Author: editor.udayarashmi@gmail.com

ಇಂದು (ಅಕ್ಟೋಬರ-೯, ಗುರುವಾರ) ವಿಶ್ವ ಅಂಚೆ ದಿನದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಆಗ ಒಂದು ಕಾಲವಿತ್ತು, ನಮ್ಮ ಎಲ್ಲ ವ್ಯವಹಾರಗಳು ಕೇವಲ ಪತ್ರದ ಮುಖೇನ ನಡೆಯುತ್ತಿದ್ದವು. ಸೈಕಲ್ ಮೇಲೆ ಟ್ರಿನ್ ಟ್ರಿನ್ ಎಂಬ ಸೈಕಲ್ ಗಂಟೆಯ ಶಬ್ದ ಮಾಡುತ್ತಾ, ಮನೆ ಮುಂದೆ ಬಂದು ನಿಂತು “ಪೋಸ್ಟ್” ಎಂದು ಕೂಗಿ ಕರೆದು ಪತ್ರ ನೀಡುತ್ತಿದ್ದ ಪೋಸ್ಟಮ್ಯಾನ್. ಸೇನೆಯಲ್ಲಿ ಸೈನಿಕನಿಂದ ಯಾವುದೇ ಸುಖ-ದುಃಖದ ಸಂದೇಶಗಳು ಬಂದರೂ ಅವು ಕೇವಲ ಊರಿನ ಪೋಸ್ಟನಲ್ಲಿ ಟೆಲಿಗ್ರಾಮ್ ಮೂಲಕವೇ ಬರುತ್ತಿದ್ದವು. ಮನೆಯವರಿಗೆ, ನೆಂಟರಿಗೆ ಅಥವಾ ಸಂಬಂಧಿಗಳಿಗೆ ಯಾವುದೇ ವಿಷಯದ ಬಗ್ಗೆ ತಿಳಿಸಬೇಕೆಂದರೂ ೧೫ ಪೈಸೆ ಮೌಲ್ಯದ ಪೋಸ್ಟ್ ಕಾರ್ಡಗಳೇ ನಮಗೆ ಗತಿ. ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಪರ್ಕ-ಸಂವಹನದ ಮಾಧ್ಯಮ-ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದ ಪೋಸ್ಟಲ್ ಇಲಾಖೆಯು ಮನಿ ಆರ್ಡರ್, ಇನಲ್ಯಾಂಡ್, ವೃದ್ಯಾಪ್ಯ ವೇತನ, ಅಂಗವಿಕಲರ ವೇತನ, ನೌಕರರ ಮಾಸಿಕ ಪಿಂಚಣ, ಮೋಬೈಲ್ ಬ್ಯಾಂಕಿಂಗ್‌ ನಂತಹ ಸೇವೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಜೀವನವೇ ಐಸ್ಕ್ರೀಮ್ ಇದ್ದಂಗ, ಐಸ್ಕ್ರೀಮ್ ಹೇಗೆ ತಿದ್ದುರು ಕರಗುತ್ತದೆ ತಿನ್ನದಿದ್ದರೆ ಕರಗುತ್ತದೆ, ಹಾಗೆಯೇ ಜೀವನ ಕರಗಿ ಮಣ್ಣಲ್ಲಿ ಮಣ್ಣಾಗುವ ಮುನ್ನ ಮಹಾದೇವನ ಒಲುಮೆಗೆ ಪಾತ್ರರಾಗೋಣ ಎಂದು ಚಟರ್ಕಿಯ ಶಂಕರಯ್ಯ ಶಾಸ್ತ್ರೀ ಹೇಳಿದರು.ಪಟ್ಟಣದ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪರೋಪಕಾರವೇ ಪುಣ್ಯ ಎನ್ನುತ್ತಾ, ಜೀವನದಲ್ಲಿ ಬರುವ ಸುಖ ದುಃಖ, ಒಳಿತು ಕೆಡುಕು, ಕಷ್ಟ ಕಾರ್ಪಣ್ಯ, ಮೆಟ್ಟಿ ನಿಂತು, ನಿಜದ ನಿಲುವು ಅರಿಯುವ ಮೂಲಕ ಬದುಕಿನ ಬೇಕು ಬೇಡಗಳ ನಡುವೆ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದಡೆಗೆ ಕೊಂಡೊಯ್ಯುವುದು, ಜಿಗುಪ್ಸೆಗೊಂಡು ಜೀವಕ್ಕೆ ಜೀವಾಮೃತ ತುಂಬಿ, ಮನುಷ್ಯನನ್ನು ಮಹಾದೇವನಾಗಿ ಮಾಡುವ ಸದುದ್ದೇಶದಿಂದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಆಯೋಜಿಸುತ್ತಿರುವ ಚನ್ನಬಸವ ಶಿವಾಚಾರ್ಯರು ಕಾರ್ಯ ಸುತ್ಯಾರ್ಹ ಎಂದು ಬಣ್ಣಿಸಿದರು.ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಶ್ರೀ ಚನ್ನಬಸವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ ಕಾನ್ ನಗರದ ಬಿಎಲ್.ಡಿ.ಇ ಸಂಸ್ಥೆ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 65 ಜನ ಆಯ್ಕೆಯಾಗಿದ್ದಾರೆ.ಅಂತಾರಾಷ್ಟ್ರೀಯ ಬೃಹತ್ ಸಂಸ್ಥೆಯಾಗಿರುವ ಫಾಕ್ಸ್ ಕಾನ್ ಜಗತ್ತಿನಲ್ಲಿಯೇ ಐಪೋನ್ ತಯಾರಿಕೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದ್ದು, ಈ ಕಂಪನಿಯ ಆಡಳಿತ ಮಂಡಳಿಗೆ ವಿಜಯಪುರ ಹಾಗೂ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಪಾಟೀಲ ಅವರು ಕೋರಿದ್ದರು. ಈ ಹಿನ್ನೆಲೆಯಲ್ಲಿ ಫಾಕ್ಸ್ ಕಾನ್ ಅಧಿಕಾರಿಗಳು ಖುದ್ದು ವಿಜಯಪುರಕ್ಕೆ ಆಗಮಿಸಿ, ಇದೇ ಮೊದಲ ಬಾರಿಗೆ ಬೆಂಗಳೂರು ಹೊರತು ಪಡಿಸಿ ಉತ್ತರ ಕರ್ನಾಟಕದ ವಿಜಯಪುರ ನಗರದಲ್ಲಿ ಸೆಪ್ಟೆಂಬರ್ 26 ರಂದು ನೇರ ನೇಮಕಾತಿಗಾಗಿ ವಿದ್ಯಾರ್ಥಿಗಳ ಸಂದರ್ಶನ ನಡೆಸಿದ್ದರು.ಈ ಉದ್ಯೋಗ ಮೇಳದಲ್ಲಿ 2024 ಮತ್ತು 2025 ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಇ ಮತ್ತು ಡಿಪ್ಲೋಮಾ ಪದವಿಯ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಿ.ಜಿ. ಗವಾಯಿ ಅವರ ಮೇಲೆ ಬೂಟು ಎಸೆದು ಹಲ್ಲೆ ಮಾಡಲು ಯತ್ನಿಸಿರುವ ಘಟನೆಯನ್ನು ಖಂಡಿಸಿ, ಚಡಚಣ ತಾಲೂಕ ದಲಿತ ಸಂಘಟನೆಯ ವತಿಯಿಂದ ನಡೆದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ದಶರಥ ಬನಸೋಡೆ ಹೇಳಿದರು.ಈ ಸಂದರ್ಭದಲ್ಲಿ ತಾಲೂಕ ದಲಿತ ಮುಖಂಡ ದಶರಥ ಬನಸೋಡೆ ಮಾತನಾಡಿ, ನ್ಯಾಯದ ಕುರ್ಚಿಯಲ್ಲಿ ಕುಳಿತಿರುವ ನ್ಯಾಯಮೂರ್ತಿಯೊಬ್ಬರಿಗೆ ಹೀಗೆ ಅವಮಾನ ಮಾಡುವುದು ಎಂದರೆ ಅದು ಕೇವಲ ವ್ಯಕ್ತಿಗೆ ಸಿಮಿತವಾಗಿಲ್ಲ ಭಾರತ ಸಂವಿಧಾನಕ್ಕೂ ಅವಮಾನ ಮಾಡಿದಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಇಂತಹ ಹೀನ ಕೃತ್ಯಗಳು ದೇಶದ ಸಂವಿಧಾನದ ಮೌಲ್ಯಗಳನ್ನು ಹಾಳುಮಾಡುವಂತಿವೆ. ಇಂದಿಗೂ ಕೆಲವರು ವರ್ಣಾಶ್ರಮ ಪದ್ಧತಿ ಹಾಗೂ ಜಾತಿ ಪ್ರಾಬಲ್ಯ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದಲೇ ಇಂತಹ ಹಲ್ಲೆ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಿವೆ ಆದ್ದರಿಂದ ನಾವೂ ಅದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಹೇಳಿದರು.ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿ ಸಿ.ಜಿ.ಗವಾಯಿ ಅವರ ಮೇಲೆ ಬೂಟು ಎಸೆದ ವಕೀಲ ರಾಕೇಶ್ ಕಿಶೋರ್…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸತತ ನಾಲ್ಕು ದಿನಗಳಿಂದ ನಡೆದ ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರ ಮದ್ಯೆ ಬುಧವಾರ ಸಂಪನ್ನಗೊಂಡಿತು.ಪಟ್ಟಣದ ಹೊರವಲಯದ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಶನಿವಾರದಂದು ತೆರಳಿದ್ದ ರಾವುತರಾಯನನ್ನು ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾಧಿಗಳ ಜಯಘೋಷದ ಮದ್ಯೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು. ನಾಡಿನ ಹಾಗು ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ವಾಸ್ತವ್ಯ ಹೂಡಿ ವಿವಿಧ ಪೂಜಾ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು.ಬೆಳಿಗ್ಗೆ ೭.೦೦ ಗಂಟೆಗೆ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತಾಧಿಗಳು ಏಳುಕೋಟಿ ಏಳುಕೋಟಿ ಏಳುಕೋಟಿ ಗೇ ಎಂಬ ಜಯಕಾರದೊಂದಿಗೆ ಭಕ್ತಿ ಸಮರ್ಪಿಸಿದರು.ಜಾತ್ರೆಯಲ್ಲಿ ವಿಶೇಷವಾಗಿ ದಿವಟಿಗೆ ಹಿಡಿದವರು ಸಾಲಾಗಿ ಕುಳಿತು ಭಕ್ತಿಯ ಭಾವ ಮೆರೆದರೆ, ಪುರುಷ ವಗ್ಗೆಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು.ಪಟ್ಟಣದ ಜನರು ನಾಲ್ಕು ದಿನಗಳವರೆಗೆ ತಮ್ಮ ಕೆಲಸ ಕಾರ‍್ಯಗಳನ್ನು ಬದಿಗೊತ್ತಿ,…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಆರಾದ್ಯ ದೇವತೆ ಶ್ರೀ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಅಲಂಕೃತ ದೇವಿಯ ಉಡಿ ತುಂಬುವ ಕಾರ್ಯಕ್ರಮ ವಿಜ್ರಂಬಣೆಯಿಂದ ನಡೆಯಿತು.ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹಾಗೂ ಓಂಕಾರ ಮಹಾರಾಜರ ನೇತ್ರತ್ವದಲ್ಲಿ ಮುಂಜಾನೆ ವಿಶೇಷ ಪೂಜೆಯೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ನೂರಾರು ಜನ ಮಹಿಳೆಯರಿಂದ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು, ಮದ್ಯಾಹ್ನ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಿತು.ಇದೇ ಸಂಧರ್ಬದಲ್ಲಿ ಪ್ರಭು ಮಹಾಸ್ವಾಮಿಗಳು ಹಾಗೂ ಓಂಕಾರ ಮಹಾರಾಜರನ್ನು ಗ್ರಾಮದ ಪ್ರಮುಖರು, ವಿಶ್ವಕರ್ಮ ಸಮಾಜಬಾಂಧವರಿಂದ ಸತ್ಕರಿಸಿ ಗೌರವಿಸಲಾಯಿತು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪರಪ್ಪಾ ಪಾಲಭಾವಿ, ಪ್ರಭು ನೇಸೂರ, ಈಶ್ವರ ಬಡಿಗೇರ, ಪ್ರಕಾಶ ಪೂಜಾರಿ, ಪ್ರಕಾಶ ಬಡಿಗೇರ, ಕಾಳು ಬಡಿಗೇರ ಸೇರಿದಂತೆ ಹಲವಾರು ಜನ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮೀತಿಯ ಅಧ್ಯಕ್ಷರಾಗಿ ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ ಆಯ್ಕೆಯಾಗಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಮಧು ಬಂಗಾರಪ್ಪನವರ ಅನುಮೋದನೆಯ ಮೇರೆಗೆ, ಜಿಲ್ಲಾ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ, ಸಿದ್ದು ಕೊಣ್ಣೂರ, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಭಿ. ತಿಮ್ಮಾಪೂರರವರ ಸಿಫಾರಸ್ಸಿನ ಮೇರೆಗೆ ಬಾಳಪ್ಪ ಗಡೆಪ್ಪನವರ ನೇಮಕಗೊಳಿಸಲಾಗಿದ್ದು ಸದರೀಯವರು ಪಕ್ಷ ಹಾಗೂ ಸಮೀತಿಯ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಬೆಳೆಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶರಣರ, ದಾರ್ಶನಿಕರ, ಚಿಂತಕರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳನ್ನು ಇಂತಹ ಆದ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ಇಂದಿನ ಯುವ ಪೀಳಿಗೆಯಲ್ಲಿ ಧಾರ್ಮಿಕ ಚಿಂತನೆಯ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಜೇರಟಗಿ ವಿರಕ್ತಮಠದ ಖ್ಯಾತ ಪ್ರವಚನಕಾರ ಮಹಾಂತ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಮಹಾಶಿವಯೋಗಿಗಳ ೮೫ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಮಹಾಶಿವಯೋಗಿಗಳ ಪುರಾಣ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಶಕ್ತಿ ಸಂಗಮ ಸದ್ಗುರು ವೀರೇಶ್ವರ ಮಠವಾಗಿದೆ. ಆದ್ದರಿಂದ ಭಕ್ತರು ಶ್ರೀಮಠದ ಮೇಲೆ ಶ್ರದ್ಧೆ ಭಕ್ತಿಯಿಡುವ ಮೂಲಕ ಸತ್ಯದ ನೆಲಘಟ್ಟದ ಮೇಲೆ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.ವೇದಿಕೆಯ ಮೇಲೆ ಹಿರೇಮಠದ ಶಂಕ್ರಯ್ಯ ಹಿರೇಮಠ, ಶ್ರೀಮಠದ ಅರ್ಚಕ ಬಸಯ್ಯ ಮಠಪತಿ ಇದ್ದರು.ಗುರುನಾಥ ಮೈಂದರಗಿ ಬಸವಣ್ಣನಾಗಿದ್ದರು. ಅರ್ಚಕ ಶಾಂತಯ್ಯ ಮಠಪತಿ ಪುರಾಣ ಗ್ರಂಥಕ್ಕೆ ಪೂಜಾ ನೆರವೇರಿಸಿದರು. ಸಂಗೀತ ಸೇವೆಯನ್ನು ಕೆರುಟಗಿ ಹಿರೇಮಠದ ಗವಾಯಿ ರೇಣುಕಾಚಾರ್ಯ ಹಿರೇಮಠ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಗುತ್ತರಗಿ ಗ್ರಾಮದ ನಿವಾಸಿ ನಿಂಗಯ್ಯ ಗುರುಪಾದಯ್ಯ ಮಠ ಅವರು ಮಂಡಿಸಿದ “ಸ್ಪೇಷಲ್ ಪ್ಯಾಟರ್ನ್ ಆಂಡ್ ಹ್ಯಾರ‍್ಕಿ ರೂರಲ್ ಸೆಟ್ಲಮೆಂಟ್ಸ್ ಇನ್ ವಿಜಯಪುರ ಡಿಸ್ಟ್ರಿಕ್ಟ್ ಎ ಸ್ಟ್ರ್ಯಾಟರ್ಜಿ ಫಾರ್ ಬ್ಯಾಲೆನ್ಸ್ಡ್ ಡೆವಲಪ್‌ಮೆಂಟ್” ಎಂಬ ಮಹಾಪ್ರಬಂಧಕ್ಕೆ ಭೂಗೋಳಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಇವರಿಗೆ ಪಿ.ಎಚ್‌ಡಿ ಪದವಿಯನ್ನು ಘೋಷಿಸಿದೆ. ಇವರಿಗೆ ಭೋಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಲ್.ಟಿ.ನಾಯಕ ಅವರು ಮಾರ್ಗದರ್ಶನ ಮಾಡಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್‌ಡಿ ಪದವಿ ಪ್ರಧಾನ ಮಾಡಿದಕ್ಕೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸ್ನೇಹಿತರು, ಹಕ್ಕಿಗೂಡು ಬಳಗ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಪರಿಹಾರ ಘೋಷಣೆಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಪರಿಹಾರಕ್ಕಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬುಧವಾರ ಪತ್ರ ಬರೆದು ಮನವಿ ಮಾಡಿದ್ದಾರೆ.ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಮತ್ತು ಸ್ಥಳಾಂತರಕ್ಕೆ ಕಾರಣವಾಗಿದೆ. ಭೀಮಾ ನದಿಯ ದಡದಲ್ಲಿ ಉಂಟಾದ ಭಾರಿ ಪ್ರವಾಹವು 10 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಕಾರಣವಾಗಿದ್ದು, ರೈತರು ತಾವು ಬೆಳೆದ ಬೆಳೆಗಳು ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.ಮಹಾರಾಷ್ಟ್ರದ ಮೇಲ್ಭಾಗದ ಜಲಾಶಯಗಳು ಮತ್ತು ಬ್ಯಾರೇಜ್‌ಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ್ದರಿಂದ ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಭೂಮಿ ಮುಳುಗಿದೆ. ಭೀಮಾ ಮತ್ತು ಮಂಜ್ರಾ ನದಿಗಳ ಉಬ್ಬರವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.ಪ್ರಾಥಮಿಕ ವರದಿಗಳ ಪ್ರಕಾರ 117 ಗ್ರಾಮಗಳ 10,576 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡು, ವಿವಿಧ ಪರಿಹಾರ ಶಿಬಿರಗಳಲ್ಲಿ…

Read More