ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾಗ್ಯಲಕ್ಷ್ಮೀ ಯೋಜನೆಯಡಿ ನೊಂದಾಯಿಸಿಕೊಂಡು ಬಾಂಡ್ ಪಡೆದುಕೊಂಡ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ಪಾವತಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್-೩೧ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳು ಪೂರಕ ದಾಖಲಾತಿಗಳಾದ ಮೂಲ ಭಾಗ್ಯಲಕ್ಷ್ಮೀ ಪ್ರಮಾಣ ಪತ್ರಗಳು ಕನ್ನಡ ಮತ್ತು ಇಂಗ್ಲಿಷ್ ಭಾಗ ಅಥವಾ ಪೋಷಕರ ವಿಮೆಯನ್ನು ಕ್ಲೇಮ್ ಮಾಡಿದ್ದರೆ ಕನ್ನಡ ಭಾಗ ಅಥವಾ ಬಾಂಡ್ ಕಳೆದುಕೊಂಡಲ್ಲಿ ಎಫ್‌ಆರ್‌ಐ ಪ್ರತಿಯೊಂದಿಗೆ ಸಿಡಿಪಿಓ ರವರಿಂದ ದೃಢೀಕರಿಸಿದ ಪ್ರಮಾಣ ಪತ್ರದ ಝೇರಾಕ್ಸ್ ಪ್ರತಿ. ಶಿಕ್ಷಣ ಇಲಾಖೆಯಿಂದ ಅಂಗೀಕೃತವಾಗಿರುವ ಶಾಲೆಯಿಂದ ನೀಡಲಾದ ಇತ್ತೀಚಿನ ಅಧ್ಯಯನ ಪ್ರಮಾಣ ಪತ್ರ.ಜನನ ಮತ್ತು ಮರಣಗಳ ರಿಜೆಸ್ಟ್ರಾರ್ ನೀಡಿದ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಕುಟುಂಬವು ೩ ಮಕ್ಕಳನ್ನು ಹೊಂದಿದ್ದರೆ, ತಾಯಿ ಅಥವಾ ತಂದೆ ಕುಟುಂಬ ಯೋಜನೆ ವಿಧಾನಕ್ಕೆ ಒಳಗಾಗಿರಬೇಕು.ಹೆಣ್ಣು ಮಗು, ತಂದೆ ಮತ್ತು ತಾಯಿಯ ಆಧಾರ ಪ್ರತಿ, ಹೆಣ್ಣು ಮಗುವಿನ ಬ್ಯಾಂಕ್ ಪಾಸಬುಕ್ ನಕಲು, ಹೆಣ್ಣು ಮಗುವಿನ ಪೋಟೋ, ಹೆಣ್ಣು ಮಗು/ತಂದೆ/ತಾಯಿಯ ಹೆಸರಿನಲ್ಲಿ ಯಾವುದೇ ಬದಲಾವಣೆಯಾಗಿದ್ದರೆ ಸಿಡಿಪಿಓ ರವರು ನೀಡಿದ ಅನುಮೋದನೆ ಪತ್ರ, ಹೆಣ್ಣು ಮಕ್ಕಳ ಜನ್ಮ ದಿನಾಂಕದಲ್ಲಿ ಯಾವುದೇ ಬದಲಾವಣೆಗಳಿದ್ದರೆ, ಎಲ್.ಐ.ಸಿ ಯಿಂದ ನೀಡಲಾದ ಅನುಮೋದನೆಯ ಪತ್ರವನ್ನು ಜಿಲ್ಲೆಯ ಆಯಾ ತಾಲ್ಲೂಕಿನ ತಾಲ್ಲೂಕಾ ಶಿಶು ಅಭಿವೃದ್ಧಿ ಯೋಜನಾ ಕಛೇರಿಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
