ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಮಯ ಪ್ರಜ್ಞೆಯಿಂದ ಸಾಹಸ ಪ್ರದರ್ಶಿಸಿ, ಇತರರ ಪ್ರಾಣ ರಕ್ಷಣೆ ಮಾಡಿದ ೬ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಮಕ್ಕಳ ದಿನಾಚರಣೆ-೨೦೨೫ ಪ್ರಯುಕ್ತ ನೀಡಲಾಗುವ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ಅರ್ಜಿ ಆಹ್ವಾನಿಸಲಾಗಿದೆ.
೨೦೨೪ ಆಗಸ್ಟ್ ೧ ರಿಂದ ೨೦೨೫ ಜುಲೈ ೩೧ರರೊಳಗೆ ಸಾಹಸ ಪ್ರದರ್ಶಿಸಿ ಪ್ರಾಣ ರಕ್ಷಣೆ ಮಾಡಿದ ಬಾಲಕರಿಗೆ ಹೊಯ್ಸಳ ಹಾಗೂ ಬಾಲಕಿಯರಿಗೆ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ೧೦,೦೦೦/- ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪ್ರಧಾನ ಮಾಡಲಾಗುವುದು.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ೦೫ ವರ್ಷ ಅತ್ಯುತ್ತಮ ಸೇವೆ ಮಾಡಿದ ವ್ಯಕ್ಯಿಗಳಿಗೆ ಹಾಗೂ ಸಂಸ್ಥೆಗಳಿಗೆ ಕ್ರಮವಾಗಿ ತಲಾ ೨೫,೦೦೦ ರೂ. ಹಾಗೂ ೧ ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಕನ್ನಡ ಭಾಷೆಯಲ್ಲಿ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ ೧೭ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
