ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನಲ್ಲಿ ಮಳೆಯಿಂದಾದ ಹಾನಿ ಮತ್ತು ಭೀಮ ನದಿ ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿಯನ್ನು ದ್ರೋಣ ಕ್ಯಾಮೆರಾ ಮೂಲಕ ಸಮೀಕ್ಷೆ ಮಾಡುವ ಕಾರ್ಯ ನಡೆದಿದೆ
ಈ ಕುರಿತು ಮಾಹಿತಿ ನೀಡಿರುವ ದೇವಣಗಾಂ ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಮಾತನಾಡಿ ಈ ವರ್ಷ ಅತಿಯಾಗಿ ಮಳೆಯಾಗಿದ್ದು ರೈತರ ಬೆಳೆಗಳು ಹಾನಿಗೊಳಗಾಗಿವೆ. ಆದ್ದರಿಂದ ಅವುಗಳ ಸಮೀಕ್ಷೆ ಮಾಡಲೇಬೇಕಾಗಿದೆ ಆದರೆ ಮಳೆ ಹೆಚ್ಚಾಗಿರುವ ಪರಿಣಾಮ ಹೊಲಗಳಲ್ಲಿ ಸಂಚರಿಸುವುದು ಕಷ್ಟವಾಗುವದರಿಂದ ಪ್ರಾಥಮಿಕವಾಗಿ ದ್ರೋಣ ಕ್ಯಾಮೆರಾ ಮೂಲಕ ಸಮೀಕ್ಷೆ ಮಾಡಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ, ಹೆಸರು ಮುಂತಾದ ಬೆಳೆಗಳ ಸರ್ವೆ ಮಾಡಲಾಗುತ್ತಿದೆ.
ಸರ್ವೆ ಮಾಡಿದ ನಂತರ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪ್ರಕಟಿಸಲಾಗುವುದು ಆಕ್ಷೇಪಣೆಗಾಗಿ ಒಂದು ವಾರ ಕಾಲಾವಕಾಶ ನೀಡಿ ಕಣ್ತಪ್ಪಿನಿಂದ ಯಾವುದಾದರೂ ರೈತರ ಸಮೀಕ್ಷೆ ಉಳಿದಿದ್ದರೆ ಅವುಗಳನ್ನು ಸರಿಪಡಿಸಿ ಅಂತಿಮ ಪಟ್ಟಿಯನ್ನು ಸಲ್ಲಿಸಲಾಗುವುದು.
ಸದ್ಯ ಈಗಲೂ ಕೂಡ ಮಳೆ ಬರುತ್ತಿದೆ ನದಿಯ ನೀರು ಕೂಡ ಎಲ್ಲೆಂದರಲ್ಲಿ ನುಸುಳುತ್ತಿದೆ ಅವುಗಳ ಪಟ್ಟಿಯನ್ನು ಕೂಡ ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮದ ರೈತರು, ಯುವಕರು ಅನೇಕರು ಹಾಜರಿದ್ದರು.

