ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಆರಾದ್ಯ ದೇವತೆ ಶ್ರೀ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಅಲಂಕೃತ ದೇವಿಯ ಉಡಿ ತುಂಬುವ ಕಾರ್ಯಕ್ರಮ ವಿಜ್ರಂಬಣೆಯಿಂದ ನಡೆಯಿತು.
ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹಾಗೂ ಓಂಕಾರ ಮಹಾರಾಜರ ನೇತ್ರತ್ವದಲ್ಲಿ ಮುಂಜಾನೆ ವಿಶೇಷ ಪೂಜೆಯೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ನೂರಾರು ಜನ ಮಹಿಳೆಯರಿಂದ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು, ಮದ್ಯಾಹ್ನ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಿತು.
ಇದೇ ಸಂಧರ್ಬದಲ್ಲಿ ಪ್ರಭು ಮಹಾಸ್ವಾಮಿಗಳು ಹಾಗೂ ಓಂಕಾರ ಮಹಾರಾಜರನ್ನು ಗ್ರಾಮದ ಪ್ರಮುಖರು, ವಿಶ್ವಕರ್ಮ ಸಮಾಜಬಾಂಧವರಿಂದ ಸತ್ಕರಿಸಿ ಗೌರವಿಸಲಾಯಿತು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪರಪ್ಪಾ ಪಾಲಭಾವಿ, ಪ್ರಭು ನೇಸೂರ, ಈಶ್ವರ ಬಡಿಗೇರ, ಪ್ರಕಾಶ ಪೂಜಾರಿ, ಪ್ರಕಾಶ ಬಡಿಗೇರ, ಕಾಳು ಬಡಿಗೇರ ಸೇರಿದಂತೆ ಹಲವಾರು ಜನ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

