Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಲೋಣಿ ಬಿಕೆ. ಗ್ರಾಮದ ಲೋಣಿ-ಚಡಚಣ, ಇಂಡಿ ಕ್ರಾಸ್ ಹತ್ತಿರ ಬೈಕ್‌ಸವಾರ ಮತ್ತು ಮಹೀಂದ್ರಾ ಪಿಕಪ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ನುಚ್ಚುನೂರಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.ಈ ಘಟನೆ ಸೋಮವಾರ ಬೆಳಿಗ್ಗೆ ೮:೦೦ ರಿಂದ ೮:೩೦ ರ ನಡುವೆ ನಡೆದಿದೆ ಎನ್ನಲಾಗಿದೆ. ಮಹೀಂದ್ರಾ ಪಿಕಪ್ ಸಂಖ್ಯೆ ಎಮ್.ಎಚ್ 06, ಬಿ ಡ್ ಬ್ಲೂ.0323 ವಾಹನ ಕೂಡಾ ಎಕ್ಸಿಡೆಂಟ್ ರಭಸಕ್ಕೆ ಉರೂಳಿ ಬದ್ದಿದೆ,ಬೈಕ್ ಸಂಖ್ಯೆ. ಎಮ್.ಎಚ್.13,ಬಿಸಿ.0255 ನುಚ್ಚುನೂರಾಗಿದ್ದು ಬೈಕ್ ತುಕುಡಿಗಳು ರಸ್ತೆ ತುಂಬೆಲ್ಲ ಬಿದ್ದಿರುವ ದೃಷ್ಯ ಕಂಡುಬಂದಿತು.ಮೃತ ಬೈಕ್‌ಸವಾರ ಚಡಚಣ ತಾಲೂಕಿನ ಮರಗೂರ ಗ್ರಾಮದ ಖಾಜೆಸಾಬ ಶೇಖ(೪೭) ಎಂದು ಗುರುತಿಸಲಾಗಿದೆ,ಈ ಘಟನೆ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ಭಗತ್ ಸಿಂಗ್ ರವರ ಜಯಂತಿಯನ್ನು ಆಚರಿಸಲಾಯಿತು.ಬಿಜೆಪಿ ಪಕ್ಷದ ಯುವನಾಯಕ ಸುನೀಲ ಬಗಲಿ ಮಾತನಾಡಿ, ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.ಕೆಡಿಪಿ ಸದಸ್ಯ ಶಿವಾನಂದ ಪಾಂಡ್ರೆ ಮಾತನಾಡಿ, ಭಗತ್ ಸಿಂಗ್ ಅವರ ಹೆಸರು ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿದೆ ಇವರ ಧೈರ್ಯ ಇಂದಿಗೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಯುವಜನತೆಯ ಮನಸ್ಸಿನಲ್ಲಿ ಇಂದಿಗೂ ಅವರೊಬ್ಬ ಧೀಮಂತ ನಾಯಕ. ಶಿರಡೋಣದ ಗ್ರಾಮದ ಯುವಕರು ಭಗತ್ ಸಿಂಗ್ ರವರ ಆಚಾರ ಮತ್ತು ವಿಚಾರಗಳನ್ನು ರೂಢಿಸಿಕೊಳ್ಳಬೇಕು. ಅವರನ್ನು ನಮ್ಮ ಜೀವನದಲ್ಲಿ ಪ್ರೇರಣೆಯಾಗಿ ನಾವೆಲ್ಲರೂ ತೆಗೆದುಕೊಳ್ಳಬೇಕು ಎಂದರು.ಈ ಸಂಧರ್ಭದಲ್ಲಿ ಅಮಸಿದ್ದ ಪೂಜಾರಿ, ರಮಾನಂದ ಕುಲಕರ್ಣಿ, ಪ್ರವೀಣ ಕಾಟೆ, ಸರ್ವೇಶ ಹಿರೇಮಠ, ಊರಿನ ಪ್ರಮುಖರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾರುಣ್ಯದಲ್ಲೇ ಇಂದು ಯುವ ಸಮೂಹ ಸದೃಢ ಆರೊಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಬದುಕಿಗೆ ಆರೋಗ್ಯಯೊಂದೇ ಕೊನೆಯ ಆಯ್ಕೆಯಾಗಿದೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ. ವೈ.ಬಿ.ನಾಯಕ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ.ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ, ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ, ಎನ್.ಎಸ್.ಎಸ್ ಹಾಗೂ ಮಹಿಳಾ ಸಬಲೀಕರಣ ಘಟಕಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಆಹಾರವು ಕಲಬೆರಕೆ ಹಾಗೂ ರಾಸಾಯನಿಕಯುಕ್ತವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ರಾಸಾಯನಿಕಯುಕ್ತವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕೆಂದು ಅಭಿಪ್ರಾಯಪಟ್ಟರು.ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸಕ ಡಾ.ಮೂಲಿಮನಿ, ಸ್ತ್ರೀರೋಗ ಹಾಗೂ ಪ್ರಸೂತಿತಜ್ಞೆ ಡಾ.ಜ್ಯೋತಿ ಲೋಕಾಪೂರ, ಶಸ್ತ್ರಚಿಕಿತ್ಸಕ ಡಾ.ವೀಣಾ ಕೋರಿಶೆಟ್ಟಿ, ಡಾ.ಮಾನಸಾ ಲಕ್ಷ್ಮೀ, ಡಾ.ಆಹಿಶ ಕುಲಕರ್ಣಿ,ಡಾ.ಗೋಪಿನಾಥ, ಡಾ.ಸುಶ್ಮಿತಾ ರೆಡ್ಡಿ, ಡಾ.ವಾಸವಿ ಬಿ.ಎಸ್,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಮಾನತೆ, ಜಾತಿ ಧರ್ಮಗಳಿಂದ ಮುಕ್ತವಾದ ಯುವ ಭಾರತದ ಪರಿಕಲ್ಪನೆಯ ಸ್ವಾತಂತ್ರ್ಯವನ್ನು ಕ್ರಾಂತಿಕಾರಿ ಭಗತ್ ಸಿಂಗ್ ಹೊಂದಿದ್ದರು. ಇಂತಹ ಕ್ರಾಂತಿಕಾರಿ ವಿಚಾರಗಳು, ಆದರ್ಶಗಳು ಇಂದಿನ ಯುವ ಜನತೆಗೆ ದಾರಿ ದೀಪವಾಗಬೇಕೆಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರುಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 117 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸಮಾನತೆಯ ವ್ಯವಸ್ಥೆಯನ್ನು ಹೋಗಲಾಡಿಸಿ ಬದಲಾವಣೆ ತರಲು ಹೋರಾಡಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್. ದೇಶಭಕ್ತ ಭಗತ್ ಸಿಂಗ್ ಅವರ ಜೀವನ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದರು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸಣ್ಣ ವಯಸ್ಸಿನಲ್ಲೇ ನೇಣುಕಂಬಕ್ಕೆ ಏರಿದವರು. ಜಲಿಯನ್ ವಾಲಾಬಾಗ್ ದುರಂತದ ನಂತರದಲ್ಲಿ ಭಗತ್ ಸಿಂಗ್ ಒಬ್ಬ ಕ್ರಾಂತಿಕಾರಿಯಾಗಿ ಬದಲಾಗುತ್ತಾರೆ. ಭಗತ್ ಸಿಂಗ್ ಅವರು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಭಗತ್ ಸಿಂಗ್, ರಾಜಗುರು ಸುಖದೇವ್ ಮೂವರು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮ ಹಾಗೂ ಬಸವನಬಾಗೇವಾಡಿ ವ್ಯಾಪ್ತಿಯಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗಿರುವ ಬೆಳೆ ಹಾನಿಯ ಪ್ರದೇಶಗಳಿಗೆ ಶನಿವಾರ ಸಂಜೆ ಅಪರಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಭೇಟಿ ನೀಡಿ ಪರಿಶೀಲನೆ ಮಾಡಿದರು.ತಾಲೂಕಿನ ಯರನಾಳ, ಮನಗೂಳಿ ರೈತ ಬಾಂಧವರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತೊಗರಿ, ಮೆಕ್ಕೆಜೋಳ, ಹತ್ತಿ ಮತ್ತು ಈರುಳ್ಳಿ ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗುತ್ತಿದೆ. ಎಲ್ಲ ರೈತ ಬಾಂಧವರಿಗೂ ಬೆಳೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೆಪ್ಟಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾನಿಯಾದ ತಾಲೂಕಿನ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡುತ್ತಿದ್ದಾರೆ. ಜಂಟಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡಲಾಗುವುದು. ಬೆಳೆ ಹಾನಿಯಾದ ರೈತರು ಸಂಬಂಧಪಟ್ಟ ಗ್ರಾಮಾಡಳಿತಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ,…

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಭೀಮಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಮೀಪದ ಕುಮಸಗಿ ಗ್ರಾಮದ ೪೦ ರೈತ ಕುಟುಂಬಕ್ಕೆ ಸ್ಥಳೀಯ ಶ್ರೀವೆಂಕಟೇಶ್ವರ ಮಠದ ಅಭಿನವ ವೆಂಕಟೇಶ್ವರ ಸ್ವಾಮೀಜಿ ನೊಂದ ಕುಟುಂಬಗಳಿಗೆ ನೆರವಾಗಿದ್ದಾರೆ.ಕುಮಸಿಗಿ ಗ್ರಾಮದಲ್ಲಿ ಭೀಮಾನದಿಯ ಪ್ರವಾಹ ದಿಂದ ಮನೆ ಕಳೆದುಕೊಂಡ ೪೦ ಸಂತ್ರಸ್ತರ ಕುಟುಂಬಗಳು ಆತಂಕದಲ್ಲಿ ಗ್ರಾಮದ ಶಾಲೆ ಒಂದರಲ್ಲಿ ತಮ್ಮ ಬದುಕು ನಡೆಸುತ್ತಿದ್ದು ಸಂತ್ರಸ್ಥರನ್ನು ಕಂಡು ಅವರ ಜೀವನಕ್ಕೆ ಬೇಕಾಗಿರುವ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ಕುಮಸಿಗಿ ಗ್ರಾಮದ ವೆಂಕಟೇಶ್ವರ ಮಠದ ಪೂಜ್ಯರು ಮಾನವೀಯತೆ ದೃಷ್ಟಿಯಿಂದ ಎಲ್ಲ ಕುಟುಂಬಗಳಿಗೆ ವಿತರಿಸಿದ್ದರು.ಈ ವೇಳೆ ಸಂತ್ರಸ್ತರು ಪೂಜ್ಯರ ಎದುರು ತಮ್ಮ ಅಳಲು ತೋಡಿಕೊಂಡರುಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ಚಾವರ, ಬಸರಾಜ್ ಯಾತ್ನೂರ್, ವಿಶ್ವನಾಥ್ ಸಿಂಪಿ, ಗುರುಪಾದ ಚಾವರ್, ದತ್ತು ವಾಲಿಕಾರ, ದರೆಪ್ಪ ಗಿಣಿಯಾರ, ಸಿದ್ದರಾಮ ಸಮಗಾರ, ಗುರು ಜಾದವ, ಮಹಾಂತಪ್ಪ ಮರದ ಸೇರಿದಂತೆ ಗ್ರಾಮಸ್ಥರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅತೀವೃಷ್ಟಿ ಹಾಗೂ ಭೀಮೆಯ ಪ್ರವಾಹದ ದುಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ದಸರಾ ಹಬ್ಬದ ಪ್ರಯುಕ್ತ ಮೂರು ನೂರು ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿ ಬಿಜೆಪಿ ಎಸ್ಟಿ ಮೂರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಭೀಮೆಯ ಪ್ರವಾಹದಿಂದ ಜನರು ಬದುಕು ಅತ್ಯಂತ ಚಿಂತಾ ಜನಕವಾಗಿದೆ. ಒಂದು ಕಡೆ ಮೇಘರಾಜನ ಅಬ್ಬರ ಹೆಚ್ಚಾಗಿದ್ದು, ಇನ್ನೊಂದು ಕಡೆ ಮಹಾರಾಷ್ಟ್ರದ ಉಜನಿ‌ ಜಲಾಶಯದಿಂದ ಹಾಗೂ ಸಿನಾ ನದಿಯಿಂದ‌‌ ಲಕ್ಷಾಂತರ ಕ್ಯೂಸಕ್ಸ್ ನೀರು ಭೀಮೆಗೆ ಹರಿದು ಬರುತ್ತಿದೆ. ಇದರಿಂದ ಬುಯ್ಯಾರ ಗ್ರಾಮದಲ್ಲಿ ಪ್ರವಾಹ ಅವಾಂತರ ಸೃಷ್ಟಿ ಮಾಡಿದ್ದು ಜನರು ಬದುಕು ದುಸ್ತರವಾಗಿದೆ. ಆದರೆ‌ ನಾಡುದೇವಿಯ ಮತ್ತು ದಸರಾ ಹಬ್ಬ ಪ್ರಯುಕ್ತ ಹೆಣ್ಣು ಮಕ್ಕಳು ಉಪವಾಸ ಇರುವುದನ್ನು ಕಂಡು, ಮನುಕುಲಕಿ ಬಿಜೆಪಿ ಎಸ್ಟಿ ಮೂರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ‌ ಹಾಗೂ ಅವರ ತಂಡ ಗ್ರಾಮದಲ್ಲಿ ಆಹಾರ ಕಿಟ್ ಹಂಚುವ ಮೂಲಕ ಮಾನವಿಯತೆ ಮೆರೆದಿದ್ದಾರೆ.ಈ ಸಂದರ್ಭದಲ್ಲಿ‌ ಎಸ್ಟಿ ಮೂರ್ಚಾ ಅಧ್ಯಕ್ಷ ರವಿ…

Read More

ನವರಾತ್ರಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರೊ:ಎಂ.ಎಸ್.ಖೊದ್ನಾಪೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆಡುಕಿನ ವಿರುದ್ದ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ದುರ್ಗಾದೇವಿಯು ಒಂಬತ್ತು ದಿನಗಳವರೆಗೆ ಶಕ್ತಿಯ ಆರಾಧನೆ ಮಾಡುವ ಮತ್ತು ದೇವಿಯು ಜಗತ್ತಿನಲ್ಲಿ ದುಷ್ಟರ ಸಂಹಾರ ಮಾಡಿ, ಶಿಷ್ಟರ ರಕ್ಷಣೆಗಾಗಿ ನವಶಕ್ತಿ ಅವತಾರಗಳನ್ನು ತಾಳುತ್ತಾಳೆ ಎಂಬ ಪ್ರತೀತಿಯಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯ ಶ್ರೀ ಹನುಮಾನ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡಿ, ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ: ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತ: ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ. ಈ ಹಬ್ಬದ ಪ್ರಯುಕ್ತ ಸುಮಂಗಲೆಯರು ಪ್ರತಿ ದಿನ ಮುಂಜಾವಿನ ಸಮಯದಲ್ಲಿ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸುವುದು, ಪ್ರತಿ ಮನೆಯಲ್ಲೂ ಒಂಬತ್ತು ದಿನಗಳ ಪರ್ಯಂತ ದೀಪ ಹಾಕುವುದು, ಘಟಸ್ಥಾಪನೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಒಳ್ಳೆಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶನಿವಾರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ದಶಮಾನೋತ್ಸವ ಹಾಗೂ ಸಹಕಾರಿ ಸೌಧ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಮತ್ತು ಹೈನುಗಾರಿಕೆ, ಕುರಿಸಾಕಾಣಿಕೆ, ದ್ರಾಕ್ಷಿ ಬೆಳೆ ಸಾಲ, ತೋಟದ ಮನೆ ನಿರ್ಮಾಣಕ್ಕೆ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಸಹಿತ ವಿವಿಧ ಸಾಲಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಪಡೆದ ರೈತರು ಆರ್ಥಿಕ ಅಭಿವೃದ್ಧಿ ಸಾಧಿಸಿ ಪುನಃ ಸಂಘದಲ್ಲಿ ಹೆಚ್ಚು ಠೇವಣಿ ಇಡುವಂತೆ ಸದೃಡರಾಗಬೇಕೆಂದು ಹೇಳಿದರು.ಸಂಘದ ಸಂಸ್ಥಾಪಕ ಅಧ್ಯಕ್ಷ ಗುರುಪ್ರಸಾದ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವರು ತಿಳಿಸಿದ ಎಲ್ಲ ಸಾಲಸೌಲಭ್ಯಗಳನ್ನು ಸಂಘದಿAದ ಪಡೆದು ಆರ್ಥಿಕ ಅಭಿವೃದ್ಧಿ ಸಾಧಿಸಿ ಸಂಘದ…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೧೦ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೨೮ ರಿಂದ ಅಕ್ಟೋಬರ್ ೨ರವರೆಗೆ ಐದುದಿನಗಳ ಕಾಲ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಾನುವಾರ ಇಂಡಿ ರಸ್ತೆಯ ಕೆ.ಇ.ಬಿಯಿಂದ ಪ್ರಾರಂಭಗೊಂಡು, ಅಂಬೇಡ್ಕರ ವೃತ್ತ, ಮೊಹರೆ ವೃತ್ತ ಮಾರ್ಗವಾಗಿ ಮೇನ್ ಬಜಾರ್ , ಪತ್ತಾರಕಟ್ಟೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳ ಸಾಯಂಕಾಲ ತಲುಪಿತು.ಮೆರವಣಿಗೆಯಲ್ಲಿ ಸಾರವಾಡದ ಗೊಂಬೆಮೇಳ, ಸ್ಥಳೀಯ ಚಿಕ್ಕಮಕ್ಕಳ ಕೋಲಾಟ ಹಾಗೂ ಜಮಖಂಡಿಯ ಸಂಗೀತ ವೃಂದದ ನಡುವೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು. ಪೂರ್ಣಕುಂಭಹೊತ್ತ ಮಹಿಳೆಯರು, ಕಳಸ ಕನ್ನಡಿಗಳೊಂದಿಗೆ ಸುಮಂಗಲೆಯರು ಮೆರವಣಿಗೆಯಲ್ಲಿ ಬರಿಗಾಲಲ್ಲಿ ನಡೆದು ತಮ್ಮ ಭಕ್ತಿ ತೋರಿದರು.ಉತ್ಸವ ಸಮೀತಿ ಅಧ್ಯಕ್ಷ ಸಾಹೇಬಗೌಡ ದಾನಗೊಂಡ, ಉಪಾಧ್ಯಕ್ಷ ವೀರೇಶ ಬುದ್ನಿ, ದಿನೇಶ ಪಾಟೀಲ, ಪ್ರಭುದೇವ ಹಿರೇಮಠ, ಚೇತನ ಇಂಡಿ, ಕಾಶೀನಾಥ ಹಿರೇಮಠ, ಬಸವರಾಜ ಬುದ್ನಿ, ಶ್ರೀಶೈಲ ಯಂಭತ್ನಾಳ, ದತ್ತಾತ್ರೇಯ ಕುಲಕರ್ಣಿ, ಕುಮಾರಸ್ವಾಮಿ…

Read More