Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕ್ರೀಡೆಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡಾಭಿಮಾನಿಗಳ ಬಳಗ ಹಾಗೂ ಸ್ನೇಹಿತರಿಂದ ಆರ್ಥಿಕ ಸಹಾಯ ಮತ್ತು ತಾಲೂಕು ಆಡಳಿತ ವತಿಯಿಂದ ತನು,ಮನ, ಧನದಿಂದ ಸಹಾಯ-ಸಹಕಾರ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಹೊರವಲಯ ಕಲಕೇರಿ ರಸ್ತೆಯಲ್ಲಿರುವ ಎಲೈಟ್ ಪಪೂ ಕಾಲೇಜಿನಲ್ಲಿ ಶಾಲಾ ಶಿಕ್ಷಣ(ಪದವಿಪೂರ್ವ) ಇಲಾಖೆ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಗರದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಜರಗುತ್ತಿರುವುದು ಹೆಮ್ಮೆಯ ಸಂಗತಿ. ಪಂದ್ಯಾವಳಿ ಯಶಸ್ಸಿಗಾಗಿ ಸಹಕಾರ ನೀಡುತ್ತೇನೆ. ನಮ್ಮ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಿಂದ ಕುಸ್ತಿ ಪಟುಗಳು ಸೇರಿದಂತೆ ಎಲ್ಲರಿಗೂ ಮೂರು ದಿನಗಳ ಕಾಲ ಉಪಹಾರ, ಊಟದ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ಭರವಸೆ ನೀಡಿದರು.ಈ ವೇಳೆ ವಿಜಯಪುರ ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಶಾಂತು ದುರ್ಗಿ ಪ್ರಾಸ್ತಾವಿಕ ಮಾತನಾಡಿ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪದವಿ-ಪೂರ್ವ ಕಾಲೇಜುಗಳಿಂದ ೯೦೦ ಕುಸ್ತಿಪಟುಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾರಾಷ್ಟçದ ಜತ್ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಅಕ್ಟೋಬರ್ ೧೭ ರಿಂದ ೨೩ರವರೆಗೆ ಜರುಗುವ ಶ್ರೀ ಮಾಳಿಂಗರಾಯ ದೇವರ ಜಾತ್ರೆ ಅಂಗವಾಗಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಚಡಚಣ, ಸಿಂದಗಿ, ಮುದ್ದೇಬಿಹಾಳ, ತಾಳಿಕೊಟೆ ಹಾಗೂ ಬಸವನಬಾಗೇವಾಡಿ ಬಸ್ ನಿಲ್ದಾಣದಿಂದ ಹೆಚ್ಚುವರಿ ವಿಶೇಷ ಬಸ್ ಕಾರ್ಯಾಚರಣೆ ಮಾಡಲಾಗುವುದು.ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ-೧: ಮೊ: ೭೭೬೦೯೯೨೨೬೩, ವಿಜಯಪುರ-೨ ಮೊ: ೭೭೬೦೯೯೨೨೬೪, ಇಂಡಿ ಮೊ: ೭೭೬೦೯೯೨೨೬೫, ಸಿಂದಗಿ ಮೊ: ೭೭೬೦೯೯೨೨೬೬, ಮುದ್ದೇಬಿಹಾಳ ಮೊ: ೭೭೬೦೯೯೨೨೬೭, ತಾಳಿಕೋಟ ಮೊ: ೭೭೬೦೯೯೨೨೬೮, ಬಸವನ ಬಾಗೇವಾಡಿ ಮೊ: ೭೭೬೦೯೯೨೨೬೯, ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂ: ೦೮೩೫೨-೨೫೧೩೪೪ ಹಾಗೂ ಮೊ: ೭೭೬೦೯೯೨೨೫೮ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿದ್ದು, ಞsbಜb.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೊಟೆಲ್ ಉದ್ಯಮ, ಟ್ಯಾಕ್ಸಿ ಕೈಗೊಳ್ಳಲು ೧ ಲಕ್ಷ ರೂ ಗಳಿಂದ ೨ ಲಕ್ಷ ರೂ. ವರೆಗೂ ಸಾಲ ಸೌಲಭ್ಯ ಒದಗಿಸಲಾಗುವುದು.ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮಹಿಳೆಯರಿಗೆ ಶೇ.೩೩ರಷ್ಟು ಹಾಗೂ ವಿಶೇಷಚೇತನರಿಗೆ ಶೇ ೫ರಷ್ಟು ಮೀಸಲಾತಿ ನೀಡಲಾಗುವುದು. ಅರ್ಜಿದಾರರ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಹಾಗೂ ಬ್ಯಾಂಕ್ ಖಾತೆ ಸೀಡ್ ಆಗಿರಬೇಕು.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೮೭೬೨೨೪೯೨೩೦ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿ ವಿಶ್ವ ಶಾಂತಿಯ ಸಂದೇಶ ಸಾರಿದ ವಿಜಯಪುರದ ಹೆಮ್ಮೆಯ ಕುಮಾರಿ ಶಿಫಾ ಜಮಾದಾರ ಅವರಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ಆನಂದ, ವಿಜಯಪುರದಲ್ಲಿ ಅನೇಕ ದಿನಗಳಿಂದಲೂ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಹೆಸರು ಮಾಡಿದ್ದ ಶಿಫಾ ಅವರು ಯುವತಿಯರ ಆರೋಗ್ಯ, ಸ್ವಚ್ಚತೆ ಜಾಗೃತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು, ಈಗ ರಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಶಾಂತಿಯ ವಿಷಯವಾಗಿ, ಭಾರತೀಯ ಸಂಸ್ಕೃತಿಯ ಬೆಳಕಿನಲ್ಲಿ ವಿಶ್ವಶಾಂತಿಯ ಸಂದೇಶವನ್ನು ನೀಡುವ ಮೂಲಕ ವಿಜಯಪುರದ ಕೀರ್ತಿ ಹೆಚ್ಚಿಸಿರುವುದು ಸಂತೋಷ ತರಿಸಿದೆ ಎಂದರು.ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಎ-ಐ ತಂತ್ರಜ್ಞಾನ…
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಡಚಣ ಬ್ಯಾಂಕ್ ದರೋಡೆ ಪ್ರಕರಣ | ವಿಜಯಪುರ ಪೋಲಿಸರಿಂದ ಭರ್ಜರಿ ಕಾರ್ಯಾಚರಣೆ | ಹೊರ ರಾಜ್ಯದ ನಾಲ್ವರ ಬಂಧನ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಎಸ್‌ಬಿಐ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾದ ಮಹಾರಾಷ್ಟ್ರ-ಬಿಹಾರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಡಿಜಿಪಿ (ಕಾ.ಸು) ಆರ್.ಹಿತೇಂದ್ರ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣ ಬೇಧಿಸುವಲ್ಲಿ ವಿಜಯಪುರ ಪೊಲೀಸರು ಉತ್ತಮ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಾದ ಬಿಹಾರದ ಸಮಸ್ತಿಪುರ ನಿವಾಸಿಗಳಾದ ರಾಕೇಶ ಕುಮಾರ ಶಿವಾಜಿ ಸಹಾನಿ (೨೨), ರಾಜಕುಮಾರ ರಾಮಲಾಲ್ ಪಾಸ್ವಾನ (೨೧) ಹಾಗೂ ರಕ್ಷಕುಮಾರ ಮದನ ಮಾತೋ (೨೧) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ಮೂಲದ ಆರೋಪಿಯ ಹೆಸರು ಪೊಲೀಸರು ತನಿಖೆಯ ದೃಷ್ಟಿಯಿಂದ ಆತನ ಹೆಸರು ಬಹಿರಂಗೊಳಿಸಲು ಸಧ್ಯ ಆಗದು ಎಂದರು.ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಒಟ್ಟಾರೆಯಾಗಿ ೯.೦೧ ಕೆಜಿ ಬಂಗಾರ ಹಾಗೂ ೮೬,೩೧,೨೨ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಉಳಿದ ಚಿನ್ನಾಭರಣ, ನಗದು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಪ್ರಕಟಿಸಿರುವ ಡಾ.ಲಕ್ಷ್ಮಣ ವಿ.ಎ ಅವರ ಕಾಯುನ್ ಬೂತ್ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೨೩ ನೇ ಸಾಲಿನ ಕಾವ್ಯ ಪ್ರಕಾರದ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಹರ್ಷ ತಂದಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆಯುತ್ತಿರುವುದು ಇದು ೨ನೇ ಬಾರಿ, ಕಳೆದ ಸಲವೂ ವಿಮರ್ಶಾ ಪ್ರಕಾರದಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.ಪ್ರಕಾಶನವು ಕಳೆದ ಎಂಟು ವರ್ಷಗಳಲ್ಲಿ ನಾಡಿನ ಎಲ್ಲ ಭಾಗದ ಲೇಖಕರ ೧೭೦ ಕೃತಿಗಳನ್ನು ಪ್ರಕಟಿಸಿದ್ದು ಪ್ರಶಂಸನಾರ್ಹ, ಈ ಭಾಗದ ಸಾಂಸ್ಕೃತಿಕ ಲೋಕಕ್ಕೆ ಬಹು ದೊಡ್ಡ ಕೊಡುಗೆ ಬೆರಗು ಪ್ರಕಾಶನ ನೀಡಿದೆ
ಇಂದು (ಅಕ್ಟೋಬರ-೧೦, ಶುಕ್ರವಾರ) ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಗೌತುಮ ಬುದ್ಧ ಅವರು, “ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ. ಸಂತೃಪ್ತಿಯೇ ಶ್ರೇಷ್ಠ ಸಂಪತ್ತು. ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ” ಎಂದು ಹೇಳಿದ್ದಾರೆ. ಮಾನಸಿಕ ಆರೋಗ್ಯ ಎಂದರೆ ಮನಸ್ಸಿನ ಆರೋಗ್ಯ, ಮನಸ್ಸು ಆರೋಗ್ಯದಿಂದಿರುವುದು ದು ಹೇಳಬಹುದು. ಒಬ್ಬ ವ್ಯಕ್ತಿ ತನ್ನೊಂದಿಗೆ ಮತ್ತು ಸುತ್ತಮುತ್ತಲಿನ ಪರಿಸರದೊಂದಿಗೆ ಹೊಂದಾಣಿಕೆಯ ಮನೋಭಾವವನ್ನು ಹೊಂದಿರುವ ಸ್ಥಿತಿಯೇ ಮಾನಸಿಕ ಆರೋಗ್ಯವಾಗಿದೆ.ಖ್ಯಾತ್ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರೀಡ್ ಅವರು, “ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ದಾರಿ ಒಂದೇ ಅದುವೇ ಆತ್ಮವಿಶ್ವಾಸ” ಎಂದು ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ ೧೦ ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಪ್ರಮುಖ ಕಾರಣವಾಗಿದೆ. ಶಾಲೆೆ-ಕಾಲೇಜು ಮತ್ತು ಸಾರ್ವಜನಿಕವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಆರೋಗ್ಯ ಶಿಕ್ಷಣ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಜಗದ್ಗುರು ತೊಂಟದಾರ್ಯ ವಿದ್ಯಾಪೀಠಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿಯಲ್ಲಿ 2006-2007ನೇ ಸಾಲಿನ ಎಸ್, ಎಸ್, ಎಲ್, ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಜರುಗಿತು.ಗುರು – ಶಿಷ್ಯರ ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾರ್ಥಿಗಳು ತೋರಿಸಿಕೊಟ್ಟರು, ಸುಮಾರು 4 ಗಂಟೆಗಳಿಗೂ ಹೆಚ್ಚು ಸಮಯ ನಡೆದ ಗುರುವಂದನಾ ಕಾರ್ಯಕ್ರಮ ತಮಗೆ ಪಾಠ ಕಲಿಸಿದ ಪ್ರೌಢಶಾಲಾ ಗುರುಗಳನ್ನು ವೇದಿಕೆಗೆ ಕರೆತಂದು ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳ ಸಮಾಗಮಕ್ಕೂ ಸಾಕ್ಷಿಯಾಗಿತ್ತು.ಸಾನಿಧ್ಯ ವೀರಬಸವ ದೇವರು ಹಿರೇಮಠ ಆಸಂಗಿˌ ಡಾ|| ಎ. ಜೆ. ನ್ಯಾಮಗೌಡ ಅಧ್ಯಕ್ಷರು ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿ,ಉದ್ಘಾಟಕರಾದ ಪಿ. ಬಿ. ದಾನಗೌಡ ಉಪಾಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಶಿ,ಹ, ಸ್ಮಾ, ಪ್ರೌಢ ಶಾಲೆ ಚಿಕ್ಕಪಡಸಲಗಿ, ಮುಖ್ಯ ಅತಿಥಿಗಳಾಗಿ ಪಿ. ಎಮ್. ಪಾಟೀಲ ನಿವೃತ್ತ ಮುಖ್ಯ ಪಾಧ್ಯಾಯರು, ಬಿ. ಎಲ್.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿವಿಧ ಜಾತಿಯ ಅರಣ್ಯ, ತೋಟಗಾರಿಕೆ ಹಾಗೂ ಇತರೆ ಸಸಿಗಳನ್ನು ನೆಟ್ಟಿರುವ ರೈತರಿಗೆ ಕಾರ್ಬನ್ ಕ್ರೆಡಿಟ್ ಕಾರ್ಯಕ್ರಮದಡಿ ಪ್ರೋತ್ಸಾಹ ಧನಕ್ಕಾಗಿ ಆಸಕ್ತ ರೈತರಿಂದ ಆರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (IRD) ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ.ಬಾಬು ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕದಲ್ಲಿ ವಿವಿಧ ಜಾತಿಯ ತೆಂಗು, ದಾಳಿಂಬೆ, ಸಾಗುವಾನಿ, ಮಹಾಗಣಿ, ಶ್ರೀಗಂಧ, ಬೇವು, ಮಾವು, ಪೇರು, ನುಗ್ಗೆ, ನೇರಳೆ, ಹಲಸು, ಬಾರಿ, ನಿಂಬೆ, ಹುಣಸೆ, ನೆಲ್ಲಿ, ಗೋಡಂಬಿ, ಸೀತಾಫಲ, ಬೆಣ್ಣೆಹಣ್ಣು, ಎಣ್ಣೆ ಪಾಮ ಮುಂತಾದ ತೋಟಗಾರಿಕೆ ಮತ್ತು ಇತರೆ ಸಸಿಗಳನ್ನು ನೆಟ್ಟಿರುವ ರೈತರಿಗೆ ಪ್ರೋತ್ಸಾಹಿಸಲು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ವರಾಹ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರೈತರಿಗೆ ಪ್ರೋತ್ಸಾಹ ಧನ ನೀಡುವ ಕಾರ್ಬನ್ ಕ್ರೇಡಿಟ್ ಕಾರ್ಯಕ್ರಮದಡಿ ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಪ್ರೋತ್ಸಾಹ ಧನ ಪಡೆಯಲಿಚ್ಚಿಸುವ ಆಸಕ್ತ ರೈತರು ಮೇಲಿನ…
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ನೇತೃತ್ವದಲ್ಲಿ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಮಾಜಿಕ-ಆರ್ಥಿಕ ಸಮೀಕ್ಷೆ ಸಮಯದಲ್ಲಿ ನಡೆಯುತ್ತಿರುವ ಅನಿಯಮಿತ ತಪ್ಪು ಮಾಹಿತಿಗಳ ದಾಖಲಾತಿ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.ಈ ಮನವಿ ಪತ್ರದಲ್ಲಿ ಸಮೀಕ್ಷಾ ಸಿಬ್ಬಂದಿಗಳು ಕೇವಲ 4–5 ಪ್ರಶ್ನೆಗಳನ್ನು ಕೇಳಿ ಉಳಿದ ಮಾಹಿತಿಯನ್ನು ಸ್ವಯಂ ಭರ್ತಿ ಮಾಡಿ ಫಾರ್ಮ್ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವರ ಮೊಬೈಲ್‌ಗಳಿಗೆ OTP ಬಾರದಿದ್ದರೂ ಅವರ ಮಾಹಿತಿಯನ್ನು ಸೇರಿಸಲಾಗುತ್ತಿಲ್ಲ, ಆದರೆ ಆಧಾರ್ ನೋಂದಣಿ ಸಂಖ್ಯೆಯ ಮೂಲಕ OTP ಇಲ್ಲದೇ ಸಹ ಸೇರಿಸಬಹುದು ಎಂಬುದನ್ನು ಉಲ್ಲೇಖಿಸಲಾಗಿದೆ. 6 ವರ್ಷಕ್ಕಿಂತ ಕಡಿಮೆ ಮಕ್ಕಳನ್ನು ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಸೇರಿಸಬಹುದಾದರೂ ಅದನ್ನೂ ಕಡೆಗಣಿಸಲಾಗುತ್ತಿದೆ. ಸಮೀಕ್ಷಾ ಸಿಬ್ಬಂದಿಗೆ ಪ್ರತಿಯೊಬ್ಬರ ಪ್ರಶ್ನೆಗಳನ್ನು ಸಂಪೂರ್ಣವಾಗಿ ಕೇಳಿ ಸರಿಯಾದ ಮಾಹಿತಿಯನ್ನು ಮಾತ್ರ ದಾಖಲಿಸಲು ಹಾಗೂ ದಿನನಿತ್ಯದ ಗುರಿಗಳನ್ನು…
