ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗುತ್ತರಗಿ ಗ್ರಾಮದ ನಿವಾಸಿ ನಿಂಗಯ್ಯ ಗುರುಪಾದಯ್ಯ ಮಠ ಅವರು ಮಂಡಿಸಿದ “ಸ್ಪೇಷಲ್ ಪ್ಯಾಟರ್ನ್ ಆಂಡ್ ಹ್ಯಾರ‍್ಕಿ ರೂರಲ್ ಸೆಟ್ಲಮೆಂಟ್ಸ್ ಇನ್ ವಿಜಯಪುರ ಡಿಸ್ಟ್ರಿಕ್ಟ್ ಎ ಸ್ಟ್ರ್ಯಾಟರ್ಜಿ ಫಾರ್ ಬ್ಯಾಲೆನ್ಸ್ಡ್ ಡೆವಲಪ್‌ಮೆಂಟ್” ಎಂಬ ಮಹಾಪ್ರಬಂಧಕ್ಕೆ ಭೂಗೋಳಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಇವರಿಗೆ ಪಿ.ಎಚ್‌ಡಿ ಪದವಿಯನ್ನು ಘೋಷಿಸಿದೆ. ಇವರಿಗೆ ಭೋಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಲ್.ಟಿ.ನಾಯಕ ಅವರು ಮಾರ್ಗದರ್ಶನ ಮಾಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್‌ಡಿ ಪದವಿ ಪ್ರಧಾನ ಮಾಡಿದಕ್ಕೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸ್ನೇಹಿತರು, ಹಕ್ಕಿಗೂಡು ಬಳಗ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

