ರಾಣಿ ಚೆನ್ನಮ್ಮ ವಿವಿ ಯಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರಕೇಂದ್ರ, ತೊರವಿಯಲ್ಲಿ ವಿಶ್ವ ಪ್ರವಾಸೋಧ್ಯಮ ದಿನ ಮತ್ತು ಎಂ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಅವರು ಪ್ರವಾಸೋಧ್ಯಮ ಇಲಾಖೆಯಲ್ಲಿ ಇದ್ದ ಅವಕಾಶಗಳ ಬಗ್ಗೆ ಹಾಗೂ ಇಂದಿನ ವಿಜಯಪುರದ ಐತಿಹಾಸಿಕ ಸ್ಮಾರಕಗಳು, ಕಲೆ, ಮತ್ತು ಸಾಹಿತ್ಯದ ಕುರಿತು ಮಾಹಿತಿ ನೀಡಿ,ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ಹೇಳಿದರು.
ಶಾಸ್ತ್ರೀಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಸ್ಥಳೀಯ ಮುಖ್ಯಸ್ಥರಾದ, ಎಸ್.ಎಂ.ಗಂಗಾಧರಯ್ಯ ಅವರು ಮಾತನಾಡಿ, ಆದಿಲ್ ಶಾಹಿ ಕಾಲವು ಅಮೋಘ ಇತಿಹಾಸವನ್ನು ಹೊಂದಿದ್ದು ಶ್ರೀಮಂತಿಕೆಗೆ ಹೆಸರಾಗಿತ್ತು, ಅಂದಿನ ಸ್ಮಾರಕ ಹಾಗೂ ಆಡಳಿತ ಸುಧಾರಣೆಗಳ ಬಗ್ಗೆ ಕೈಗೊಂಡ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಸಂಯೋಜಕರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಚಂದ್ರಕಾಂತ ಕೋಳಿಗುಡ್ಡೆ ಅವರು ಮಾತನಾಡಿದರು.
ಇತಿಹಾಸ ವಿಭಾಗದ ವಿದ್ಯಾರ್ಥಿನಿ ಅಕ್ಷತಾ ಸ್ವಾಗತಿಸಿ-ನಿರೂಪಿಸಿದರು. ಮಂಜುನಾಥ ಸರೂರು ವಂದಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರುಗಳಾದ ನಿಖಿಲ್ ಶೇಕದಾರ, ಪ್ರವೀಣ ಚಲವಾದಿ, ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ ರೇಣುಕಾ ಬಾಲಗಾಂವಿ, ಅಶೋಕ ಮೀಸಿ, ಮತ್ತು ಶ್ರೀಮತಿ ಶಿಲ್ಪಾ ಹಳ್ಳಿ ಸೇರಿದಂತೆ ಇತಿಹಾಸ ವಿಭಾಗದ ಪ್ರಥಮ ಹಾಗೂ ತೃತೀಯ ವರ್ಷದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

