Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ ೭ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಅಂದು ಬೆಳಿಗ್ಗೆ ೯.೩೦ಗಂಟೆಗೆ ನಗರದ ಶ್ರೀ ದೇವಸ್ಥಾನದ ಆವರಣದಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣವರೆಗೆ ಮೆರವಣಿಗೆ ನಡೆಯಲಿದೆ.ಅಂದು ಬೆಳಿಗ್ಗೆ ೧೦.೩೦ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು,ಎಲ್ಲಾ ಸಮುದಾಯದ ಗಣ್ಯರು ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಸರಾ ಹಬ್ಬದ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಬೆಳಿಗ್ಗೆಯಿಂದಲೇ ಸಚಿವರ ಗೃಹ ಕಚೇರಿಗೆ ಆಗಮಿಸಿದ ಅಪಾರ ಸಂಖ್ಯೆಯಲ್ಲಿದ್ದ ರೈತರು, ಮುಖಂಡರು, ಸಾರ್ವಜನಿಕರು, ಯುವಕರು, ಮಹಿಳೆಯರು, ಸಚಿವರ ಅಭಿಮಾನಿಗಳು ಹಾಗೂ ಬೆಂಬಲಿಗರು ಬನ್ನಿ ನೀಡಿ ಶುಭ ಕೋರಿದರು. ಇದಕ್ಕೆ ಪ್ರತಿಯಾಗಿ ಸಚಿವರೂ ಸಹ ಬನ್ನಿ ನೀಡಿ ದಸರಾ ಹಬ್ಬದ ಶುಭಾಷಯ ಕೋರಿದರು.ಈ ಸಂದರ್ಭದಲ್ಲಿ ಸಚಿವರ ಪುತ್ರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಉಪಸ್ಥಿತರಿದ್ದು ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕರ್ನಾಟಕ ಅಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಸಚಿವರ ಅಭಿಮಾನಿಗಳು, ಹಿತೈಷಿಗಳು ದಸರಾ ಶುಭಾಷಯ ಕೋರಿದರು.ನಾಡದೇವಿ ಚಾಮುಂಡೇಶ್ವರಿ ನಾಡಿನಾದ್ಯಂತ ಸುಖ, ಸಮೃದ್ಧಿ, ನೆಮ್ಮದಿ ಕುರುಣಿಸಲಿ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತಸಮಯ ಜೀವನ…
ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪ್ರಗತಿ ಕುರಿತ ಲೇಖನ ಮಾಲಿಕೆ – ೪) ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಮ್ಮ ಬದುಕಿನಲ್ಲಿ ನಿಸರ್ಗದ ಪಾತ್ರ ಬಹುಮುಖ್ಯ ಆ ನಿಸರ್ಗಕ್ಕೆ ನಾವು ಋಣಿಯಾಗಿರಬೇಕು ಎಂಬ ಪಾಠವನ್ನು ಅತ್ಯವಶ್ಯಕವಾಗಿ ನಾವು ಮಕ್ಕಳಿಗೆ ಕಲಿಸಲೇಬೇಕು.ಪಂಚಮಹಾಭೂತಗಳಿಂದ ಕೂಡಿರುವ ಈ ಬ್ರಹ್ಮಾಂಡದಲ್ಲಿ ನಾವು ಭೂಮಿಯ ಮೇಲೆ ನಡೆದಾಡುವ, ಗಾಳಿಯನ್ನು ಸೇವಿಸುವ, ನೀರನ್ನು ಕುಡಿಯುವ, ಬೆಂಕಿಯನ್ನು ಬಳಸಿ ಅಡುಗೆ ಮಾಡುವ ಮತ್ತು ಆಕಾಶ ತತ್ವವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲ ನೈಸರ್ಗಿಕ ವಸ್ತುಗಳನ್ನು ನಮ್ಮದಾಗಿಸಿಕೊಂಡಿದ್ದೇವೆ, ಬಳಸುತ್ತೇವೆ ಎಲ್ಲವೂ ನಿಜ ಆದರೆ ಈ ನಿಸರ್ಗ ಸಹಜ ಸಂಪತ್ತುಗಳನ್ನು ಕೆಲವೊಮ್ಮೆ ನಾವು ದುರ್ಬಳಕೆ ಮಾಡಿಕೊಳ್ಳುವುದು ಕೂಡ ಉಂಟು.ಅನವಶ್ಯಕ ವಿದ್ಯುತ್ ಬಳಕೆ ಬೇಡಇದರಲ್ಲಿ ಮುಖ್ಯವಾಗಿ ವಿದ್ಯುತ್. ಅವಶ್ಯಕತೆ ಇದ್ದಾಗ ಲೈಟನ್ನು ಫ್ಯಾನುಗಳನ್ನು ಹಾಕಿಕೊಂಡು ಅವಶ್ಯಕತೆ ಇಲ್ಲದಾಗ ಅವುಗಳನ್ನು ಬಂದ್ ಮಾಡುವ ಜರೂರತ್ತು ನಮಗಿದೆ. ಯಾವುದನ್ನು ನಮಗೆ ಉತ್ಪಾದಿಸಲು ಸಾಧ್ಯವಿಲ್ಲವೂ ಅದನ್ನು ಅನವಶ್ಯಕವಾಗಿ ಬಳಸುವ ಹಕ್ಕು ನಮಗಿಲ್ಲ.…
ಮರಣವೇ ಮಹಾನವಮಿ ಕಾರ್ಯಕ್ರಮ | ಡಾ.ತೋಂಟದ ಸಿದ್ದಲಿಂಗ ಶ್ರೀಗಳ 7ನೇ ಪುಣ್ಯಸ್ಮರಣೆ | ಡಾ:ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರ ತೋಂಟದ ಸಿದ್ದಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವಗದಗ: ಪ್ರತಿಷ್ಠಿತ ಮಠಮಾನ್ಯಗಳೊಲ್ಲೊಂದಾದ ಗದಗಿನ ತೋಂಟದಾರ್ಯ ಮಠದ ವತಿಯಿಂದ ಕೊಡಮಾಡುವ ಪ್ರಸಕ್ತ ಸಾಲಿನ “ಡಾ,ತೋಂಟದ ಸಿದ್ದಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2025” ಈ ಬಾರಿ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ.ಅ,3 ರಂದು ಶುಕ್ರವಾರ ಮುಂಜಾನೆ 10-30 ಗಂಟೆಗೆ ಗದಗಿನ ತೋಂಟದಾರ್ಯ ಮಠದ ಆವರಣದಲ್ಲಿನ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 7 ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ, ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 2025 ಹಾಗೂ ಗ್ರಂಥ ಬಿಡುಗಡೆ ಸಮಾರಂಭ ಡಾ.ತೋಂಟದ ಸಿದ್ದರಾಮ ಶ್ರೀಗಳವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊ…
ವಿಜಯಪುರ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಈ ದೇಶಕ್ಕೆ ತಮ್ಮ ಸಂದೇಶದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದೇಶದ ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳು ನಮಗೆ ಪ್ರೇರಣೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಚರಕ ನೇಯುವ ಮೂಲಕ ವಿಶಿಷ್ಠವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಮಹನೀಯರ ಕುರಿತು ಇಂದಿನ…
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಲಾಷೆ ಉದಯರಶ್ಮಿ ದಿನಪತ್ರಿಕೆ ಮೈಸೂರು: ಬಾಲಮಂದಿರಗಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕರುನಾಡಿನ ಮುದ್ದು ಮಕ್ಕಳು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ದಿಂದ ಅಪರೂಪದ ಸಾಧಕರಾಗಿ ಬೆಳೆದು ಮುಂದೊಂದು ದಿನ ನಾಡ ಹಬ್ಬ ಮೈಸೂರು ದಸರಾ ಉದ್ಘಾಟಿಸುವಂತಾಗಬೇಕೆಂದು ನಾನು ಹಂಬಲಿಸುವದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಬಾಲಮಂದಿರ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಲು ಧಾರವಾಡ ದಿಂದ ತಮ್ಮೊಂದಿಗೆ ತಂದಿದ್ದ ಸಿಹಿ ಪದಾರ್ಥ ಗಳೊಂದಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸರಕಾರಿ ಬಾಲಕಿಯರ ಬಾ ಲಮಂದಿರಕ್ಕೆ ಆಗಮಿಸಿದ್ದ ಅವರು ಬಾಲಕಿಯರ ಬಾಲಮಂದಿರದ ಮಕ್ಕಳನ್ನುದ್ದೆಶಿ ಅವರು ಮಾತನಾಡಿದರು.” ಯಾರಲ್ಲಿ ಆತ್ಮವಿಶ್ವಾಸ ಇರುವದಿಲ್ಲವೋ ಅವರು ಮಾತ್ರ ಅನಾಥರು. ಯಾರಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಆತ್ಮ ವಿಸ್ವಾಸವಿದೆಯೋ ಅವರೆಂದು ಅನಾಥರಾಗಲು ಸಾಧ್ಯವಿಲ್ಲವೆಂದು ಹೇಳಿದ ಅವರು, ನೀವೆಲ್ಲರೂ ಉನ್ನತ ಸಾಧನೆ ಮಾಡಿ ನಾಡದೇವಿಯ ಸನ್ನಿಧಿಯಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿಸುವಂತಾಗಬೇಕು. ನೀವೆಲ್ಲರೂ ಆ ಎತ್ತರಕ್ಕೆ ಬೆಳೆಯಬೇಕು. ಸಾಧಕರ ಸಾಧನೆಗಳು ನಿಮಗೆ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪಟ್ಟಣದಲ್ಲಿ ದಸರಾ ದಿನ ವಿಶೇಷವಾಗಿ ಬನ್ನಿ ಮುಡಿಯುತ್ತಾರೆ.ಸಂಜೆ ೫ಘಂಟೆಗೆ ಹಳೆ ಪಂಚಾಯತ ಆವರಣದಲ್ಲಿ ಡಾ ಎಂ ಎಂ ಪಾಟೀಲ, ಎಸ್ ಎಸ್ ಸಾಲಿಮಠ, ವಿ ಎಂ ಪಾಟೀಲ ಇವರ ಸಮ್ಮುಖದಲ್ಲಿ ಪಟ್ಟಣದ ಹಿರಿಯರು, ಯುವಕರು ವಾದ್ಯ ಮೇಳ ಹಾಗೂ ಹಲಿಗೆ ಬಾರಿಸುತ್ತ ಏಳು ಜನ ವಾಲಿಕಾರರೊಂದಿಗೆ ಬಡಕಲಸಾಹೇಬ ಗುಡಿ ಹತ್ತಿರ ಇರುವ ಬನ್ನಿ ಮರಕ್ಕೆ ವಿಧಿವಿದಾನವಾಗಿ ಪೂಜೆ ನೇರವೇರುತ್ತದೆ.ಸಾವಿರಾರು ಜನರ ಮದ್ಯೆ ಬನ್ನಿ ಮರದ ಪೂಜೆ ನೆರವೇರುತ್ತದೆ. ಪೂಜೆ ಮುಗಿದ ನಂತರ ಡಾ. ಎಂ ಎಂ ಪಾಟೀಲ ಅವರು ವಾಲೀಕಾರರ ಕೈಯಲ್ಲಿರುವ ಖಡ್ಗದಿಂದ ಬನ್ನಿ ತಪ್ಪಲವನ್ನು ಹರಿಯುತ್ತಾರೆ. ಅಲ್ಲಿ ಕೂಡಿದ ಜನರು ಗಿಡ ಹತ್ತಿ ಎಲ್ಲರಿಗೂ ಬನ್ನಿ ತಪ್ಪಲ ಕೊಡುತ್ತಾರೆ.ವಿಶೇಷ ಎಂದರೆ ಜನರು ಮೋದಲಿಗೆ ಬಡಕಲ ಸಾಹೇಬ ದರ್ಗಾಕ್ಕೆ ಹೋಗಿ ಬನ್ನಿ ಇಟ್ಟು ನಮಸ್ಕರಿಸಿ ನಂತರ ಹಾಜೀಮಸ್ತಾನ ದರ್ಗಾಕ್ಕೆ ತೆರಳಿ, ಅಲ್ಲಿಯೂ ಬನ್ನಿ ಇಟ್ಟು ನಮಸ್ಕರಿಸಿದ ನಂತರ ಮನೆಗೆ ಮರಳಿ, ಆರತಿ ಆದನಂತರ ಮನಿದೇವರ ಜಗುಲಿಮೇಲೆ ಬನ್ನಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವೇಗವಾಗಿ ಮುಗಿಸಿದ ಪ್ರಯುಕ್ತ ಶಿಕ್ಷಕಿಯರುಗಳಾದ ನೇತ್ರಾವತಿ ಸಂತೋಷ ನಡಗೇರಿ (ನೇತ್ರಾವತಿ ಅವನಿ) ಮತ್ತು ಬಿ.ಜಿ.ಪಟ್ಟಣಶೆಟ್ಟಿ ಅವರನ್ನು ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಕೀರ್ತಿ ಚಾಲಕ ಅವರು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಇಸಿಓ ಗಳಾದ ಪಿ.ಎ.ಬಾಳಿಕಾಯಿ, ಡಿ.ವಾಯ್.ಗುರಿಕಾರ, ಎ.ಬಿ.ಬಗಲಿ, ಎಂ,ಕೆ,ಬಾಗವಾನ, ಬಿಆರ್‌ಟಿಗಳಾದ ಎಸ್.ಎಸ್.ರಾಮಥಾಳ, ಎಂ.ಬಿ.ಗುಡಗುಂಟಿ, ಮೇಲ್ವಿಚಾರಕ ಆರ್.ಎಸ್.ಹಿರೇಮಠ, ವಿ.ಬಿ.ನಾಗೂರ, ಬಸವರಾಜ ಮಾದರ, ತಾಲೂಕು ಪಂಚಾಯತ್ ನ ಪ್ರಭಾರ ಇ.ಓ ವೆಂಕಟೇಶ ವಂದಾಲ, ಖೂಬಾಸಿಂಗ್ ಜಾಧವ, ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿಗಳಾದ ವೀರಭದ್ರಪ್ಪ ಮೋರ್ಕಿ, ಎ.ಡಿ.ಸಾಹುಕಾರ, ರಮೇಶ ಭಜಂತ್ರಿ, ಭೀಮಶಿ ಗುಂಡಿಮನಿ ಸೇರಿದಂತೆ ಮತ್ತೀತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಹಾಗೂ ಸ್ವಚ್ಛತೆಯೇ ಸೇವೆ 2025 ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ ಅವರು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಸ್ವಚ್ಛತೆಯೇ ಸೇವೆ 2025 ಕಾರ್ಯಕ್ರಮದಂಗವಾಗಿ ಪುರಸಭೆಯ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ವಿತರಣೆ ಮಾಡಿದರು. ನಂತರ ಬಸವ ಭವನದಿಂದ ಬಸವಜನ್ಮ ಸ್ಮಾರಕದವರೆಗೆ ಸ್ವಚ್ಛತೆಯೇ ಸೇವೆ-2025 ಜಾಥಾ ಜರುಗಿತು. ಪೊಲೀಸ್ ಸ್ಟೇಶನ್ ಆವರಣದಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಜೀರ ಗಣಿ, ಅಬ್ದುಲರೆಹಮಾನ ಚೌಧರಿ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಆರೋಗ್ಯ ನಿರೀಕ್ಷಕರಾದ ವಿಜಯಕುಮಾರ ವಂದಾಲ, ಬಸವರಾಜ ಬೋಳಶೆಟ್ಟಿ, ಮಹೇಶ ಹಿರೇಮಠ, ಅಭಿಯಂತರ ಮಹಾದೇವ ಜಂಬಗಿ, ಗುರುರಾಜ ಮಾಗಾವಿ, ಶ್ರೀಧರ ಕಟ್ಟಿ, ಸಿದ್ರಾಮಗೌಡ ಪಾಟೀಲ, ಡೇ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ನರಸಲಗಿ ಗ್ರಾಮ ಪಂಚಾಯಿತಿ ಸದಸ್ಯ ಕಾಂತಪ್ಪ ಹಿರೇಕುರುಬರ ಅವರ ನೂತನ ಮನೆಯ ದ್ವಾರಬಾಗಿಲಿಗೆ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರದ ಕೆತ್ತನೆ ಮಾಡಿರುವದು ಜನರ ಗಮನ ಸೆಳೆಯುತ್ತಿದೆ.ಗುರುವಾರ ಗೃಹಪ್ರವೇಶ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.ದ್ವಾರಬಾಗಿಲ ಮೇಲೆ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರದ ಕೆತ್ತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಲಕ್ಷ್ಮೀ ಯೋಜನೆಯೆಂದು ಬರೆಸಲಾಗಿದೆ.ಈ ಸಂಭ್ರಮಕ್ಕೆ ವಿವಿಧ ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷರು, ಸದಸ್ಯರು ಇತರರು ಸಾಕ್ಷಿಯಾದರು.
