ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾರುಣ್ಯದಲ್ಲೇ ಇಂದು ಯುವ ಸಮೂಹ ಸದೃಢ ಆರೊಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಬದುಕಿಗೆ ಆರೋಗ್ಯಯೊಂದೇ ಕೊನೆಯ ಆಯ್ಕೆಯಾಗಿದೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ. ವೈ.ಬಿ.ನಾಯಕ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ.ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ, ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ, ಎನ್.ಎಸ್.ಎಸ್ ಹಾಗೂ ಮಹಿಳಾ ಸಬಲೀಕರಣ ಘಟಕಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಆಹಾರವು ಕಲಬೆರಕೆ ಹಾಗೂ ರಾಸಾಯನಿಕಯುಕ್ತವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ರಾಸಾಯನಿಕಯುಕ್ತವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕೆಂದು ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸಕ ಡಾ.ಮೂಲಿಮನಿ, ಸ್ತ್ರೀರೋಗ ಹಾಗೂ ಪ್ರಸೂತಿತಜ್ಞೆ ಡಾ.ಜ್ಯೋತಿ ಲೋಕಾಪೂರ, ಶಸ್ತ್ರಚಿಕಿತ್ಸಕ ಡಾ.ವೀಣಾ ಕೋರಿಶೆಟ್ಟಿ, ಡಾ.ಮಾನಸಾ ಲಕ್ಷ್ಮೀ, ಡಾ.ಆಹಿಶ ಕುಲಕರ್ಣಿ,ಡಾ.ಗೋಪಿನಾಥ, ಡಾ.ಸುಶ್ಮಿತಾ ರೆಡ್ಡಿ, ಡಾ.ವಾಸವಿ ಬಿ.ಎಸ್, ಡಾ.ಜಯೇಶ, ದೀಪಕ ಔರಂಗಾಬಾದ, ಕಲಾವತಿ ಗುಲಗಂಜಿ, ರೂಪಾ ಮಮದಾಪೂರ, ಅನಿಲಕುಮಾರ ಎಮ್, ಬಿ.ಎಸ್.ಹಡಲಗಿ ಅವರು ರಕ್ತದಲ್ಲಿ ಸಕ್ಕರೆ ಪ್ರಮಾಣ, ರಕ್ತದ ಗುಂಪು, ಚರ್ಮವ್ಯಾಧಿ, ಅಶಕ್ತಿ ಹೀಗೆ ಅನೇಕ ಸಾಮಾನ್ಯ ರೋಗಗಳನ್ನು ಪರೀಕ್ಷಿಸಿ ಸಲಹೆ ನೀಡಿದರು.
ಶಿಬಿರದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ಸೇರಿದಂತೆ ೧೪೫ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಆರ್.ಎ.ಪವಾರ, ಪ್ರಾಧ್ಯಾಪಕರಾದ ಡಾ. ಶ್ರೀರಾಮ ಬಿಜಾಪುರ, ಎಸ್.ಕೆ.ಚಿಕ್ಕನರ್ತಿ, ಡಾ.ಎಸ್.ಬಿ.ಜನಗೊಂಡ, ಎಮ್.ಕೆ.ಯಾದವ, ಎಸ್.ಜೆ.ಸೂರ್ಯವಂಶಿ,ಆರ್.ಎನ್.ರಾಠೋಡ, ಪಿ.ಎಸ್.ನಾಟೀಕಾರ, ಆರ್.ಎಮ್.ಮುಜಾವರ, ಡಾ.ಕೆ.ಸೂಡಿ ಎಲ್ಲ ಬೋಧಕೇತರ ಸಿಬ್ಬಂದಿ ಇದ್ದರು.

