ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮೀತಿಯ ಅಧ್ಯಕ್ಷರಾಗಿ ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಮಧು ಬಂಗಾರಪ್ಪನವರ ಅನುಮೋದನೆಯ ಮೇರೆಗೆ, ಜಿಲ್ಲಾ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ, ಸಿದ್ದು ಕೊಣ್ಣೂರ, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಭಿ. ತಿಮ್ಮಾಪೂರರವರ ಸಿಫಾರಸ್ಸಿನ ಮೇರೆಗೆ ಬಾಳಪ್ಪ ಗಡೆಪ್ಪನವರ ನೇಮಕಗೊಳಿಸಲಾಗಿದ್ದು ಸದರೀಯವರು ಪಕ್ಷ ಹಾಗೂ ಸಮೀತಿಯ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಬೆಳೆಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

