ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಲೋಣಿ ಬಿಕೆ. ಗ್ರಾಮದ ಲೋಣಿ-ಚಡಚಣ, ಇಂಡಿ ಕ್ರಾಸ್ ಹತ್ತಿರ ಬೈಕ್‌ಸವಾರ ಮತ್ತು ಮಹೀಂದ್ರಾ ಪಿಕಪ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ನುಚ್ಚುನೂರಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.
ಈ ಘಟನೆ ಸೋಮವಾರ ಬೆಳಿಗ್ಗೆ ೮:೦೦ ರಿಂದ ೮:೩೦ ರ ನಡುವೆ ನಡೆದಿದೆ ಎನ್ನಲಾಗಿದೆ. ಮಹೀಂದ್ರಾ ಪಿಕಪ್ ಸಂಖ್ಯೆ ಎಮ್.ಎಚ್ 06, ಬಿ ಡ್ ಬ್ಲೂ.0323 ವಾಹನ ಕೂಡಾ ಎಕ್ಸಿಡೆಂಟ್ ರಭಸಕ್ಕೆ ಉರೂಳಿ ಬದ್ದಿದೆ,ಬೈಕ್ ಸಂಖ್ಯೆ. ಎಮ್.ಎಚ್.13,ಬಿಸಿ.0255 ನುಚ್ಚುನೂರಾಗಿದ್ದು ಬೈಕ್ ತುಕುಡಿಗಳು ರಸ್ತೆ ತುಂಬೆಲ್ಲ ಬಿದ್ದಿರುವ ದೃಷ್ಯ ಕಂಡುಬಂದಿತು.
ಮೃತ ಬೈಕ್‌ಸವಾರ ಚಡಚಣ ತಾಲೂಕಿನ ಮರಗೂರ ಗ್ರಾಮದ ಖಾಜೆಸಾಬ ಶೇಖ(೪೭) ಎಂದು ಗುರುತಿಸಲಾಗಿದೆ,
ಈ ಘಟನೆ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

