ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಹಾಗೂ ಸ್ವಚ್ಛತೆಯೇ ಸೇವೆ 2025 ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ ಅವರು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸ್ವಚ್ಛತೆಯೇ ಸೇವೆ 2025 ಕಾರ್ಯಕ್ರಮದಂಗವಾಗಿ ಪುರಸಭೆಯ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ವಿತರಣೆ ಮಾಡಿದರು. ನಂತರ ಬಸವ ಭವನದಿಂದ ಬಸವಜನ್ಮ ಸ್ಮಾರಕದವರೆಗೆ ಸ್ವಚ್ಛತೆಯೇ ಸೇವೆ-2025 ಜಾಥಾ ಜರುಗಿತು. ಪೊಲೀಸ್ ಸ್ಟೇಶನ್ ಆವರಣದಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಜೀರ ಗಣಿ, ಅಬ್ದುಲರೆಹಮಾನ ಚೌಧರಿ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಆರೋಗ್ಯ ನಿರೀಕ್ಷಕರಾದ ವಿಜಯಕುಮಾರ ವಂದಾಲ, ಬಸವರಾಜ ಬೋಳಶೆಟ್ಟಿ, ಮಹೇಶ ಹಿರೇಮಠ, ಅಭಿಯಂತರ ಮಹಾದೇವ ಜಂಬಗಿ, ಗುರುರಾಜ ಮಾಗಾವಿ, ಶ್ರೀಧರ ಕಟ್ಟಿ, ಸಿದ್ರಾಮಗೌಡ ಪಾಟೀಲ, ಡೇ ನಲ್ಮದ ಸಿಬ್ಬಂದಿ ನೀಲಮ್ಮ ಬಳವಾಟ, ಮಹಿಳಾ ಸಂಘದ ಸದಸ್ಯರು, ಪುರಸಭೆ ಪೌರಕಾರ್ಮಿಕರು ಇದ್ದರು.

