ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದಲ್ಲಿ ದಸರಾ ದಿನ ವಿಶೇಷವಾಗಿ ಬನ್ನಿ ಮುಡಿಯುತ್ತಾರೆ.
ಸಂಜೆ ೫ಘಂಟೆಗೆ ಹಳೆ ಪಂಚಾಯತ ಆವರಣದಲ್ಲಿ ಡಾ ಎಂ ಎಂ ಪಾಟೀಲ, ಎಸ್ ಎಸ್ ಸಾಲಿಮಠ, ವಿ ಎಂ ಪಾಟೀಲ ಇವರ ಸಮ್ಮುಖದಲ್ಲಿ ಪಟ್ಟಣದ ಹಿರಿಯರು, ಯುವಕರು ವಾದ್ಯ ಮೇಳ ಹಾಗೂ ಹಲಿಗೆ ಬಾರಿಸುತ್ತ ಏಳು ಜನ ವಾಲಿಕಾರರೊಂದಿಗೆ ಬಡಕಲಸಾಹೇಬ ಗುಡಿ ಹತ್ತಿರ ಇರುವ ಬನ್ನಿ ಮರಕ್ಕೆ ವಿಧಿವಿದಾನವಾಗಿ ಪೂಜೆ ನೇರವೇರುತ್ತದೆ.
ಸಾವಿರಾರು ಜನರ ಮದ್ಯೆ ಬನ್ನಿ ಮರದ ಪೂಜೆ ನೆರವೇರುತ್ತದೆ. ಪೂಜೆ ಮುಗಿದ ನಂತರ ಡಾ. ಎಂ ಎಂ ಪಾಟೀಲ ಅವರು ವಾಲೀಕಾರರ ಕೈಯಲ್ಲಿರುವ ಖಡ್ಗದಿಂದ ಬನ್ನಿ ತಪ್ಪಲವನ್ನು ಹರಿಯುತ್ತಾರೆ. ಅಲ್ಲಿ ಕೂಡಿದ ಜನರು ಗಿಡ ಹತ್ತಿ ಎಲ್ಲರಿಗೂ ಬನ್ನಿ ತಪ್ಪಲ ಕೊಡುತ್ತಾರೆ.
ವಿಶೇಷ ಎಂದರೆ ಜನರು ಮೋದಲಿಗೆ ಬಡಕಲ ಸಾಹೇಬ ದರ್ಗಾಕ್ಕೆ ಹೋಗಿ ಬನ್ನಿ ಇಟ್ಟು ನಮಸ್ಕರಿಸಿ ನಂತರ ಹಾಜೀಮಸ್ತಾನ ದರ್ಗಾಕ್ಕೆ ತೆರಳಿ, ಅಲ್ಲಿಯೂ ಬನ್ನಿ ಇಟ್ಟು ನಮಸ್ಕರಿಸಿದ ನಂತರ ಮನೆಗೆ ಮರಳಿ, ಆರತಿ ಆದನಂತರ ಮನಿದೇವರ ಜಗುಲಿಮೇಲೆ ಬನ್ನಿ ಇಟ್ಟು ಒಬ್ಬರಿಗೊಬ್ಬರು ಬನ್ನಿ ವಿನಿಯೋಗ ಮಾಡುವರು.
ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ.
ಬನ್ನಿ ಪೂಜೆಯಲ್ಲಿ ಮುಖಂಡರಾದ ಜೆ ಎಂ ಪಾಟೀಲ, ಶಿವನಗೌಡ ಪಾಟೀಲ, ದಯಪ್ಪಗೌಡ ಪಾಟೀಲ, ಹನಮುಗೌಡ ಪಾಟೀಲ, ದಯಾನಂದ ಪರಮಾಜ, ಮಹೇಶ ಬೋಗಾರ, ರಾಮು ಬಿರಾದಾರ, ವಾಲಿಕಾರರಾದ ಯಮನಪ್ಪ ಬಾಗಿ, ಮತ್ತಿತರರು ಇದ್ದರು.

