ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವೇಗವಾಗಿ ಮುಗಿಸಿದ ಪ್ರಯುಕ್ತ ಶಿಕ್ಷಕಿಯರುಗಳಾದ ನೇತ್ರಾವತಿ ಸಂತೋಷ ನಡಗೇರಿ (ನೇತ್ರಾವತಿ ಅವನಿ) ಮತ್ತು ಬಿ.ಜಿ.ಪಟ್ಟಣಶೆಟ್ಟಿ ಅವರನ್ನು ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಕೀರ್ತಿ ಚಾಲಕ ಅವರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಇಸಿಓ ಗಳಾದ ಪಿ.ಎ.ಬಾಳಿಕಾಯಿ, ಡಿ.ವಾಯ್.ಗುರಿಕಾರ, ಎ.ಬಿ.ಬಗಲಿ, ಎಂ,ಕೆ,ಬಾಗವಾನ, ಬಿಆರ್‌ಟಿಗಳಾದ ಎಸ್.ಎಸ್.ರಾಮಥಾಳ, ಎಂ.ಬಿ.ಗುಡಗುಂಟಿ, ಮೇಲ್ವಿಚಾರಕ ಆರ್.ಎಸ್.ಹಿರೇಮಠ, ವಿ.ಬಿ.ನಾಗೂರ, ಬಸವರಾಜ ಮಾದರ, ತಾಲೂಕು ಪಂಚಾಯತ್ ನ ಪ್ರಭಾರ ಇ.ಓ ವೆಂಕಟೇಶ ವಂದಾಲ, ಖೂಬಾಸಿಂಗ್ ಜಾಧವ, ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿಗಳಾದ ವೀರಭದ್ರಪ್ಪ ಮೋರ್ಕಿ, ಎ.ಡಿ.ಸಾಹುಕಾರ, ರಮೇಶ ಭಜಂತ್ರಿ, ಭೀಮಶಿ ಗುಂಡಿಮನಿ ಸೇರಿದಂತೆ ಮತ್ತೀತರರು ಇದ್ದರು.

