ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೧೦ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೨೮ ರಿಂದ ಅಕ್ಟೋಬರ್ ೨ರವರೆಗೆ ಐದುದಿನಗಳ ಕಾಲ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಾನುವಾರ ಇಂಡಿ ರಸ್ತೆಯ ಕೆ.ಇ.ಬಿಯಿಂದ ಪ್ರಾರಂಭಗೊಂಡು, ಅಂಬೇಡ್ಕರ ವೃತ್ತ, ಮೊಹರೆ ವೃತ್ತ ಮಾರ್ಗವಾಗಿ ಮೇನ್ ಬಜಾರ್ , ಪತ್ತಾರಕಟ್ಟೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳ ಸಾಯಂಕಾಲ ತಲುಪಿತು.
ಮೆರವಣಿಗೆಯಲ್ಲಿ ಸಾರವಾಡದ ಗೊಂಬೆಮೇಳ, ಸ್ಥಳೀಯ ಚಿಕ್ಕಮಕ್ಕಳ ಕೋಲಾಟ ಹಾಗೂ ಜಮಖಂಡಿಯ ಸಂಗೀತ ವೃಂದದ ನಡುವೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು. ಪೂರ್ಣಕುಂಭಹೊತ್ತ ಮಹಿಳೆಯರು, ಕಳಸ ಕನ್ನಡಿಗಳೊಂದಿಗೆ ಸುಮಂಗಲೆಯರು ಮೆರವಣಿಗೆಯಲ್ಲಿ ಬರಿಗಾಲಲ್ಲಿ ನಡೆದು ತಮ್ಮ ಭಕ್ತಿ ತೋರಿದರು.
ಉತ್ಸವ ಸಮೀತಿ ಅಧ್ಯಕ್ಷ ಸಾಹೇಬಗೌಡ ದಾನಗೊಂಡ, ಉಪಾಧ್ಯಕ್ಷ ವೀರೇಶ ಬುದ್ನಿ, ದಿನೇಶ ಪಾಟೀಲ, ಪ್ರಭುದೇವ ಹಿರೇಮಠ, ಚೇತನ ಇಂಡಿ, ಕಾಶೀನಾಥ ಹಿರೇಮಠ, ಬಸವರಾಜ ಬುದ್ನಿ, ಶ್ರೀಶೈಲ ಯಂಭತ್ನಾಳ, ದತ್ತಾತ್ರೇಯ ಕುಲಕರ್ಣಿ, ಕುಮಾರಸ್ವಾಮಿ ಹಿರೇಮಠ, ಸಂತೋಷ ಏಳಕೋಟಿ, ಸುಮೀತ ಬುದ್ನಿ, ಕಾಶೀನಾಥ ಅಗಸರ, ಅನೀಲ ಮಣೂರ, ವಿಶಾಲ್ ಭಾಸುತ್ಕರ್, ಸಂತೋಷ ಕುಲಕರ್ಣಿ, ಶಂಕರಗೌಡ ಪಾಟೀಲ, ಕಲ್ಮೇಶ ಬುದ್ನಿ, ಶಿವರಾಜ ತಳವಾರ, ಪವನ ಬುದ್ನಿ, ಗುರುಸ್ವಾಮಿ ಹಿರೇಮಠ, ರಾಜು ಪತ್ತಾರ, ಸಾಗರ ತೋಟದ, ಅಪ್ಪಾಸಾಹೇಬ ಅವಟಿ, ಮಡಿವಾಳಪ್ಪ ಅಸ್ಕಿ, ಮಲ್ಲಪ್ಪ ಅಗಸರ ಇದ್ದರು.

