ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಪ್ರಕಟಿಸಿರುವ ಡಾ.ಲಕ್ಷ್ಮಣ ವಿ.ಎ ಅವರ ಕಾಯುನ್ ಬೂತ್ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೨೩ ನೇ ಸಾಲಿನ ಕಾವ್ಯ ಪ್ರಕಾರದ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಹರ್ಷ ತಂದಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.
ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆಯುತ್ತಿರುವುದು ಇದು ೨ನೇ ಬಾರಿ, ಕಳೆದ ಸಲವೂ ವಿಮರ್ಶಾ ಪ್ರಕಾರದಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರಕಾಶನವು ಕಳೆದ ಎಂಟು ವರ್ಷಗಳಲ್ಲಿ ನಾಡಿನ ಎಲ್ಲ ಭಾಗದ ಲೇಖಕರ ೧೭೦ ಕೃತಿಗಳನ್ನು ಪ್ರಕಟಿಸಿದ್ದು ಪ್ರಶಂಸನಾರ್ಹ, ಈ ಭಾಗದ ಸಾಂಸ್ಕೃತಿಕ ಲೋಕಕ್ಕೆ ಬಹು ದೊಡ್ಡ ಕೊಡುಗೆ ಬೆರಗು ಪ್ರಕಾಶನ ನೀಡಿದೆ