ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಮಹಿಳಾ ಸಬಲೀಕರಣ ಕೋಶ, ಶ್ರೀ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ವಿಜಯಪುರದ ಇನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ದಿನಾಂಕ ೨೪-೦೯-೨೦೨೫ ಬುಧವಾರದಂದು ‘ಸ್ವಸ್ಥ ನಾರಿ, ಶಕ್ತಿಶಾಲಿ ಕುಟುಂಬ ಅಭಿಯಾನದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಯೋಜಿಸಲಾಯಿತು.
ಶ್ರೀ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜಿನ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಗೈನಕಾಲಜಿ ವಿಭಾಗದ ವೈದ್ಯರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಇದರಲ್ಲಿ ತೂಕ ಮತ್ತು ಎತ್ತರ ಮಾಪನ, ಹಾಗೂ ಹೆಚ್ ಬಿ, ರಕ್ತದ ಒತ್ತಡ ಮಟ್ಟ ತಪಾಸಣೆ ಮಾಡಲಾಯಿತು.
ಈ ವೇಳೆಯಲ್ಲಿ ವೈದ್ಯರು ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವಿಚಾರಿಸಿದರು, ಕೆಲವು ಚಿಕಿತ್ಸಾ ಸೂಚನೆಗಳನ್ನು ಬಗ್ಗೆ ಮಾಹಿತಿ ನೀಡಲಾಯಿತು. ಹಾಗೂ ಹೆಚ್ಚಿನ ತಪಾಸಣೆಗೆ ಶ್ರೀ ಬಿ.ಎಂ. ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಲು ಸಲಹೆ ನೀಡಿದರು.ಒಟ್ಟು ೩೩೫ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಈ ಶಿಬಿರದ ಪ್ರಯೋಜನೆಯನ್ನು ಪಡೆದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ,ಇನರ್ ವ್ಹೀಲ್ ಕ್ಲಬ್ ಮುಖ್ಯಸ್ಥೆ ಉಜ್ಚಲಾ ಪಾಟೀಲ ಪ್ರೊ.ವಿದ್ಯಾ ಪಾಟೀಲ, ಡಾ.ಅನೀಲ ಪಾಟೀಲ, ಡಾ.ಉಷಾದೇವಿ ಹಿರೇಮಠ, ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸೂರ್ಯಕಾಂತ ಬಿರಾದಾರ,ಪ್ರೊ.ಗಿರಿಜಾ ನಿಂಬಾಳ,ಪ್ರೊ.ಶ್ವೇತಾ ಸವನೂರ, ಎಸ್.ಕೆ.ಪಾಟೀಲ ರಾಜೇಶ್ವರಿ ಪುರಾಣಿಕ್ ಶ್ರೀ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನ ವೈದ್ಯರು,ಇನ್ನಿತರ ಬೋಧಕ,ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

