಾಜರ ವೃತ್ತದಲ್ಲಿ ಪಂ.ದೀನದಯಾಳ ಉಪಾದ್ಯಾಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದೇಶದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಬೆಳೆಯುವಲ್ಲಿ ಪಂ.ದೀನದಯಾಳ ಉಪಾಧ್ಯಾಯ ಅವರ ಸಮರ್ಪಣಾ ಮನೋಭಾವ, ದೂರದೃಷ್ಟಿಯ ಜನಪರ ಚಿಂತನೆ ಕಾರಣ, ಅನೇಕ ತ್ಯಾಗಗಳನ್ನು ಮಾಡಿ ಈ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ, ಈ ಪಕ್ಷ ನಮಗೆ ಮಾತೃ ಸಮಾನ, ಅವರು ಕಟ್ಟಿದ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ, ದಿ. ಅಟಲ್ ಬಿಹಾರಿ ವಾಜಪೇಯಿ, ದಿ.ಲಾಲ್ ಕೃಷ್ಣ ಅಡ್ವಾಣಿ, ಪ್ರಸ್ತುತ ನರೇಂದ್ರ ಮೋದಿಜಿ ಸೇರಿದಂತೆ ಅನೇಕ ನಾಯಕರಿಗೆ ಪಂಡಿತ ದಯಾಳ ಉಪಾಧ್ಯಾಯರ ಆದರ್ಶಗಳೇ ಸ್ಪೂರ್ತಿ ತುಂಬಿವೆ, ಸರಳ ವ್ಯಕ್ತಿತ್ವದ ಪಂ.ದೀನದಯಾಳ ಅವರು ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದರು, ಪ್ರಖರ ಬರಹಗಾರರು, ರಾಷ್ಟ್ರೀಯ ಚಿಂತಕರೂ, ಅದಮ್ಯ ದೇಶಭಕ್ತರಾಗಿದ್ದ ಪಂ.ದಿನದಯಾಳ ಉಪಾಧ್ಯಾಯರಲ್ಲಿದ್ದ ದೇಶಪ್ರೇಮ, ಜನಕಳಕಳಿಯ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಜೆಪಿ ನಗರ ಅಧ್ಯಕ್ಷರಾದ ಸಂದೀಪ ಪಾಟೀಲ ಮಾತನಾಡಿ ಪಂಡಿತ ದೀನದಯಾಳ ಉಪಾಧ್ಯಯರು ಅಪ್ರತಿಮ ದೇಶಭಕ್ತರು ಆದರ್ಶ ಚಿಂತಕರು, ಸಮಾಜ ಸುಧಾರಕರು, ಪ್ರಬುದ್ದ ತತ್ವಜ್ಞಾನಿ, ಮೇಧಾವಿ, ಅರ್ಥಶಾಸ್ತçಜ್ಞರು, ರಾಷ್ಟç ನಿರ್ಮಾಪಕರು ಮೌಲ್ಯನಿಷ್ಟ ಪತ್ರಕರ್ತರು, ಉತ್ತಮ ಸಾಹಿತಿ ಹೀಗೆ ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಳುಗೌಡ ಪಾಟೀಲ್ ಉಮೇಶ್ ಕಾರಜೋಳ, ಚಂದ್ರಶೇಖರ ಕವಟಗಿ, ಗೋಪಾಲ ಘಟಕಾಂಬಳೆ, ಸುರೇಶ್ ಬಿರಾದಾರ್ ಭೀಮಶಂಕರ್ ಹದನೂರು ವಿಜಯ ಜೋಶಿ ರಾಹುಲ್ ಜಾಧವ, ಮಹಾನಗರಪಾಲಿಕೆ ಉಪಪೌರರಾದ ಸುಮಿತ್ರಾ ಜಾಧವ, ಮಹೇಂದ್ರ ನಾಯಕ, ಬಸವರಾಜ ಹಳ್ಳಿ, ಮಹೇಶ್ ಒಡೆಯರ್ ಸಪ್ನಾ ಕಣಮುಚನಾಳ, ಕೃಷ್ಣಾ ಗುನ್ನಾಳಕರ, ಪಾಪುಸಿಂಗ್ ರಜಪೂತ, ಚಿನ್ನು ಚಿನಗುಂಡಿ, ಎಸ್.ಎ. ಪಾಟೀಲ, ರಾÀಜಕುಮಾರ ಸಗಾಯಿ, ರಾಘವೇಂದ್ರ ಕಾಪಸೆ, ರಾಜೇಶ ತೌಸೆ, ಮಲ್ಲಮ್ಮ ಜೋಗೂರ,ಸಂತೋಷ ನಿಂಬರಗಿ, ರಾಮಚಂದ್ರ ಚವ್ಹಾಣ, ವಿಜಯ ಹಿರೇಮಠ, ಶೇಖರ ಬಾಗಲಕೋಟ, ರಾಜು ಹಿಪ್ಪರಗಿ, ಅಶೋಕ ಲಾಡ, ರಾಯಪ್ಪ ಹಳ್ಳಿ, ಯರಗಲ್, ಅಪ್ಪಾಸಾಹೇಬ ಕೋಟ, ಮಠ, ನಿಂಬಾಳ ಮೊದಲಾದವರು ಉಪಸ್ಥಿತರಿದ್ದರು.

