ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ನೇತೃತ್ವದಲ್ಲಿ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಮಾಜಿಕ-ಆರ್ಥಿಕ ಸಮೀಕ್ಷೆ ಸಮಯದಲ್ಲಿ ನಡೆಯುತ್ತಿರುವ ಅನಿಯಮಿತ ತಪ್ಪು ಮಾಹಿತಿಗಳ ದಾಖಲಾತಿ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ
ಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಮನವಿ ಪತ್ರದಲ್ಲಿ ಸಮೀಕ್ಷಾ ಸಿಬ್ಬಂದಿಗಳು ಕೇವಲ 4–5 ಪ್ರಶ್ನೆಗಳನ್ನು ಕೇಳಿ ಉಳಿದ ಮಾಹಿತಿಯನ್ನು ಸ್ವಯಂ ಭರ್ತಿ ಮಾಡಿ ಫಾರ್ಮ್ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವರ ಮೊಬೈಲ್‌ಗಳಿಗೆ OTP ಬಾರದಿದ್ದರೂ ಅವರ ಮಾಹಿತಿಯನ್ನು ಸೇರಿಸಲಾಗುತ್ತಿಲ್ಲ, ಆದರೆ ಆಧಾರ್ ನೋಂದಣಿ ಸಂಖ್ಯೆಯ ಮೂಲಕ OTP ಇಲ್ಲದೇ ಸಹ ಸೇರಿಸಬಹುದು ಎಂಬುದನ್ನು ಉಲ್ಲೇಖಿಸಲಾಗಿದೆ. 6 ವರ್ಷಕ್ಕಿಂತ ಕಡಿಮೆ ಮಕ್ಕಳನ್ನು ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಸೇರಿಸಬಹುದಾದರೂ ಅದನ್ನೂ ಕಡೆಗಣಿಸಲಾಗುತ್ತಿದೆ. ಸಮೀಕ್ಷಾ ಸಿಬ್ಬಂದಿಗೆ ಪ್ರತಿಯೊಬ್ಬರ ಪ್ರಶ್ನೆಗಳನ್ನು ಸಂಪೂರ್ಣವಾಗಿ ಕೇಳಿ ಸರಿಯಾದ ಮಾಹಿತಿಯನ್ನು ಮಾತ್ರ ದಾಖಲಿಸಲು ಹಾಗೂ ದಿನನಿತ್ಯದ ಗುರಿಗಳನ್ನು ವಾಸ್ತವಿಕವಾಗಿ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಹಮೀದ್ ಮನಗೊಳಿ , ಜಲನಗರ ಅಧ್ಯಕ್ಷ ಸರಫರಾಜ್ ಅಗಸಬಾಲ್, ಜನರಲ್ ಸೆಕ್ರೆಟರಿ ಮುನ್ನಾ ಬಕ್ಷಿ, ಕುಲದೀಪ್ ಸಿಂಗ್, ಆಬಿದ್ ಇಲ್ಕಲ್, ಪೀರಅಹ್ಮದ್ ಹಡಗಳಿ , ಮಸ್ತಾನ್ ಹರಿಯಾಲ್, ಉಮರ್ ಅಲೀಷಾ ಮಕಂದಾರ್, ಅಝರ್ ಗಂಗನಲ್ಲಿ , ಹಾಗೂ ನಗರ ವಾರ್ಡ್ ಮತ್ತು ಬ್ಲಾಕ್ ಅಧ್ಯಕ್ಷರು ಉಪಸ್ಥಿತರಿದ್ದರು.