ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಭೀಮಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಮೀಪದ ಕುಮಸಗಿ ಗ್ರಾಮದ ೪೦ ರೈತ ಕುಟುಂಬಕ್ಕೆ ಸ್ಥಳೀಯ ಶ್ರೀವೆಂಕಟೇಶ್ವರ ಮಠದ ಅಭಿನವ ವೆಂಕಟೇಶ್ವರ ಸ್ವಾಮೀಜಿ ನೊಂದ ಕುಟುಂಬಗಳಿಗೆ ನೆರವಾಗಿದ್ದಾರೆ.
ಕುಮಸಿಗಿ ಗ್ರಾಮದಲ್ಲಿ ಭೀಮಾನದಿಯ ಪ್ರವಾಹ ದಿಂದ ಮನೆ ಕಳೆದುಕೊಂಡ ೪೦ ಸಂತ್ರಸ್ತರ ಕುಟುಂಬಗಳು ಆತಂಕದಲ್ಲಿ ಗ್ರಾಮದ ಶಾಲೆ ಒಂದರಲ್ಲಿ ತಮ್ಮ ಬದುಕು ನಡೆಸುತ್ತಿದ್ದು ಸಂತ್ರಸ್ಥರನ್ನು ಕಂಡು ಅವರ ಜೀವನಕ್ಕೆ ಬೇಕಾಗಿರುವ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ಕುಮಸಿಗಿ ಗ್ರಾಮದ ವೆಂಕಟೇಶ್ವರ ಮಠದ ಪೂಜ್ಯರು ಮಾನವೀಯತೆ ದೃಷ್ಟಿಯಿಂದ ಎಲ್ಲ ಕುಟುಂಬಗಳಿಗೆ ವಿತರಿಸಿದ್ದರು.
ಈ ವೇಳೆ ಸಂತ್ರಸ್ತರು ಪೂಜ್ಯರ ಎದುರು ತಮ್ಮ ಅಳಲು ತೋಡಿಕೊಂಡರು
ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ಚಾವರ, ಬಸರಾಜ್ ಯಾತ್ನೂರ್, ವಿಶ್ವನಾಥ್ ಸಿಂಪಿ, ಗುರುಪಾದ ಚಾವರ್, ದತ್ತು ವಾಲಿಕಾರ, ದರೆಪ್ಪ ಗಿಣಿಯಾರ, ಸಿದ್ದರಾಮ ಸಮಗಾರ, ಗುರು ಜಾದವ, ಮಹಾಂತಪ್ಪ ಮರದ ಸೇರಿದಂತೆ ಗ್ರಾಮಸ್ಥರು ಇದ್ದರು.

