ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಹಕಾರಿ ಸಂಘಗಳ ಬೆಳವಣಿಗೆಯ ನಿಟ್ಟಿನಲ್ಲಿ ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹ ಬಹಳ ಮುಖ್ಯವಾಗಿದೆ ಎಂದು ಮುಳಸಾವಳಗಿ ಸಿದ್ದಾರೂಢ ಕೈವಲ್ಯಧಾಮ ಆಶ್ರಮದ ದಯಾನಂದ ಸ್ವಾಮೀಜಿ ಹೇಳಿದರು.
ಮುಳಸಾವಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಮಾತನಾಡಿ, ಪರಸ್ಪರ ಸಹಕಾರದ ಮೂಲಕ ಸಹಕಾರ ಸಂಘಗಳು ಹಾಗೂ ರೈತರ ಏಳಿಗೆಗೆ ಶ್ರಮಿಸೋಣ ಎಂದು ಹೇಳುತ್ತಾ, ಸಂಘದ ಕಳೆದ ವರ್ಷದ ಲೆಕ್ಕಪತ್ರದ ವಿವರಗಳನ್ನು ಮಂಡಿಸಿದರು.
ಇಂಡಿ ಕೃಷಿವಿಜ್ಞಾನ ಕೇಂದ್ರದ ಡಾ.ಪ್ರಸಾದ ಹಾಗೂ ಡಾ.ಪ್ರೇಮಚಂದ್ರ ಮಾತನಾಡಿ, ರೈತರಿಗೆ ಬೆಳೆಗಳ ನಿರ್ವಹಣೆ, ಸಾವಯವ ಗೊಬ್ಬರ, ಜಾನುವಾರುಗಳ ನಿರ್ವಹಣೆ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ರೈತರಿಗೆ ತಿಳಿಸಿದರು.
ವಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಅಮಿತ ಖಂಡೇಕರ, ಸಾವಯವ ಕಂಪನಿಯ ಸುನೀಲ ಮಾತನಾಡಿದರು. ನಂತರ ಕೃಷಿಯಲ್ಲಿ ವಿಶೇಷ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಕಲ್ಲಪ್ಪ ತಳವಾರ, ನಿರ್ದೇಶಕರಾದ ಕಲ್ಲಪ್ಪ ಮೂಲಿಮನಿ, ಮಲಕಪ್ಪ ನಾಯ್ಕೋಡಿ, ಬಸವರಾಜ ಬಮ್ಮನಳ್ಳಿ, ಜಾವೀದ ಮಕಾನದಾರ, ಚನ್ನು ಹದರಿ, ಶ್ರೀಶೈಲ ಹದರಿ, ಮಡು ಕುಂಬಾರ, ಶಿವಾನಂದ ಬಿರಾದಾರ, ರಮೇಶ ರಾಠೋಡ, ಕಾರ್ಯ ನಿರ್ವಾಹಣಾಧಿಕಾರಿ ಭೀಮನಗೌಡ ಪಾಟೀಲ, ಹಣಮಂತ್ರಾಯ ಹಿರೂರ ಮಲ್ಲನಗೌಡ ಬಿರಾದಾರ, ಅನಿತಾ ಬಿರಾದಾರ, ಸಾಹೇಬಗೌಡ ಹಿಕ್ಕಣಗುತ್ತಿ, ನವೀನ ಉಕುಮನಾಳ ಸೇರಿದಂತೆ ಸಂಘದ ಎಲ್ಲಾ ಸದಸ್ಯರು, ಸಿಬ್ಬಂದಿ ಇದ್ದರು.

