Author: editor.udayarashmi@gmail.com

ಇಂದು (ಅಕ್ಟೋಬರ-೧, ಬುಧವಾರ) “ರಾಷ್ಟ್ರೀಯ ಹಿರಿಯ ಜೀವಿಗಳ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮಾರ್ಕ ಟ್ವೇನ್ ಅವರು “ ಔಟಜ ಚಿge is ಟಿoಣ ಚಿ ಜeಜಿeಚಿಣ, buಣ ಚಿ viಛಿಣoಡಿಥಿ. ಓoಣ ಚಿ ಠಿuಟಿishmeಟಿಣ, buಣ ಚಿ ಠಿಡಿiviಟeಜge” ಎಂದು ಹೇಳಿದ್ದಾರೆ. ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು-ಹೆತ್ತು ತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ಸದಸ್ಯರ ಒಳಿತಿಗಾಗಿ ಸದಾ ಜೀವನವನ್ನೇ ಸವೆಯುತ್ತಿರುವ ತ್ಯಾಗಜೀವಿ ಎಂದರೆ ಅವಳೇ ತಾಯಿ. ಕೂಲಿ-ನಾಲಿಯನ್ನಾದರೂ ಮಾಡಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಬದುಕಿಗೊಂದು ಆಸರೆ ಕಲ್ಪಿಸಿ ಅವರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಗಳನ್ನಾಗಿಸಲು ಯಾವಾಗಲೂ ಚಿಂತಿಸುತ್ತಿರುವ ತಂದೆ-ಪೋಷಕರ ಪಾತ್ರ ಅನನ್ಯವಾದುದು. “ಏನೆಲ್ಲ ಮರೆತರು ತಮ್ಮ, ಹಡೆದವರ ನೀ ಮರಿಬ್ಯಾಡ. ಉಪಕಾರ ತೀರಿಸಬೇಕು ಈ ಮಾತು ತಿಳಿದು ನೋಡು” ಎಂಬ ಭಜನಾ ಪದದ ಹಿಂದಿನ…

Read More

ಲೇಖನ- ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ.’ ಎನ್ನುವ ಇಂಗ್ಲೀಷ್ ನುಡಿಯಂತೆ ನಾವು ಸಿದ್ಧವಾಗುವವರೆಗೂ ಪ್ರಪಂಚವು ನಮಗಾಗಿ ಕಾಯುವುದಿಲ್ಲ. ಅದು ಬಾಗಿಲು ಬಡೆಯುವದರೊಳಗಾಗಿ ನಾವು ಸಿದ್ಧರಾಗಿರಬೇಕು. ನಾವು ಓದಿದ ಡಿಗ್ರಿಗಳು ಏನೇ ಆಗಿರಬಹುದು. ಅವು ನಮ್ಮನ್ನು ಉಳಿಸುವುದಿಲ್ಲ. ಆದರೆ ನಮಗೆ ನಮ್ಮ ಬಗ್ಗೆ ಇರುವ ಅರಿವು ನಮ್ಮನ್ನು ಮೇಲಕ್ಕೆತ್ತರಿಸುತ್ತದೆ. ಗಾಳಿಯನ್ನು ತಡೆಯೋರು ಯಾರೂ ಇಲ್ಲ. ಹಾಗೆಯೇ ಸ್ವ ಅರಿವನ್ನು ಚೆನ್ನಾಗಿ ತಿದ್ದಿ ತೀಡಿ ಟ್ರಿಮ್ ಮಾಡಿದರೆ ನಮ್ಮನ್ನು ತಡೆಯೋರು ಯಾರೂ ಇಲ್ಲ. ಜಗದ ಯಾವ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಸ್ವ ಅರಿವಿಗೆ ಯಾವುದೇ ತರಗತಿಗಳು ಬೇಕಿಲ್ಲ. ಇದನ್ನು ಶಾಲೆ ಕಾಲೇಜುಗಳಲ್ಲಿ ಕಲಿಸಲಾಗುವುದಿಲ್ಲ. ಇದಕ್ಕೆ ಬೇಕಿರುವುದು ನಂದಾದೀಪದಂತೆ ಉರಿಯುವ ತುಡಿತ. ಜೋರಾಗಿ ಮಾತನಾಡುವವನು ಇತರರ ಮೇಲೆ ದಬ್ಬಾಳಿಕೆ ಮಾಡುವವನು ಬಲಿಷ್ಢನಲ್ಲ. ಮೌನವಾಗಿದ್ದು ತನ್ನ ಬಗ್ಗೆ ತಾನು ತಿಳಿದು ತನ್ನನ್ನು ತಾನೇ ತಿದ್ದಿಕೊಳ್ಳುವವನು ಬಲಿಷ್ಠ. ನಿನ್ನ ಬಿಟ್ಟು ನಿನ್ನ ಏಳ್ಗೆಯನ್ನು ತಡೆಯುವವರು ಯಾರೂ ಇಲ್ಲ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ ನೇಯ ಶತಮಾನದ ಶರಣರು ಜ್ಞಾನ ದಾಸೋಹ ಮತ್ತು ಶರಣ ಸಂಸ್ಕೃತಿಯ ಮೂಲಕ ಸಮಾಜದಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಜಾತಿ, ಮತ, ಪಂಥಗಳೆಂಬ ಭೇದವನ್ನು ತೊಲಗಿಸಿ, ಜನರಲ್ಲಿ ಒಗ್ಗಟ್ಟು, ಸಮನ್ವಯ ಭಾವ, ಸಮಾನತೆ, ಧರ್ಮ ಸಹಿಂಷ್ಣುತೆ ಮತ್ತು ಸಮಷ್ಠಿ ಭಾವದೊಂದಿಗೆ ಬಾಳಿ ಬದುಕಿದವರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ, ಮೌಢ್ಯತೆ, ಅನಿಷ್ಟಗಳನ್ನು ಹೊಡೆದೋಡಿಸಿ, ಜನರಲ್ಲಿ ಅಧ್ಯಾತ್ಮಿಕ ಅನುಭಾವವನ್ನು ಮೂಡಿಸಿದರು ಎಂದು ಅಧ್ಯಾಪಕ ಗುರುಬಸಯ್ಯ ಹಿರೇಮಠ ಅಭಿಪ್ರಾಯಪಟ್ಟರು.ಅವರು ನಗರದ ಸೇನಾ ನಗರದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜರುಗಿದ “ದಾನದ ಮಹತ್ವ” ವಿಷಯ ಕುರಿತ ಉಪನ್ಯಾಸದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.ತನು-ಮನ ಮತ್ತು ಶುದ್ಧಭಾವದಿಂದ ಮಾಡಿದ ದಾನವು ಸಮಾಜಮುಖಿ, ಸಾಮಾಜಿಕ ಕಾರ್ಯ, ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅನ್ನ ಸಂತರ್ಪಣೆಗಾಗಿ ಮತ್ತು ಸತ್ಪಾತ್ರಕ್ಕೆ ಸಲ್ಲುತ್ತಿದ್ದರೆ ಆ ದಾನವು ಅರ್ಥಪೂರ್ಣವಾಗುತ್ತದೆ. ಬಸವಾದಿ ಶರಣರು ಸಮಾಜೋಧ್ಧಾರಕ, ಸರ್ವಧರ್ಮ, ಸಮನ್ವಯತೆ ಮತ್ತು ಸಮಾನತೆಯ ಸಂದೇಶ ಸಾರಿದರು. ಯಾವುದೇ ವರ್ಗ, ವರ್ಣ, ಲಿಂಗಗಳ ಭೇದವಿಲ್ಲದೇ ಸರ್ವ ಮಾನವ ಶಕ್ತಿಗಳ…

Read More

ಸಾಮಾಜಿಕ-ಆರ್ಥಿಕ ಸಮೀಕ್ಷೆ ಯಾರ ವಿರುದ್ಧವೂ ಅಲ್ಲ | ಸಿಎಂ ಸಿದ್ದರಾಮಯ್ಯ ಸಮರ್ಥನೆ | ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಹಿಷ್ಕಾರಕ್ಕೆ ಕರೆ ನೀಡಿದ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ಧವೂ ಅಲ್ಲ, ಇದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾಗ್ಯಲಕ್ಷ್ಮೀ ಯೋಜನೆಯಡಿ ನೊಂದಾಯಿಸಿಕೊಂಡು ಬಾಂಡ್ ಪಡೆದುಕೊಂಡ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ಪಾವತಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್-೩೧ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಅರ್ಹ ಫಲಾನುಭವಿಗಳು ಪೂರಕ ದಾಖಲಾತಿಗಳಾದ ಮೂಲ ಭಾಗ್ಯಲಕ್ಷ್ಮೀ ಪ್ರಮಾಣ ಪತ್ರಗಳು ಕನ್ನಡ ಮತ್ತು ಇಂಗ್ಲಿಷ್ ಭಾಗ ಅಥವಾ ಪೋಷಕರ ವಿಮೆಯನ್ನು ಕ್ಲೇಮ್ ಮಾಡಿದ್ದರೆ ಕನ್ನಡ ಭಾಗ ಅಥವಾ ಬಾಂಡ್ ಕಳೆದುಕೊಂಡಲ್ಲಿ ಎಫ್‌ಆರ್‌ಐ ಪ್ರತಿಯೊಂದಿಗೆ ಸಿಡಿಪಿಓ ರವರಿಂದ ದೃಢೀಕರಿಸಿದ ಪ್ರಮಾಣ ಪತ್ರದ ಝೇರಾಕ್ಸ್ ಪ್ರತಿ. ಶಿಕ್ಷಣ ಇಲಾಖೆಯಿಂದ ಅಂಗೀಕೃತವಾಗಿರುವ ಶಾಲೆಯಿಂದ ನೀಡಲಾದ ಇತ್ತೀಚಿನ ಅಧ್ಯಯನ ಪ್ರಮಾಣ ಪತ್ರ.ಜನನ ಮತ್ತು ಮರಣಗಳ ರಿಜೆಸ್ಟ್ರಾರ್ ನೀಡಿದ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಕುಟುಂಬವು ೩ ಮಕ್ಕಳನ್ನು ಹೊಂದಿದ್ದರೆ, ತಾಯಿ ಅಥವಾ ತಂದೆ ಕುಟುಂಬ ಯೋಜನೆ ವಿಧಾನಕ್ಕೆ ಒಳಗಾಗಿರಬೇಕು.ಹೆಣ್ಣು ಮಗು, ತಂದೆ ಮತ್ತು ತಾಯಿಯ ಆಧಾರ ಪ್ರತಿ, ಹೆಣ್ಣು ಮಗುವಿನ ಬ್ಯಾಂಕ್ ಪಾಸಬುಕ್ ನಕಲು, ಹೆಣ್ಣು ಮಗುವಿನ…

Read More

ರಾಣಿ ಚೆನ್ನಮ್ಮ ವಿವಿ ಯಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರಕೇಂದ್ರ, ತೊರವಿಯಲ್ಲಿ ವಿಶ್ವ ಪ್ರವಾಸೋಧ್ಯಮ ದಿನ ಮತ್ತು ಎಂ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಅವರು ಪ್ರವಾಸೋಧ್ಯಮ ಇಲಾಖೆಯಲ್ಲಿ ಇದ್ದ ಅವಕಾಶಗಳ ಬಗ್ಗೆ ಹಾಗೂ ಇಂದಿನ ವಿಜಯಪುರದ ಐತಿಹಾಸಿಕ ಸ್ಮಾರಕಗಳು, ಕಲೆ, ಮತ್ತು ಸಾಹಿತ್ಯದ ಕುರಿತು ಮಾಹಿತಿ ನೀಡಿ,ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ಹೇಳಿದರು.ಶಾಸ್ತ್ರೀಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಸ್ಥಳೀಯ ಮುಖ್ಯಸ್ಥರಾದ, ಎಸ್.ಎಂ.ಗಂಗಾಧರಯ್ಯ ಅವರು ಮಾತನಾಡಿ, ಆದಿಲ್ ಶಾಹಿ ಕಾಲವು ಅಮೋಘ ಇತಿಹಾಸವನ್ನು ಹೊಂದಿದ್ದು ಶ್ರೀಮಂತಿಕೆಗೆ ಹೆಸರಾಗಿತ್ತು, ಅಂದಿನ ಸ್ಮಾರಕ ಹಾಗೂ ಆಡಳಿತ ಸುಧಾರಣೆಗಳ ಬಗ್ಗೆ ಕೈಗೊಂಡ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಸಂಯೋಜಕರು ಹಾಗೂ ಸಹ ಪ್ರಾಧ್ಯಾಪಕರಾದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಮಯ ಪ್ರಜ್ಞೆಯಿಂದ ಸಾಹಸ ಪ್ರದರ್ಶಿಸಿ, ಇತರರ ಪ್ರಾಣ ರಕ್ಷಣೆ ಮಾಡಿದ ೬ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಮಕ್ಕಳ ದಿನಾಚರಣೆ-೨೦೨೫ ಪ್ರಯುಕ್ತ ನೀಡಲಾಗುವ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ಅರ್ಜಿ ಆಹ್ವಾನಿಸಲಾಗಿದೆ.೨೦೨೪ ಆಗಸ್ಟ್ ೧ ರಿಂದ ೨೦೨೫ ಜುಲೈ ೩೧ರರೊಳಗೆ ಸಾಹಸ ಪ್ರದರ್ಶಿಸಿ ಪ್ರಾಣ ರಕ್ಷಣೆ ಮಾಡಿದ ಬಾಲಕರಿಗೆ ಹೊಯ್ಸಳ ಹಾಗೂ ಬಾಲಕಿಯರಿಗೆ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ೧೦,೦೦೦/- ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪ್ರಧಾನ ಮಾಡಲಾಗುವುದು.ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ೦೫ ವರ್ಷ ಅತ್ಯುತ್ತಮ ಸೇವೆ ಮಾಡಿದ ವ್ಯಕ್ಯಿಗಳಿಗೆ ಹಾಗೂ ಸಂಸ್ಥೆಗಳಿಗೆ ಕ್ರಮವಾಗಿ ತಲಾ ೨೫,೦೦೦ ರೂ. ಹಾಗೂ ೧ ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಕನ್ನಡ ಭಾಷೆಯಲ್ಲಿ ಅರ್ಜಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ , ತಳವಾರ ಸಮಾಜಕ್ಕೆ ಸಿಕ್ಕ ಸುವರ್ಣ ಅವಕಾಶ ಕೈ ಚೆಲ್ಲಬೇಡಿ ಎಂದು ಸಮಾಜ ಬಂದುಗಳಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ ಹೇಳಿದರು.ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆ ಕಾಣುತ್ತಿದ್ದೆವೆ. ಆದರೆ ಪ್ರಬಲ ಸಮುದಾಯದಗಳು ಸಮೀಕ್ಷೆಯಲ್ಲಿ ವಿಶೇಷವಾಗಿ ಕಾಳಜಿವಹಿಸಿ ತಮ್ಮ ತಮ್ಮ ಸಮುದಾಯದ ಹಿತರಕ್ಷಣೆ ಮಾಡುತ್ತಿದ್ದಾರೆ. ಅದರಂತೆ ನಮ್ಮ ತಳವಾರ ಸಮಾಜದ ಬಂಧುಗಳು ನಮ್ಮ ಸಮಾಜದ ಹಿರಿಯ ಮುಖಂಡ ಮಾಜಿ ಶಾಸಕ ಶರಣಪ್ಪ‌ ಸುಣಗಾರ, ಇಂಡಿ ತಾಲ್ಲೂಕು ತಳವಾರ & ಪರಿವಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಧರ್ಮರಾಜ‌ ವಾಲಿಕಾರ ಹಾಗೂ ನಮ್ಮ ‌ಸಮಾಜದ ಮುಖಂಡರು ಹೇಳಿದಂತೆನಾವು ಸಮೀಕ್ಷೆಯಲ್ಲಿ ವಿಶೇಷವಾಗಿ ಪಾಲ್ಗೊಂಡು ಯಾವುದೇ ವ್ಯಕ್ತಿ ಮತ್ತು ಕುಟುಂಬ ಹೊರಗೆ ಉಳಿದಂತೆ ನೋಡಿಕೊಳ್ಳಬೇಕು. ಈ ಹಿಂದಿನ ಸಮೀಕ್ಷೆಯಲ್ಲಿ ನಮ್ಮ ಸಮುದಾಯ ದಾರಿ ತಪ್ಪಿದ್ದು ನಮ್ಮ…

Read More

ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ | ವಿಜಯಪುರ ಡಿಎಚ್ಓ ಡಾ.ಸಂಪತ್ ಗುಣಾರಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದಲ್ಲಿ ಪ್ರತಿವರ್ಷ ದಿನದಿಂದ ದಿನಕ್ಕೆ ಹೆಚ್ಚು ಜನ ರೇಬಿಸ್ ಮಹಾಮಾರಿಗೆ ಬಲಿಯಾಗುತ್ತಿದ್ದು, ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದಾಗ ನಿರ್ಲಕ್ಷಿಸದೇ ಲಸಿಕೆ ಹಾಕಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಡಿ ಅಶ್ವಿನಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಾಯಿನ್ಸ್ ಕಾಲೇಜ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ನಾಯಿ ಕಡಿತಕ್ಕೆ ತುತ್ತಾದ ೨೩ ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರು ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದ್ದಲ್ಲಿ ಲಸಿಕೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.ಡಾ. ಅಪ್ಪಾಸಾಹೇಬ ಇನಾಮದಾರ ಅವರು ಮಾತನಾಡಿ, ರೇಬಿಸ್ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ನೇರವಾಗಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮತಕ್ಷೇತ್ರದ ಗ್ರಾಮಗಳಲ್ಲಿನ ಪಿಡಿಓ ಹಾಗೂ ಆಡಳಿತಾಧಿಕಾರಿಗಳು ಬಿದ್ದ ಮನೆಗಳ ಸಮೀಕ್ಷೆ, ವಿಂಗಡಣೆ ಹಾಗೂ ಅಗತ್ಯ ಪರಿಹಾರಗಳಿಗೆ ಕ್ರಮವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜರುಗಿದ ಪ್ರವಾಹ ಹಾಗೂ ಮಳೆಯಿಂದಾದ ಹಾನಿಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡೋಣಿ ಪ್ರವಾಹ ಹಾಗೂ ಅತಿವೃಷ್ಠಿಯಿಂದ ಕ್ಷೇತ್ರದ ಬಹುತೇಕ ಗ್ರಾಮಗಳ ಜಮೀನುಗಳಲ್ಲಿನ ತೊಗರಿ, ಹತ್ತಿ, ಉಳ್ಳಾಗಡ್ಡಿ ಬೆಳೆಗಳು ನಾಶವಾಗಿವೆ. ಇವುಗಳ ಸಮೀಕ್ಷೆ ಕೈಗೊಳ್ಳಬೇಕು ಹಾಗೂ ಬೆಳೆವಿಮೆಯ ಕುರಿತು ಸಂಬಂಧಿಸಿದ ವಿಮಾ ಕಂಪನಿಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಜೊತೆಗೆ ಕಡ್ಲೇಬೀಜ ದಾಸ್ತಾನು ಹಾಗೂ ವಿತರಣೆ ಕುರಿತು ಕ್ರಮ ವಹಿಸಬೇಕು. ಜೊತೆಗೆ ಶಾಲೆಯ ಕೋಣೆಗಳ ಲಭ್ಯತೆ, ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಬೇಕು ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸಣ್ಣ ಸಣ್ಣ ವಿಷಯಕ್ಕೂ ಶಾಸಕರಿಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ಕುಂದುಕೊರತೆ ನಿವಾರಿಸಿ ಎನ್ನುವಂತಾಗಬಾರದು. ಅದಕ್ಕಾಗಿ ವಿಶೇಷವಾಗಿ ಕ್ಷೇತ್ರದಲ್ಲಿ ಮೂಲಭೂತ…

Read More