ಉದಯರಶ್ಮಿ ದಿನಪತ್ರಿಕೆ
ಚಡಚಣ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಿ.ಜಿ. ಗವಾಯಿ ಅವರ ಮೇಲೆ ಬೂಟು ಎಸೆದು ಹಲ್ಲೆ ಮಾಡಲು ಯತ್ನಿಸಿರುವ ಘಟನೆಯನ್ನು ಖಂಡಿಸಿ, ಚಡಚಣ ತಾಲೂಕ ದಲಿತ ಸಂಘಟನೆಯ ವತಿಯಿಂದ ನಡೆದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ದಶರಥ ಬನಸೋಡೆ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ದಲಿತ ಮುಖಂಡ ದಶರಥ ಬನಸೋಡೆ ಮಾತನಾಡಿ, ನ್ಯಾಯದ ಕುರ್ಚಿಯಲ್ಲಿ ಕುಳಿತಿರುವ ನ್ಯಾಯಮೂರ್ತಿಯೊಬ್ಬರಿಗೆ ಹೀಗೆ ಅವಮಾನ ಮಾಡುವುದು ಎಂದರೆ ಅದು ಕೇವಲ ವ್ಯಕ್ತಿಗೆ ಸಿಮಿತವಾಗಿಲ್ಲ ಭಾರತ ಸಂವಿಧಾನಕ್ಕೂ ಅವಮಾನ ಮಾಡಿದಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಹೀನ ಕೃತ್ಯಗಳು ದೇಶದ ಸಂವಿಧಾನದ ಮೌಲ್ಯಗಳನ್ನು ಹಾಳುಮಾಡುವಂತಿವೆ. ಇಂದಿಗೂ ಕೆಲವರು ವರ್ಣಾಶ್ರಮ ಪದ್ಧತಿ ಹಾಗೂ ಜಾತಿ ಪ್ರಾಬಲ್ಯ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದಲೇ ಇಂತಹ ಹಲ್ಲೆ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಿವೆ ಆದ್ದರಿಂದ ನಾವೂ ಅದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿ ಸಿ.ಜಿ.ಗವಾಯಿ ಅವರ ಮೇಲೆ ಬೂಟು ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಕೀಲ ವೃತ್ತಿಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ವಕೀಲ ರಾಕೇಶ್ ಕಿಶೋರ್ ಅವರನ್ನು ವಕೀಲ ವೃತ್ತಿಯಿಂದ ಕೂಡಲೆ ಅಮಾನತುಗೋಳಿಸದಿದ್ದರೆ ಚಡಚಣ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚಡಚಣ ದಲಿತ ಸಂಘಟನೆಯ ಮುಖಂಡರಾದ ಬೀರಪ್ಪ ಜಟ್ಟೆಪ್ಪ ಬನಸೋಡೆ, ಧರ್ಮಣ್ಣ ಬನಸೋಡೆ, ಪರಮೇಶ ಸಿಂಗೆ, ದೇವಾನಂದ ಸಿಂಗೆ, ಅನಿಲ ಸರತಾಪೆ, ದಾವಲ ಬನಸೋಡೆ, ಸಂತೋಷ ದೊಡಮನಿ, ಸಿದಾರಾಯ ಬನಸೋಡೆ, ಸಂಜು ಬನಸೋಡೆ ಸೇರಿದಂತೆ ಇತರರು ಇದ್ದರು.

