ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ನರಸಲಗಿ ಗ್ರಾಮ ಪಂಚಾಯಿತಿ ಸದಸ್ಯ ಕಾಂತಪ್ಪ ಹಿರೇಕುರುಬರ ಅವರ ನೂತನ ಮನೆಯ ದ್ವಾರಬಾಗಿಲಿಗೆ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರದ ಕೆತ್ತನೆ ಮಾಡಿರುವದು ಜನರ ಗಮನ ಸೆಳೆಯುತ್ತಿದೆ.
ಗುರುವಾರ ಗೃಹಪ್ರವೇಶ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.
ದ್ವಾರಬಾಗಿಲ ಮೇಲೆ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರದ ಕೆತ್ತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಲಕ್ಷ್ಮೀ ಯೋಜನೆಯೆಂದು ಬರೆಸಲಾಗಿದೆ.
ಈ ಸಂಭ್ರಮಕ್ಕೆ ವಿವಿಧ ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷರು, ಸದಸ್ಯರು ಇತರರು ಸಾಕ್ಷಿಯಾದರು.

