ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಜಗದ್ಗುರು ತೊಂಟದಾರ್ಯ ವಿದ್ಯಾಪೀಠ
ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿಯಲ್ಲಿ 2006-2007ನೇ ಸಾಲಿನ ಎಸ್, ಎಸ್, ಎಲ್, ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಜರುಗಿತು.
ಗುರು – ಶಿಷ್ಯರ ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾರ್ಥಿಗಳು ತೋರಿಸಿಕೊಟ್ಟರು, ಸುಮಾರು 4 ಗಂಟೆಗಳಿಗೂ ಹೆಚ್ಚು ಸಮಯ ನಡೆದ ಗುರುವಂದನಾ ಕಾರ್ಯಕ್ರಮ ತಮಗೆ ಪಾಠ ಕಲಿಸಿದ ಪ್ರೌಢಶಾಲಾ ಗುರುಗಳನ್ನು ವೇದಿಕೆಗೆ ಕರೆತಂದು ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳ ಸಮಾಗಮಕ್ಕೂ ಸಾಕ್ಷಿಯಾಗಿತ್ತು.
ಸಾನಿಧ್ಯ ವೀರಬಸವ ದೇವರು ಹಿರೇಮಠ ಆಸಂಗಿˌ ಡಾ|| ಎ. ಜೆ. ನ್ಯಾಮಗೌಡ ಅಧ್ಯಕ್ಷರು ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿ,
ಉದ್ಘಾಟಕರಾದ ಪಿ. ಬಿ. ದಾನಗೌಡ ಉಪಾಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಶಿ,ಹ, ಸ್ಮಾ, ಪ್ರೌಢ ಶಾಲೆ ಚಿಕ್ಕಪಡಸಲಗಿ, ಮುಖ್ಯ ಅತಿಥಿಗಳಾಗಿ ಪಿ. ಎಮ್. ಪಾಟೀಲ ನಿವೃತ್ತ ಮುಖ್ಯ ಪಾಧ್ಯಾಯರು, ಬಿ. ಎಲ್. ಜಾಲೋಜಿ ಪ್ರಭಾರ ಮುಖ್ಯ ಪಾಧ್ಯಾಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.