Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗಾಂಧೀಜಿ-ಶಾಸ್ತ್ರೀಜಿ ಜೀವನ ಸಂದೇಶಗಳು ನಮಗೆ ಪ್ರೇರಣೆ
(ರಾಜ್ಯ ) ಜಿಲ್ಲೆ

ಗಾಂಧೀಜಿ-ಶಾಸ್ತ್ರೀಜಿ ಜೀವನ ಸಂದೇಶಗಳು ನಮಗೆ ಪ್ರೇರಣೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಈ ದೇಶಕ್ಕೆ ತಮ್ಮ ಸಂದೇಶದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದೇಶದ ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳು ನಮಗೆ ಪ್ರೇರಣೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಚರಕ ನೇಯುವ ಮೂಲಕ ವಿಶಿಷ್ಠವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಮಹನೀಯರ ಕುರಿತು ಇಂದಿನ ಯುವಕರು ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳನ್ನು ಹಾಗೂ ಅವರ ಬದುಕನ್ನು ಅರಿಯಬೇಕಾಗಿದೆ. ಎಂದೆಂದಿಗೂ ಅವರ ಕಾರ್ಯ ಸಾಧನೆಯ ಮೇರು ಆದರ್ಶ ವ್ಯಕ್ತಿತ್ವ, ಅವರ ಚಿಂತನೆ, ನಂಬಿದ್ದ ತತ್ವಾದರ್ಶಗಳು ದೇಶದ ನಾಗರಿಕರಿಗೆ ಅಚ್ಚಳಿಯದೇ ನೆನಪಿನಲ್ಲುಳಿದಿವೆ. ಗಾಂಧೀಜಿಯವರ ಸತ್ಯ, ಅಹಿಂಸೆ ಮೂಲಕ ಕೈಗೊಂಡ ಸತ್ಯಾಗ್ರಹ ಬಲಿಷ್ಠ ಮಾನವ ಸಂಪನ್ಮೂಲ ಹೊಂದಿದ್ದ ಬ್ರಿಟೀಷ ತಲೆಬಾಗಿತ್ತು. ದೇಶದ ಸ್ವಾತಂತ್ರö್ಯಕ್ಕಾಗಿ ಗಾಂಧೀಜಿÀಯವರು ಚಿಂತನೆಗಳ ಜೊತೆಗೆ ಸತ್ಯಾಗ್ರಹ ನಡೆಸಿದ್ದರು. ಸತ್ಯಾಗ್ರಹದ ಮೂಲಕ ಸ್ವದೇಶಿ ತತ್ವ ನೀಡಿದ್ದಾರೆ. ಸ್ವಾತಂತ್ರö್ಯ ಹೋರಾಟದಲ್ಲಿ ತತ್ವಗಳಿಂದ ಜನರಿಗೆ ತಿಳಿಯುವ ಹಾಗೂ ಜನರಿಗೆ ಮನಮುಟ್ಟುವ ವಿಚಾರಗಳನ್ನು ತಿಳಿಸುತ್ತಿದ್ದರು. ಅಸಹಕಾರ ಚಳುವಳಿ, ಸ್ವದೇಶಿ ಬಟ್ಟೆ, ಖಾದಿ ಬಟ್ಟೆ ದೇಶೀಯ ವಸ್ತುಗಳ ಮಹತ್ವವನ್ನು ಅವರು ಸಾರಿದರು ಎಂದು ಅವರು ಹೇಳಿದರು.
ಲಾಲ್ ಬಹದ್ದೂರ ಶಾಸ್ತಿçÃಜಿಯವರು ನೀಡಿದ ಜೈ ಜೈವಾನ್ ಜೈ ಕಿಸಾನ್ ಘೋಷವಾಕ್ಯ ರೈತ ಹಾಗೂ ಸೈನಿಕರ ಬಗೆಗಿನ ಅಪಾರ ಕಾಳಜಿಗೆ ದ್ಯೋತಕವಾಗಿದೆ. ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿçà ಅವರ ಜೀವನಾದರ್ಶಗಳು ನಮ್ಮೆಲ್ಲರ ಬದುಕಿಗೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ, ಗಾಂಧೀಜಿಯವರನ್ನು ಇಡೀ ಜಗತ್ತು ಗೌರವಿಸುತ್ತದೆ. ಸತ್ಯವೇ ದೇವರು ಎಂಬುದನ್ನು ತಿಳಿಸಿದರು.ಪ್ರಾಮಾಣಿಕೆ ಹಾಗೂ ನೈತಿಕತೆಯನ್ನು ಮಕ್ಕಳಲ್ಲಿ ಬೆಳೆಸಬೇಕು.ಶಾಸ್ತ್ರಿ ಹಾಗೂ ಗಾಂಧಿ ಅವರು ಆದರ್ಶಪ್ರಾಯರಾಗಿದ್ದಾರೆ. ವಿಶ್ವಸಂಸ್ಥೆಯು ವiಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು ವಿಶ್ವ ಅವರನ್ನು ಗೌರವಿಸುವ ಪರಿಯಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಸಂಗಮೇಶ ಮೇತ್ರಿ ಅವರು ಮಾತನಾಡಿ, ಗಾಂಧಿಜಿಯವರ ಚಿಂತನೆÀಗಳನ್ನು ಅಳವಡಿಸಿಕೊಂಡರೆ ತಂಪೆರೆಯಬಹುದು.ಗಾAಧಿಜಿಯವರ ಬದುಕನ್ನು ಅವರ ಚಿಂತನಗಳ ಓದಿನ ಅಗತ್ಯವಿದೆ.ಔದ್ಯೋಗಿಕರಣದಲ್ಲಿ ಗಾಂಧೀಜಿ ಚಿಂತನೆ ಬಹು ಪ್ರಸ್ತುತವಾಗಿವೆ. ಯುವಜನರು ದಾರ್ಶನಿಕರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಮತಿ ಕವಿತಾ ಕಲ್ಯಾಣಪ್ಪಗೋಳ ಅವರು, ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಕುರಿತು ಉಪನ್ಯಾಸ ನೀಡಿ, ಸರಳತೆ, ಸಜ್ಜನಿಕೆ, ಸಹಿಷ್ಣುತೆ, ಪ್ರಾಮಾಣಿಕತೆ, ಸ್ವಾಭಿಮಾನಿ, ಕುಶಾಗ್ರಮತಿಯಾಗಿದ್ದ ದೇಶಭಿಮಾನಿ. ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಶಾಸ್ತ್ರಿ ಅವರು ಅಸಾಮಾನ್ಯ ಕಾರ್ಯನಿರ್ವಹಿಸಿ, ಸರಳತೆ, ಆದರ್ಶ ವಿಚಾರಗಳಿಂದ ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ್ ಡಂಬಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದಿನ್ ಸೌದಾಗರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಹೊಸಮನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಬಿ ಕುಂಬಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಅಡಿವೆಪ್ಪ ಸಾಲಗಲ್, ವಿದ್ಯಾವತಿ ಅಂಕಲಗಿ, ಪೀಟರ್ ಅಲೆಕ್ಸಾಂಡರ್, ಸುರೇಶ ಘೋಣಸಗಿ, ಬಾಬುಗೌಡ ಪಾಟೀಲ್, ನಿಲೇಶ ಬೇನಾಳ, ನಾಗರಾಜ ಲಂಬೂ, ಭೀಮರಾಯ ಜಿಗಜಿಣಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿವಿಧ ಶಾಲಾ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಣ್ಮನ ಸೆಳೆದ ವೇಷಧಾರಿ ಮಕ್ಕಳು

ಕಾರ್ಯಕ್ರಮದಲ್ಲಿ ರಾಷ್ಟ್ರ ನಾಯಕರ ವೇಷ ತೊಟ್ಟ ಚಿಕ್ಕ ಮಕ್ಕಳು ಪ್ರೇಕ್ಷಕರ ಕಣ್ಮನ ಸೆಳೆದರು. ರಘುಪತಿ ರಾಘವ ಹಾಗೂ ವೈಷ್ಣವ ಜನತೋ ಎಂಬ ಗಾಂಧಿಜಿಯವರ ಪ್ರಿಯ ಭಜನೆಗಳನ್ನು ವಿರೇಶ ವಾಲಿ ಹಾಗೂ ತಂಡದವರು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು.

ಸ್ವಚ್ಛತಾ ನಡಿಗೆ ಜಾಥಾ

ಕಾರ್ಯಕ್ರಮಕ್ಕೂ ಮೊದಲು, ನಗರದ ಸೈನಿಕ ಶಾಲೆ ಹತ್ತಿರ ಇರುವ ಲಾಲಬಹಾದ್ದೂರ ಶಾಸ್ತ್ರೀಜಿಯವರ ಪುತ್ಥಳಿಗೆ ಹಾಗೂ ನಗರದ ಹೃದಯಭಾಗದ ಗಾಂಧಿವೃತ್ತದ ಗಾಂಧೀ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಗರದ ಜಲನಗರ ರಸ್ತೆಯಲ್ಲಿರುವ ಬುದ್ಧ ವಿಹಾರದಿಂದ ಗಾಂಧಿ ಭವನದವರೆಗೆ ಸ್ವಚ್ಛತಾ ನಡಿಗೆ ಜಾಥಾ ಮೂಲಕ ಸ್ವಚ್ಛತೆಯ ಮಹತ್ವದ ಕುರಿತು ಸಾರಲಾಯಿತು.

ಚರಕ ನೇಯ್ದ ಡಿಸಿ ಮತ್ತು ಎಸ್ಪಿ

ಮಹಾತ್ಮ ಗಾಂಧೀಜಿ ಅವರ ೧೫೬ನೇ ಜಯಂತಿ ಹಾಗೂ ಲಾಲ್ ಬಹಾದ್ದೂರ ಶಾಸ್ತಿç ಅವರ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಚರಕ ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಪ್ರಿಯ ಭಜನೆಗಳ ಗೀತಗಾಯನವೂ ನಡೆಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ

ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ
    In (ರಾಜ್ಯ ) ಜಿಲ್ಲೆ
  • ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ಲಭ್ಯ :ಡಾ.ಮುಕುಂದ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ :ಮಹಾಲಿಂಗ ಶ್ರೀ
    In (ರಾಜ್ಯ ) ಜಿಲ್ಲೆ
  • ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವಂತೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಖೋಖೊ ದೈಹಿಕ ಸದೃಡತೆಯನ್ನು ಉತ್ತೇಜಿಸುವ ಸಾಂಪ್ರದಾಯಿಕ ಕ್ರೀಡೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಎಂದರೆ ತನ್ನದೇ ಆದ ಹೆಜ್ಜೆಯಲ್ಲಿ ನಡೆಯುವವಳು :ಭಾಗ್ಯಶ್ರೀ
    In (ರಾಜ್ಯ ) ಜಿಲ್ಲೆ
  • ಪಪೂ ಕಾಲೇಜು ಮಂಜೂರಾತಿಗೆ ಸಚಿವರಿಗೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.